ಇಂಧನ ಕ್ಷಮತೆಗಾಗಿ ಕೆಎಸ್‌ಆರ್‌ಟಿಸಿಯ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳಿಗೆ ಪ್ರಶಸ್ತಿ
ಈ ಬಾರಿ ಇಂಧನ ಕ್ಷಮತೆಗಾಗಿ ಕೆಎಸ್‌ಆರ್‌ಟಿಸಿಯ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳಿಗೆ ಪ್ರಶಸ್ತಿ ಸಂದಿದೆ.

ಬೆಂಗಳೂರು: ಕೇಂದ್ರ ಸರ್ಕಾರದ ಪೆಟ್ರೊಲಿಯಂ ಮತ್ತು ನೈಸಗಿಕ ಅನಿಲ ಸಚಿವಾಲಯದಡಿ ಕರ್ತವ್ಯ ನಿರ್ವಹಿಸುವ ಸಂಸ್ಥೆ ಹಾಗೂ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆಯು ಪ್ರತಿ ವರ್ಷ ದೇಶದಾದ್ಯಂತ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಇಂಧನ ಕ್ಷಮತಾ ಮಹೋತ್ಸವ ಕಾರ್ಯಕ್ರಮ ಏರ್ಪಡಿಸುತ್ತಿದೆ.
ಈ ಬಾರಿ ಇಂಧನ ಕ್ಷಮತೆಗಾಗಿ ಕೆಎಸ್‌ಆರ್‌ಟಿಸಿಯ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳಿಗೆ ಪ್ರಶಸ್ತಿ ಸಂದಿದೆ.
ಅಕ್ಟೋಬರ್ - ೨೦೧೮ ರಿಂದ ಸೆಪ್ಟೆಂಬರ್-೨೦೧೯ ರ ಅವಧಿಯಲ್ಲಿ ಇಂಧನ ಕ್ಷಮತೆ ಸಾಧಿಸಿದ ಈ ಘಟಕಗಳಿಗೆ ಪ್ರಶಸ್ತಿ ಲಭಿಸಿದ್ದು, ಕಬ್ಬನ್ ಪಾರ್ಕ್ ನ ಜವಾಹರ್ ಬಾಲಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಈ ಘಟಕಗಳಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿಗಮದ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳು ಕೆಎಂಪಿಎಲ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಹಿನ್ನಲೆಯಲ್ಲಿ ಇಂಧನ ಕ್ಷಮತೆಗಾಗಿ ರಾಜ್ಯ ಮಟ್ಟದಲ್ಲಿ ಕೆಎಸ್‌ಆರ್‌ಟಿಸಿ ಯ ಮೂರು ಘಟಕಗಳಿಗೆ ಅತ್ಯುತ್ತಮ ಘಟಕಗಳ ಪ್ರಶಸ್ತಿ ಹಾಗೂ ತಲಾ 50 ಸಾವಿರ ರೂ ನಗದು ಬಹುಮಾನ, ಪ್ರಶಸ್ತಿ ಫಲಕಕ್ಕೆ ಪಾತ್ರವಾಗಿವೆ ಎಂದು ಕೆ.ಎಸ್ಅರ್.ಟಿ.ಸಿ. ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


