ರಾಜ್ಯ

ನಿಮ್ಮನ್ನೆಲ್ಲಾ ಸಂಹಾರ ಮಾಡಿಯೇ ಮಾಡ್ತೇವೆ! ಮಾಜಿ ಸಿಎಂ ಕುಮಾರಸ್ವಾಮಿ, ನಿಜಗುಣಾನಂದ ಶ್ರೀ ಸೇರಿ 15 ಮಂದಿಗೆ ಜೀವ ಬೆದರಿಕೆ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬೆಳಗಾವಿ ಬೈಲೂರು ಮಠದ ನಿಜಗುಣಾನಂದ ಶ್ರೀ,ಗಳು ಸೇರಿದಂತೆ ಹದಿನೈದು ಮಂದಿಗೆ ಅಪರಿಚಿತರಿನಿಂದ ಜೀವ ಬೆದರಿಕೆ ಪತ್ರ ಬಂದಿದೆ ಎಂದು ವರದಿಯಾಗಿದೆ.

ನಿಮ್ಮನ್ನೆಲ್ಲಾ ಸಂಹಾರ ಮಾಡಿಯೇ ಮಾಡ್ತೇವೆ! ಮಾಜಿ ಸಿಎಂ ಕುಮಾರಸ್ವಾಮಿ, ನಿಜಗುಣಾನಂದ ಶ್ರೀ ಸೇರಿ 15 ಮಂದಿಗೆ ಜೀವ ಬೆದರಿಕೆ
ಮಾಜಿ ಸಿಎಂ ಕುಮಾರಸ್ವಾಮಿ, ನಿಜಗುಣಾನಂದ ಶ್ರೀ
Published On :

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬೆಳಗಾವಿ ಬೈಲೂರು ಮಠದ ನಿಜಗುಣಾನಂದ ಶ್ರೀ,ಗಳು ಸೇರಿದಂತೆ ಹದಿನೈದು ಮಂದಿಗೆ ಅಪರಿಚಿತರಿನಿಂದ ಜೀವ ಬೆದರಿಕೆ ಪತ್ರ ಬಂದಿದೆ ಎಂದು ವರದಿಯಾಗಿದೆ.

ಕುಮಾರಸ್ವಾಮಿ, ನಿಜಗುಣಾನಂದ ಶ್ರೀ, ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ದಿನೇಶ್ ಅಮೀನ್ ಮಟ್ಟು, ಪ್ರಕಾಶ್ ರೈ, ಬಿಟಿ ಲಲಿತಾ ನಾಯಕ್, ಬೃಂದಾ ಜಾರಟ್, ಮತ್ತೂ ಅನೇಕರಿಗೆ ಇದೇ ಜನವರಿ ೨೯ರಂದು "ಸಂಹಾರ" ಮಾಡುವೆನೆಂದು ದಾವಣಗೆರೆಯಿಂದ ಅಪರಿಚಿತನೊಬ್ಬ ಪತ್ರ ರವಾನಿಸಿದ್ದಾನೆ.

ನಿಜಗುಣಾನಂದ ಶ್ರೀಗಳಿಗೆ ಬಂದ ಪತ್ರದಲ್ಲಿ "ಶ್ರೀಗಳೇ ನಿಮ್ಮನ್ನೂ, ನಿಮ್ಮೊಡನಿರುವ ಧರ್ಮದ್ರೋಹಿಗಳನ್ನು ದೇಶದ್ರೋಹಿಗಳನ್ನು ಇದೇ ಜನವರಿ ೨೯ರಂದು ಸಂಹಾರ ಮಾಡಲು ಮಹೂರ್ತ ನಿಗದಿಯಾಗಿದೆ. ನಿಮ್ಮ ಅಂತಿಮ ಯಾತ್ರೆಗೆ ಸಿದ್ದವಾಗಿರಿ, ನೀವು ಮಾತ್ರವಲ್ಲ ಸ್ವಾಮಿಗಳೇ ನಿಮ್ಮೊಡನೆ ಅಂತಿಮ ಯಾತ್ರೆಗೆ ಇವರನ್ನೂ ಸಿದ್ದಗೊಳಿಸಿ, ಇವರೆಲ್ಲರಿಗೆ ನೀವೇ ಹೇಳಿರಿ" ಎಂದು ಹದಿನೈದು ಮಂದಿಯ ಹೆಸರನ್ನು ಸೂಚಿಸಲಾಗಿದೆ.

ಇದಲ್ಲದೆ ಕಡೆಯಲ್ಲಿ ಇವರನ್ನೆಲ್ಲಾ ಸಂಹಾರ ಮಾಡಿಯೇ ಮಾಡುವೆವು ಎಂದೂ ಸೂಚಿಸಿದೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.