ರಾಜ್ಯ

ತ್ಯಾಜ್ಯ ಮರುಬಳಕೆಯಿಂದ ಪೆನ್ನು ತಯಾರಿಸಿ ಪ್ರಶಸ್ತಿ ಗೆದ್ದ ಬೆಂಗಳೂರಿನ ಬಾಲಕ 

ಸ್ವೀಡನ್ ನ ಹವಾಮಾನ ಕಾರ್ಯಕರ್ತ ಗ್ರೆಟಾ ಥನ್ ಬರ್ಗ್ ಬಗ್ಗೆ ನೀವೆಲ್ಲಾ ಕೇಳಿರಬಹುದು. ಹವಾಮಾನ ಬದಲಾವಣೆ ಮತ್ತು ಪರಿಸರ ರಕ್ಷಣೆ ಕುರಿತು ಜಗತ್ತಿನಾದ್ಯಂತ ಸುತ್ತಾಡಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ.

ತ್ಯಾಜ್ಯ ಮರುಬಳಕೆಯಿಂದ ಪೆನ್ನು ತಯಾರಿಸಿ ಪ್ರಶಸ್ತಿ ಗೆದ್ದ ಬೆಂಗಳೂರಿನ ಬಾಲಕ 
Published On :

ಬೆಂಗಳೂರು:ಸ್ವೀಡನ್ ನ ಹವಾಮಾನ ಕಾರ್ಯಕರ್ತ ಗ್ರೆಟಾ ಥನ್ ಬರ್ಗ್ ಬಗ್ಗೆ ನೀವೆಲ್ಲಾ ಕೇಳಿರಬಹುದು. ಹವಾಮಾನ ಬದಲಾವಣೆ ಮತ್ತು ಪರಿಸರ ರಕ್ಷಣೆ ಕುರಿತು ಜಗತ್ತಿನಾದ್ಯಂತ ಸುತ್ತಾಡಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ.


ಇಲ್ಲಿ ಬೆಂಗಳೂರಿನ 9 ವರ್ಷದ ಬಾಲಕನೊಬ್ಬ ಪ್ಲಾಸ್ಟಿಕ್ ಮುಕ್ತ ಜೀವನ ಮತ್ತು ತ್ಯಾಜ್ಯ ಮರುಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಯತ್ನ ಮಾಡುತ್ತಿದ್ದಾನೆ.


ಹೇಗೆಂದು ಕೇಳುತ್ತೀರಾ, ಶರನವ್ಯ ಎಸ್ ಶ್ರೀಶ್ ಎಂಬ ಬಾಲಕ ಮರದ ಪೆನ್ನು ತಯಾರಿಸಿದ್ದಾನೆ. ಅದರ ಹೊರಗಿನ ಭಾಗ ಮಾಡಿದ್ದು ಮಣ್ಣು ಮತ್ತು ಪೆನ್ಸಿಲ್ ಸಿಪ್ಪೆಗಳಿಂದ. ಹೀಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿನೂತವಾಗಿ ಮಾಡಿದ ಅನ್ವೇಷಣೆ ಗುರುತಿಸಿ ಅವಿಷ್ಕಾರ್ ರಾಷ್ಟ್ರೀಯ ಮ್ಯಾಕಥಾನ್ ಪ್ರಶಸ್ತಿ ಇವನಿಗೆ ಲಭಿಸಿದೆ. ಕಳೆದ 12ರಂದು ದೆಹಲಿಯಲ್ಲಿ ನಡೆದ ಮಕ್ಕಳ ಹವಾಮಾನ ಸಮ್ಮೇಳನದಲ್ಲಿ ತನ್ನ ವಿನೂತನ ಆವಿಷ್ಕಾರವನ್ನು ಶರನವ್ಯ ಪ್ರದರ್ಶನ ಮಾಡಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.