ಹೊನ್ನಾಳಿ: ಬಸ್ ಚಾಲಕರಾದ ಎಂ. ಪಿ. ರೇಣುಕಾಚಾರ್ಯ!
ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮತ್ತೆ ಸುದ್ದಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯ ಸುತ್ತಮುತ್ತಲ ಹಳ್ಳಿಗಳಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸೌಲಭ್ಯ ಇಂದಿನಿಂದ ಆರಂಭವಾಗಿದ್ದು, ಬಸ್ಸೊಂದನ್ನು ತಾವೇ ಖುದ್ದು ಚಾಲನೆ ಮಾಡಿದ್ದಾರೆ.

ಹೊನ್ನಾಳಿ: ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮತ್ತೆ ಸುದ್ದಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯ ಸುತ್ತಮುತ್ತಲ ಹಳ್ಳಿಗಳಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸೌಲಭ್ಯ ಇಂದಿನಿಂದ ಆರಂಭವಾಗಿದ್ದು, ಬಸ್ಸೊಂದನ್ನು ತಾವೇ ಖುದ್ದು ಚಾಲನೆ ಮಾಡಿದ್ದಾರೆ.
ಹೊನ್ನಾಳಿಯ ಕೆಲ ಹಳ್ಳಿಗಳಿಗೆ ಬಸ್ ಸಂಚಾರ ಸೌಲಭ್ಯದ ಉದ್ಘಾಟನೆಗೆ ಆಗಮಿಸಿದ ರೇಣುಕಾಚಾರ್ಯ, ಚಾಲಕನ ಡ್ರೆಸ್ ಹಾಕಿಕೊಂಡು ಡ್ರೈವರ್ ಸೀಟ್ ನಲ್ಲಿ ಕುಳಿತು ಬಸ್ ಮಾಡಿದ್ದು, ನೆರೆದಿದ್ದ ಜನರು ರೇಣುಕಾಚಾರ್ಯ ಪರ ಜೈಕಾರ ಮೊಳಗಿಸಿದ್ದಾರೆ.
ಜನರ ಹರ್ಷೋದ್ಘಾರಗಳಿಂದ ಸಂತೋಷಗೊಂಡ ರೇಣುಕಾಚಾರ್ಯ, ಬಸ್ಸನ್ನು ಕೆಲ ದೂರದವರೆಗೂ ಚಾಲನೆ ಮಾಡುವ ಮೂಲಕ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದರು. ಹೊನ್ನಾಳಿ ಕ್ಷೇತ್ರದ ಸಮಗ್ರ ಅಭಿವೃದ್ದಿಯೆ ನನ್ನ ಗುರಿ. ಈ ಬಸ್ ಸೌಲಭ್ಯದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಹಳ ಸದುಪಯೋಗವಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ನಡೆದ ಜಾತ್ರೆ ಮಹೋತ್ಸವಗಳಲ್ಲಿ ನೆರೆದಿದ್ದವರೊಂದಿಗೆ ವಾದ್ಯಗಳ ಸದ್ದಿಗೆ ಡ್ಯಾನ್ಸ್ ಮಾಡಿದ್ದ ರೇಣುಕಾಚಾರ್ಯ ಕೆಲ ದಿನಗಳ ಹಿಂದೆ ಹೋರಿಯಿಂದ ಗುದ್ದಿಸಿಕೊಂಡು ಸುದ್ದಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


