ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಸರ್ಕಾರಿ ಶಾಲೆಯ ಗೋಡೆಯ ಮೇಲೆ ಪಾಕಿಸ್ತಾನ ಪರ ಬರಹ!
ಪಾಕಿಸ್ತಾನದ ಪರ ಮಹಿಳೆಯರಿಬ್ಬರು ಘೋಷಣೆ ಕೂಗಿರುವ ಪ್ರಕರಣ ದಾಖಲಾದ ಬೆನ್ನಲ್ಲೇ ಹುಬ್ಬಳ್ಳಿ ಗ್ರಾಮಾಂತರ ತಾಲ್ಲೂಕಿನ ಬುದರ್ ಸಿಂಗಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆ, ಬಾಗಿಲುಗಳ ಮೇಲೂ ಪಾಕ್ ಪರ ಬರಹಗಳು ಕಂಡುಬಂದಿದ್ದು, ಕೆಲ ಕಾಲ ಆತಂಕದ ವಾತಾವರಣ ಕಂಡುಬಂದಿತ್ತು.

ಹುಬ್ಬಳ್ಳಿ: ಪಾಕಿಸ್ತಾನದ ಪರ ಮಹಿಳೆಯರಿಬ್ಬರು ಘೋಷಣೆ ಕೂಗಿರುವ ಪ್ರಕರಣ ದಾಖಲಾದ ಬೆನ್ನಲ್ಲೇ ಹುಬ್ಬಳ್ಳಿ ಗ್ರಾಮಾಂತರ ತಾಲ್ಲೂಕಿನ ಬುದರ್ ಸಿಂಗಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆ, ಬಾಗಿಲುಗಳ ಮೇಲೂ ಪಾಕ್ ಪರ ಬರಹಗಳು ಕಂಡುಬಂದಿದ್ದು, ಕೆಲ ಕಾಲ ಆತಂಕದ ವಾತಾವರಣ ಕಂಡುಬಂದಿತ್ತು.
ಶಿಕ್ಷಕರು ಹಾಗೂ ಮಕ್ಕಳು ಇಂದು ಬೆಳಗ್ಗೆ ಶಾಲೆಗೆ ಆಗಮಿಸುತ್ತಿದ್ದಂತೆಯೇ ಬಾಗಿಲು, ಗೋಡೆಗಳ ಮೇಲೆ ‘ಟಿಪ್ಟು ಸುಲ್ತಾನ್ ಶಾಲೆ’, ‘ಪಾಕಿಸ್ತಾನ ಜಿಂದಾಬಾದ್’ ಎಂಬ ಬರಹಗಳನ್ನು ಕಂಡು ದಂಗಾದರು.
ಈ ವಿಷಯ ತಿಳಿಯುತ್ತಿದ್ದಂತೆಯೇ ದೇಶವಿರೋಧಿ ಬರಹಗಳನ್ನು ಬರೆದಿರುವ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟಿಸಿದರು.
“ವಿಷಯ ನಮ್ಮ ಗಮನಕ್ಕ ಬರುತ್ತಿದ್ದಂತೆಯೇ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು. ಇವನ್ನೆಲ್ಲ ಯಾರು ಬರೆದಿರುಬಹುದು ಎಂಬ ವಿಚಾರ ವಿದ್ಯಾರ್ಥಿಗಳಿಗೂ ತಿಳಿದಿಲ್ಲ” ಎಂದು ಮುಖ್ಯ ಶಿಕ್ಷಕ ಎಂ ಎಸ್ ಹುಲಗೇರಿ ಹೇಳಿದ್ದಾರೆ.
ಸರ್ಕಾರಿ ಶಾಲೆಗೆ ಭೇಟಿ ನೀಡಿದ ಡಿವೈಎಸ್ ಪಿ ರವಿ ನಾಯಕ್ ಮತ್ತು ರಾಮನಗೌಡ ಹಟ್ಟಿ ಶಿಕ್ಷಕರೊಡನೆ ಮಾತುಕತೆ ನಡೆಸಿ, ಮುಂದಿನ ಕ್ರಮದ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


