ಪ್ರತೀ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೊಟೆಲ್: ಬಜೆಟ್ ನಲ್ಲಿ ಹೊಸ ಯೋಜನೆ ಘೋಷಣೆ
ಪ್ರತೀ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೊಟೆಲ್ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬೆಂಗಳೂರು: ಪ್ರತೀ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೊಟೆಲ್ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪ್ರತೀ ಜಿಲ್ಲೆಯಲ್ಲಿ ಮತ್ಸ್ಯದರ್ಶಿನಿ ಹೋಟೆಲ್ ಆರಂಭಕ್ಕೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ದೇಶಿಸಿದ್ದಾರೆ. ಪ್ರತೀ ಜಿಲ್ಲೆ ಹಾಗೂ ತಾಲೂಕಿಗೊಂದು ಹೋಟೆಲ್ ತೆರೆದು ಕಡಿಮೆ ದರದಲ್ಲಿ ಉತ್ತಮ ಮೀನೂಟ ನೀಡುವ ಯೋಜನೆ ಇದಾಗಿದೆ.ಮೂಲಕ ಬಡವರಿಗೆ,ಮಧ್ಯಮ ವರ್ಗಕ್ಕೆ ಉತ್ತಮವಾದ ಊಟ ನೀಡುವ ಯೋಜನೆಯನ್ನು ಬಜೆಟ್ ನಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಲಿದ್ದಾರೆ.
ಕನಿಷ್ಠ 100 ರೂಗೆ ಎಲ್ಲಾ ರೀತಿಯ ಮೀನಿನ ಊಟ ನೀಡುವ ಯೋಜನೆ ಇದಾಗಿದ್ದು, ಸಾಮಾನ್ಯ ಹೋಟೆಲ್ ಗಿಂತ ಕಡಿಮೆ ದರದಲ್ಲಿ ಮೀನಿನ ಊಟ ಸಿಗಲಿದೆ ಎನ್ನಲಾಗಿದೆ.ಈ ಬಗ್ಗೆ ಸಚಿವರು ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿ ಯೋಜನೆ,ಆರ್ಥಿಕ ಅಗತ್ಯತೆ,ಸ್ಥಳಾವಕಾಶ ಸೇರಿದಂತೆ ಯೋಜನಾ ವರದಿ ಸಿದ್ದಪಡಿಸಿಕೊಂಡಿದ್ದಾರೆ.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಮತ್ಸ್ಯದರ್ಶಿನಿ ಹೋಟೆಲ್ ಆರಂಭಿಸಲಾಗುತ್ತಿದ್ದು, ಪ್ರಾರಂಭಿಕವಾಗಿ ಜಿಲ್ಲೆಗೊಂದರಂತೆ ಮತ್ಸ್ಯದರ್ಶಿನಿ ಹೋಟೆಲ್ ತೆರೆಯುವ ಬಗ್ಗೆ ಸಾರ್ವನಿಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.ಬಳಿಕ ಪ್ರಸ್ತಾವನೆಯನ್ನು ತಯಾರಿಸಿ ಮೀನುಗಾರಿಕೆ ಇಲಾಖೆಯು ಆರ್ಥಿಕ ಇಲಾಖೆಗೂ ರವಾನಿಸಿದೆ.ಆರ್ಥಿಕ ಇಲಾಖೆ ಒಪ್ಪಿಗೆ ದೊರೆತ ಕೂಡಲೇ ಮತ್ಸ್ಯದರ್ಶಿನಿ ಹೋಟೆಲ್ ಗೆ ಬಜೆಟ್ ನಲ್ಲಿ ಘೋಷಿಸಿ,ಮುಂಬರುವ ದಿನಗಳಲ್ಲಿ ಹೊಟೇಲುಗಲ ಕಾರ್ಯಾರಂಭ ಮಾಡಲು ತಯಾರಿ ನಡೆಸಲಾಗಿದೆ.
100 ಕೋಟಿ ರೂ.ವೆಚ್ಚದಲ್ಲಿ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೆಲ್ ಆರಂಭಿಸಲಾಗುತ್ತಿದೆ.ಕೆಎಫ್ ಡಿಸಿ ಮಳಿಗೆಗಳ ಮೂಲಕವೇ ಮತ್ಸ್ಯದರ್ಶಿನಿ ಹೋಟೆಲ್ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಆ ಮೂಲಕ ಇಡೀ ರಾಜ್ಯದಲ್ಲಿ ಕೆಎಫ್‍ಡಿಸಿ ಮತ್ಸ್ಯದರ್ಶಿನಿಗಳನ್ನು ಒಂದು ಬ್ರಾಂಡ್ ಮಾಡಲು ಮೀನುಗಾರಿಕಾ ಇಲಾಖೆ ನಿರ್ಧಿರಿಸಿದೆ. ಇಲಾಖೆಯಡಿ ಬೆರಳೆಣಿಕೆಯಷ್ಟು ಮಾತ್ರ ಮತ್ಸ್ಯದರ್ಶಿನಿ ಹೋಟೆಲ್ ಗಳು ನಡೆಯುತ್ತಿವೆ.ಹೊರಗಿನ ಹೋಟೆಲ್ ಗಳಲ್ಲಿ ಒಂದು ಮೀನೂಟಕ್ಕೆ 400 ರೂ ಯಿಂದ 600 ರೂ ಕೊಡಬೇಕು.ಕೆಲವು ವಿಶೇಷ ಮೀನುಗಳು ಸೇರಿದರೆ ಊಟದ ದರ 1000 ರೂ ಆಗಲಿದೆ.ಹೀಗಾಗಿ ಸರ್ಕಾರ ರಿಯಾಯ್ತಿ ದರದಲ್ಲಿ ರಾಜ್ಯದ ಜನರಿಗೆ ಮೀನೂಟ ಬಡಿಸಲು ನಿರ್ಧಾರ ಮಾಡಿದೆ.
ಜೊತೆಗೆ ಮೀನುಗಾರರಿಗೆ ಆರ್ಥಿಕ ನಷ್ಟ ತಪ್ಪಿಸುವ ಮೂಲಕ ನಿರಂತರ ಆದಾಯ ನೀಡುವ ಮೂಲಕ ಮೀನಿನ ಖಾದ್ಯ ಸವಿಯುವವರಿಗೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮೀನೂಟ ದೊರೆಯುವಂತೆ ಮಾಡುವ ಪ್ರಯತ್ನಕ್ಕೆ ಮತ್ಯ್ಸಪ್ರೇಮಿಗಳು ಹೇಗೆ ಸ್ಪಂದಿಸುತ್ತಾರೆ ಎಂಬ ಕುತೂಹಲ ಹುಟ್ಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


