ಬೆಂಗಳೂರು ಶೂಟೌಟ್ ಹಿಂದೆ ಲವ್ ಸ್ಟೋರಿ: ಯುವತಿ ಮೇಲೆ ಗುಂಡು ಹಾರಿಸಿದ್ದು ಪ್ರಿಯಕರ?
ಯುವತಿಯೊಬ್ಬಳ ಮೇಲೆ ಮಂಗಳವಾರ ನಡೆದಿದ್ದ ಶೂಟೌಟ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಗುಂಡು ಹಾರಿಸಿದ್ದು ಯುವತಿಯ ಪ್ರಿಯಕರನೇ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ಬೆಂಗಳೂರು: ಯುವತಿಯೊಬ್ಬಳ ಮೇಲೆ ಮಂಗಳವಾರ ನಡೆದಿದ್ದ ಶೂಟೌಟ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಗುಂಡು ಹಾರಿಸಿದ್ದು ಯುವತಿಯ ಪ್ರಿಯಕರನೇ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.
ಮಂಜುನಾಥ ಲೇಔಟ್'ನ ವಸುಂಧರಾ ಮಹಿಳಾ ಪಿಜಿ ಹಾಸ್ಟೆಲ್ ನಿವಾಸಿ ಶುಭಾಶ್ರೀ ಪ್ರಿಯದರ್ಶಿನಿ (25) ಎಂಬುವವರ ಮೇಲೆ ನಿನ್ನೆಯಷ್ಟೇ ಗುಂಡಿನ ದಾಳಿ ನಡೆದಿತ್ತು. ಗುಂಡಿನ ಮೊರೆತಕ್ಕೆ ಸಿಲಿಕಾನ್ ಸಿಟಿ ಬೆಚ್ಚಿ ಬಿದ್ದಿತ್ತು. ಈ ಘಟನೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು.
ತಮ್ಮ ಪಿಜಿ ಮುಂದೆ ಸಂಜೆ 6ರ ಸಮಯದಲ್ಲಿ ಶುಭಾ ಮೇಲೆ ದಾಳಿ ನಡೆದಿತ್ತು. ಬಳಿಕ ಸ್ಥಳೀಯರು ಶುಭಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಒಡಿಶಾ ಮೂಲಕ ಶುಭಾ, ಎರಡು ವರ್ಷಗಳಿಂಗ ನಿಮ್ಹಾನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಮಂಜುನಾಥ ಲೇಔಟ್ ನಲ್ಲಿ ಪಿಜಿಯಲ್ಲಿ ನೆಲೆಸಿದ್ದರು. ಪ್ರತಿ ದಿನದಂತೆ ಸಂಜೆ ಕೆಲಸ ಮುಗಿಸಿ ಪಿಜಿಗೆ ಹೊರಟಿದ್ದರು. ಆಗ ಹಿಂದಿನಿಂದ ಬಂದ ದುಷ್ಕರ್ಮಿಗಳು ಏಕಾಏಕಿ ಶುಭಾ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಶುಭಾ ಅವರ ಸೊಂಟಕ್ಕೆ ಗುಂಡು ತಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದೀಗ ಯುವತಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಆಕೆಯ ಪ್ರಿಯಕರನೇ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. ಗುಂಡು ಹಾರಿಸಿದ್ದ ವ್ಯಕ್ತಿ ಪಿಸ್ತೂಲ್ ನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಗುಂಡು ಹಾರಿಸಿದ ವ್ಯಕ್ತಿ ಕೂಡ ಒಡಿಶಾದವನೇ ಆಗಿದ್ದು, ಆತನ ಹೆಸರು ಅಮರೇಂದ್ರ ಪಟ್ನಾಯಕ್ ಎಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಪೊಲೀಸು ತನಿಖೆಗೆ ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ವೇಳೆ ಯುವತಿಯ ಪ್ರಿಯಕರನೇ ಗುಂಡಿ ಹಾರಿಸಿದ್ದ ಎಂಬ ವಿಚಾರ ತಿಳಿದುಬಂದಿದೆ.
ಘಟನೆ ಬಳಿಕ ಯುವಕ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಯುವಕ ಡೆತ್ ನೋಟ್ ಬರೆದಿಟ್ಟಿದ್ದು, ಶುಭಾಗೆ ಶುಭ ಹಾರೈಸಿದ್ದಾನೆಂದು ವರದಿಗಳು ತಿಳಿಸಿವೆ.
ಶುಭಶ್ರೀ ಮತ್ತು ಅಮರೇಂದ್ರ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ, ಕಾರಣಾಂತರಗಳಿಂದ ಬ್ರೇಕಪ್ ಆಗಿದೆ. ಈ ನಡುವೆ ಅಮರೇಂದ್ರನಿಗೆ ಬೇರೆ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿದೆ. ಇಂದು ವಿವಾಹ ನೆರವೇರಬೇಕಿತ್ತು. ಆದರೆ, ಅಮರೇಂದ್ರ ಬೇರೆ ಯುವತಿಯೊಂದಿಗೆ ವಿವಾಹವಾಗುತ್ತಿದ್ದಾನೆಂಬ ವಿಚಾರ ತಿಳಿದಿದ್ದ ಶುಭಶ್ರೀ ಅಸಮಾಧಾನಗೊಂಡು ತಾವಿಬ್ಬರೂ ಜೊತೆಯಾಗಿದ್ದ ಫೋಟೋವನ್ನು ಅಮರೇಂದ್ರ ಮದುವೆಯಾಗಬೇಕಿದ್ದ ಯುವತಿಗೆ ಕಳುಹಿಸಿದ್ದಾಳೆ. ಇದರ ಪರಿಣಾಮ ಯುವತಿ ವಿವಾಹಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಮದುವೆ ಮುರಿದು ಬಿದ್ದಿತ್ತು.
ಘಟನೆಯಿಂದ ಕುಪಿತಗೊಂಡಿದ್ದ ಅಮರೇಂದ್ರ ಆಕೆಯನ್ನು ಕೊಲ್ಲುವ ಸಲುವಾಗಿಯೇ ಬೆಂಗಳೂರಿಗೆ ಬಂದಿದ್ದಾನೆ. ಶುಭಶ್ರೀ ಯ ಪಿಜಿ ಬಳಿ ಕಾದು ಕುಳಿದು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿ, ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


