ಅತ್ಯಾಚಾರ ಸಂತ್ರಸ್ಥೆಗೆ ಮತಾಂತರ ಬೆದರಿಕೆ: 'ಲವ್ ಜಿಹಾದ್ ಕುರಿತು ಸಿಎಂಗೆ ದೂರಿತ್ತ ಸಂಸದೆ ಶೋಭಾ ಕರಾಂದ್ಲಾಜೆ
ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಅದನ್ನು ವೀಡಿಯೋ ಚಿತ್ರೀಕರಣಗೊಳಿಸಿರುವುದಲ್ಲದೆ ಅದೇ ವೀಡಿಯೋ ಇಟ್ಟುಕೊಂಡು ಅವಳನ್ನು ಮತಾಂತರಕ್ಕೆ ಯತ್ನಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಈ ಕುರಿತು ಸಂಸದೆ ಶೋಭಾ ಕರಾಂದ್ಲಾಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

ಬೆಂಗಳೂರು: ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಅದನ್ನು ವೀಡಿಯೋ ಚಿತ್ರೀಕರಣಗೊಳಿಸಿರುವುದಲ್ಲದೆ ಅದೇ ವೀಡಿಯೋ ಇಟ್ಟುಕೊಂಡು ಅವಳನ್ನು ಮತಾಂತರಕ್ಕೆ ಯತ್ನಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಈ ಕುರಿತು ಸಂಸದೆ ಶೋಭಾ ಕರಾಂದ್ಲಾಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.
ಕರ್ನಾಟಕದ ಗಡಿ ಪ್ರದೇಶವಾಗಿರುವ ಕೇರಳದ ಕಾಸರಗೋಡಿನ ತಂಗೊಳಿಯ ಯುವತಿಯ ಮೇಲೆ ಮುಸ್ಲಿಂ ಯುವಕನೋರ್ವ ಅತ್ಯಾಚಾರ ನಡೆಸಿದ್ದ. ಆನಂತರ ಅದನ್ನು ವೀಡಿಯೋ ಮಾಡಿ ಯುವತಿಯನ್ನು ಮತಾಂತರಕ್ಕೆ ಒತ್ತಾಯಿಸಲಾಗಿದೆ.
ಘಟನೆ ವಿವರ
ಕಾಸರಗೋಡಿನ ಯುವತಿಗೆ ಸ್ನೇಹದ ನೆಪ ಹೇಳಿ ಮತ್ತು ಬರುವ ಪೌಷಧಿ ಮಿಶ್ರಣದ ಪಾನೀಯ ಕುಡಿಸಿದ್ದ ಯುವಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಸಂತ್ರಸ್ಥೆಯನ್ನು ಮಂಗಳೂರು, ಬೆಂಗಳೂರಿಗೆ ಕರೆತಂದು ಮತ್ತೆ ಮತ್ತೆ ಅತ್ಯಾಚಾರ ನಡೆಸಲಾಗಿದೆ. ಅಲ್ಲದೆ ಆಕೆಯ ಮೇಲೆರಗಿದ ಕಾಮುಕರು ತಮ್ಮ ಕೃತ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿದ್ದಾರೆ.
ಈ ವಿಡಿಯೋ ಇಟ್ಟುಕೊಂಡು ಯುವತಿಯನ್ನು ತಮ್ಮ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕೆಂದು ಬೆದರಿಕೆ ಹಾಕುತ್ತಿದ್ದ. ಹಾಗೊಮ್ಮೆ ಮತಾಂತರವಾಗದೆ ಹೋದಲ್ಲಿ ವೀಡಿಯೋವನ್ನು ಬಹಿರಂಗಗೊಳಿಸುವುದಾಗಿ ಆತ ಯುವತಿಗೆ ಹೆದರಿಸಿಸಿದ್ದ. ಈ ಸಂಬಂಧ ಯುವತಿ ಕುಟುಂಬ ಕಾಸರಗೋಡು ಪೋಲೀಸರಿಗೆ ದೂರು ಕೊಟ್ಟರೂ ಉಪಯೋಗವಾಗಿಲ್ಲ.
ಆರೋಪಿಗಳು ಬೆಂಗಳೂರಲ್ಲಿ ನೆಲೆಸಿದ್ದ ಕಾರಣ ಯುವತಿಯು ಸಂಸದೆ ಶೋಭಾ ಅವರತ್ತ ತೆರಳಿ ದೂರು ಸಲ್ಲಿಸಿದ್ದಾಳೆ. ಇದೀಗ ಸಂಸದೆ ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪಗೆ ಮಾಹಿತಿ ನೀಡಿರುವುದಲ್ಲದೆ ಸಂತ್ರಸ್ಥೆಯ ಕುಟುಂಬದೊಡನೆ ತೆರಳಿ ಪೊಲೀಸ್ ಕಮಿಷನರ್ಗೆಸಹ ಅಧಿಕೃತ ದೂರು ಸಲ್ಲಿಸಿದ್ದಾರೆ. ಮತ್ತು ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ದೂರಿನ ಹಿನ್ನೆಲೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


