ಫೇಸ್ಬುಕ್ ನಲ್ಲೂ ಪಾಕಿಸ್ತಾನಕ್ಕೆ ಜೈ ಎಂದಿದ್ದ ಅಮೂಲ್ಯ!
ಪಾಕಿಸ್ತಾನದ ಹೆಸರಿಡಿದು ಅಮೂಲ್ಯ ಇದೇ ಮೊದಲ ಬಾರಿಗೆ ಭಂಡತನ ಪ್ರದರ್ಶಿಸಿಲ್ಲ, ನಾಲ್ಕು ದಿನಗಳ ಹಿಂದೆಯೂ ತನ್ನ ಫೇಸ್ ಬುಕ್ ಖಾತೆಯಲ್ಲಿ ಪಾಕಿಸ್ತಾನವನ್ನು ಉಲ್ಲೇಖಿಸಿದ್ದ ಸಂಗತಿ ಇದೀಗ ಬಹಿರಂಗಗೊಂಡಿದೆ.

ಬೆಂಗಳೂರು: ಪಾಕಿಸ್ತಾನದ ಹೆಸರಿಡಿದು ಅಮೂಲ್ಯ ಇದೇ ಮೊದಲ ಬಾರಿಗೆ ಭಂಡತನ ಪ್ರದರ್ಶಿಸಿಲ್ಲ, ನಾಲ್ಕು ದಿನಗಳ ಹಿಂದೆಯೂ ತನ್ನ ಫೇಸ್ ಬುಕ್ ಖಾತೆಯಲ್ಲಿ ಪಾಕಿಸ್ತಾನವನ್ನು ಉಲ್ಲೇಖಿಸಿದ್ದ ಸಂಗತಿ ಇದೀಗ ಬಹಿರಂಗಗೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸೈದ್ಧಾಂತಿಕ ವಿಚಾರಗಳನ್ನು ಉಗ್ರವಾಗಿ ಪ್ರತಿಪಾದಿಸುತ್ತಿದ್ದ ಅಮೂಲ್ಯ, ಫೆ.16ಕ್ಕೆ ಪೇಸ್ ಬುಕ್ಕಲ್ಲಿ ಫೋಸ್ಟೊಂದನ್ನು ಹಾಕಿ ತಾನು ದೇಶಾತೀತ ವ್ಯಕ್ತಿ ಎಂಬು ಬಿಂಬಿಸಲು ಹೊರಟಿದ್ದಳು.
ನೆರೆದೇಶಗಳಿಗೆ ಜಿಂದಾಬಾದ್ ಎಂದು ಬರೆಯುವಾಗ ಪಾಕಿಸ್ತಾನವನ್ನೂ ಉಲ್ಲೇಖಿಸಿದ್ದಳು. ಅಲ್ಲದೆ, ತನ್ನ ಸೈದ್ಧಾಂತಿಕ ವಿರೋಧಿಗಳಿಗೆ ಸವಾಲು ಹಾಕುವ ಮಾತುಗಳನ್ನಾಡಿದ್ದಳು. ಫೆ.16ರಂದು ಅಮೂಲ್ಯ ಈ ರೀತಿ ಸ್ಟೇಟರ್ ಹಾಕಿಕೊಂಡಿದ್ದಳು. ಹಿಂದೂಸ್ತಾನ್ ಜಿಂದಾಬಾದ್, ಪಾಕಿಸ್ತಾನ ಜಿಂದಾಬಾದ್, ಬಾಂಗ್ಲಾದೇಶ ಜಿಂದಾಬಾದ್, ಶ್ರೀಲಂಕಾ ಜಿಂದಾಬಾದ್, ಆಫ್ಘಾನಿಸ್ತಾನ ಜಿಂದಾಬಾದ್, ಜೈನಾ ಜಿಂದಾಬಾದ್, ಭೂತಾನ್ ಜಿಂದಾಬಾದ್. ಯಾವುದೇ ದೇಶ ಇರಲಿ ಎಲ್ಲಾ ದೇಶಗಳಿಗೂ ಜಿಂದಾಬಾದ್ ಎಂದು ಬರೆದಿದ್ದಳು.
ಮಕ್ಕಳಿಗೆ ದೇಶ ಅಂದರೆ ದೇಶ ಎಂದರೆ ಮಣ್ಣು ಅಂತ ಕಲಿಸುತ್ತೀರ. ಮಕ್ಕಳಾದ ನಾವು ನಿಮಗೆ ಹೇಳ್ತಾ ಇದ್ದೇವೆ. ದೇಶವೆಂದರೆ ಅಲ್ಲಿನ ಜನ. ಆ ಎಲ್ಲಾ ಜನರು ಮೂಲಭೂತ ಸವಲತ್ತುಗಳನ್ನು ಪಡೆಯಬೇಕು. ಆ ಎಲ್ಲಾ ಜನರನ್ನು ಸರ್ಕಾರ ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಬೇಕು. ಜನರ ಸೇವೆ ಮಾಡುವ ಎಲ್ಲರಿಗೂ ಜಿಂದಾಬಾದ್!
ಹಾಗಂತ ಬೇರೆ ದೇಶಕ್ಕೆ ಜಿಂಬಾದ್ ಹೇಳಿದ ಕೂಡಲೇ ನಾನು ಅಲ್ಲಿನವಳು ಆಗಲ್ಲ. ಕಾನೂನಿನ ಪ್ರಕಾರ ನಾನು ಭಾರತೀಯ ಪ್ರಜೆ. ನನ್ನ ದೇಶವನ್ನು ಗೌರವಿಸುವುದು, ಅಲ್ಲಿನ ಜನರಿಗಾಗಿ ಕೆಲಸ ಮಾಡೋದು ನನ್ನ ಕರ್ತವ್ಯ. ನಾನಾದನ್ನು ಮಾಡುತ್ತೇನೆ. ಯಾವ ಆರ್ಎಸ್ಎಸ್ ಚಡ್ಡಿಗಳು ಏನು ಮಾಡುತ್ತಾರೋ ನೋಡೋಣ! ಸಂಘಿಗಳ ಪಕ್ಷ ಇವತ್ತು ಉರ್ಕೊಳ್ತಾರೆ. ಶುರು ಮಾಡ್ರಿ ನಿಮ್ ಕಾಮೆಂಟ್ ದಾಳಿ. ನಾನ್ ಏನ್ ಹೇಳ್ಬೇಕು ಅದನ್ನು ಹೇಳಿದ್ದೀನಿ...! ಎಂದಿದ್ದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


