ಕಿಡ್ನಿ ಮಾರಾಟದ ಹೆಸರಿನಲ್ಲಿ ಮಹಾ ಮೋಸ: ಬಲೆಗೆ ಬಿದ್ದ ವಿದೇಶಿ ವಂಚಕರು
ಪ್ರತಿಷ್ಠಿತ ಆಸ್ಪತ್ರೆಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ಕಿಡ್ನಿ ವ್ಯಾಪಾರದ ಹೆಸರಿನಲ್ಲಿ ಅಮಾಯಕರಿಗೆ ಮೋಸ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರು ಪೊಲೀಸರು ಕೊನೆಗೂ ಭೇದಿಸಿದ್ದಾರೆ.

ಬೆಂಗಳೂರು: ಪ್ರತಿಷ್ಠಿತ ಆಸ್ಪತ್ರೆಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ಕಿಡ್ನಿ ವ್ಯಾಪಾರದ ಹೆಸರಿನಲ್ಲಿ ಅಮಾಯಕರಿಗೆ ಮೋಸ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರು ಪೊಲೀಸರು ಕೊನೆಗೂ ಭೇದಿಸಿದ್ದಾರೆ.
ಮೂವರು ವಿದೇಶಿಗರು ಹಾಗೂ ಮೂವರು ಹೊರರಾಜ್ಯದವರನ್ನು ಒಳಗೊಂಡಿರುವ ಈ ಖದೀಮರ ತಂಡ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಸುಮಾರು 200 ಅಮಾಯಕರಿಗೆ ವಂಚನೆ ಮಾಡಿದೆ.
ವೆಬ್‌ಸೈಟ್ ಮೂಲಕ ಕಿಡ್ನಿ ಮಾರಾಟಕ್ಕಿದೆ ಹಾಗೂ ಖರೀದಿಸುತ್ತೇವೆ ಎಂದು ಜಾಹಿರಾತನ್ನು ನೀಡುವ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದರು. ಇವರನ್ನು ನಂಬಿಕೊಂಡು ಅಮಾಯಕರು ಸಂಪರ್ಕಿಸಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.
ವಂಚನೆಗೊಳಗಾದವರು ಬೆಂಗಳೂರಿನ ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದರು. ಖದೀಮರಿಗೆ ಬಲೆ ಬೀಸಿದ ಪೊಲೀಸರು ತ್ರಿಪುರದ ಮೂವರು ಹಾಗೂ ನೈಜೀರಿಯ ಪ್ರಜೆ ಸೇರಿದಂತೆ ಮೂವರು ವಿದೇಶಿಗರನ್ನು ಬಂಧಿಸಿದ್ದಾರೆ.
ಸುಡಾನ್‌ನ ಮೊಹಮ್ಮದ್ ಅಹ್ಮದ್ ಇಸ್ಮಾಯಿಲ್ (24), ಮಾರ್ವನ್ ಫೈಸಲ್ (27), ನೈಜೀರಿಯಾದ ಈಸೆನೆ ಲವ್ಲಿ (29), ತ್ರಿಪುರಾ ರಾಜ್ಯದ ಹರೇಂದ್ರ (25), ಕಮಿ ರಾಜನ್ (25) ಹಾಗೂ ಜಟಿನ್‌ಕುಮಾರ್ (25) ಬಂಧಿತರು.
ಬಂಧಿತರ ವಿಚಾರಣೆ ನಡೆಯುತ್ತಿದ್ದು ಕರ್ನಾಟಕ ಅಲ್ಲದೆ ಬೇರೆ ರಾಜ್ಯಗಳಲ್ಲಿ ಇವರ ಜಾಲದ ಕಾರ್ಯಾಚರಣೆಯ ಕುರಿತಾಗಿ ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಬಂಧಿತರಿಂದ ಎಟಿಎಂ ಮತ್ತು ಸಿಮ್ ಕಾರ್ಡ್ ಹಾಗೂ ಮೊಬೈಲ್ ಫೋನ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


