ಎರಡು ವರ್ಷದಿಂದ ಸಹೋದರ ಆದಿತ್ಯ ರಾವ್ ಸಂಪರ್ಕದಲ್ಲಿಲ್ಲ: ಅಕ್ಷತ್ ರಾವ್
ತಮ್ಮ ಸಹೋದರ ಆದಿತ್ಯ ರಾವ್, ಕಳೆದ 2 ವರ್ಷಗಳಿಂದ ಕುಟುಂಬದ ಸಂಪರ್ಕದಲ್ಲಿ ಇಲ್ಲ ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಸಹೋದರ ಅಕ್ಷತ್ ರಾವ್ ತಿಳಿಸಿದ್ದಾರೆ.

ಮಂಗಳೂರು: ತಮ್ಮ ಸಹೋದರ ಆದಿತ್ಯ ರಾವ್, ಕಳೆದ 2 ವರ್ಷಗಳಿಂದ ಕುಟುಂಬದ ಸಂಪರ್ಕದಲ್ಲಿ ಇಲ್ಲ ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಸಹೋದರ ಅಕ್ಷತ್ ರಾವ್ ತಿಳಿಸಿದ್ದಾರೆ.
ಆದಿತ್ಯ ರಾವ್ ಪೊಲೀಸರಿಗೆ ಶರಣಾದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಗೆ ಇಬ್ಬರು ಗಂಡು ಮಕ್ಕಳು. ಆದಿತ್ಯ ಎಂಬಿಎ, ಬಿಇ ಪದವಿಧರನಾಗಿದ್ದಾನೆ. ಕಳೆದ 2 ವರ್ಷಗಳಿಂದ ನಮ್ಮ ಕುಟುಂಬ ಆತನಿಂದ ಸಂಪರ್ಕ ಕಳೆದುಕೊಂಡಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಹಾಕುವುದಾಗಿ ಹುಸಿ ಕರೆ ಮಾಡಿದ್ದಾಗಲೇ ಆತನಿಗೆ ಬುದ್ಧಿವಾದ ಹೇಳಿದ್ದೆವು. ನಮ್ಮ ತಂದೆ ಹಲವು ಆತನನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಆತ ಸರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅವನ ಈ ಕೃತ್ಯಕ್ಕೆ ನಾವು ಹೊಣೆಗಾರರಲ್ಲ. ಅಲ್ಲದೇ, ಈ ಕುರಿತು ತಿಳಿದುಕೊಳ್ಳುವ ಯಾವುದೇ ಆಸಕ್ತಿಯೂ ನಮಗಿಲ್ಲ. ಹುಸಿ ಬಾಂಬ್ ಕರೆಗೆ ಸಂಬಂಧಿಸಿದಂತೆ ಆತ ಜೈಲಿಗೆ ಸೇರಿದ್ದ, ಜಾಮೀನು ಕೊಡಿಸುವ ಯಾವುದೇ ಪ್ರಯತ್ನ ನಾವು ಮಾಡಿಲ್ಲ. ಕೊನೆಯದಾಗಿ ನಮ್ಮ ತಾಯಿ ತೀರಿಹೋದಾಗ ವಿಷಯ ತಿಳಿಸಲು ಕರೆ ಮಾಡಿದ್ದು ಅಷ್ಟೇ. ನಮ್ಮ ತಂದೆ ಆತ ಮನೆಗೆ ಬರುವುದು ಬೇಡವೆಂದು ಹೇಳಿದ್ದರು. ಅಂದಿನಿಂದ ಆತ ಮನೆಗೆ ಬಂದಿಲ್ಲ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


