ಅ, ಆ ಬರೆಯುವ ವಿಚಾರಕ್ಕೆ ಕೆಂಡಾಮಂಡಲ: ಮಗುವನ್ನು ಅಮಾನವೀಯವಾಗಿ ಥಳಿಸಿದ ಅಂಗನವಾಡಿ ಕಾರ್ಯಕರ್ತೆ
ಅ, ಆ ಬರೆಯುವ ವಿಚಾರಕ್ಕೆ ಮಗುವಿನ ಮೇಲೆ ಕೆಂಡಾಮಂಡಲಗೊಂಡಿರುವ ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಮಗುವನ್ನು ಅಮಾನವೀಯವಾಗಿ ಥಳಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ನಡೆದಿದೆ.

ಕೊಪ್ಪಳ: ಅ, ಆ ಬರೆಯುವ ವಿಚಾರಕ್ಕೆ ಮಗುವಿನ ಮೇಲೆ ಕೆಂಡಾಮಂಡಲಗೊಂಡಿರುವ ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಮಗುವನ್ನು ಅಮಾನವೀಯವಾಗಿ ಥಳಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ನಡೆದಿದೆ.
ಮಗುವನ್ನು ಥಳಿಸಿದ ಅಂಗನವಾಡಿ ಕಾರ್ಯಕರ್ತೆಯನ್ನು ಸಂಗಮ್ಮ ಎಂದು ಹೇಳಲಾಗುತ್ತಿದೆ. ಅ, ಆ ಬರೆದು ಕೊಡುವ ವಿಚಾರಕ್ಕೆ ಮಗುವಿನ ಮೇಲೆ ಕೆಂಡಾಮಂಡಲಗೊಂಡಿರುವ ಸಂಗಮ್ಮ ಮಗುವಿಗೆ ಥಳಿಸಿ, ಕಪಾಳಕ್ಕೆ ಹೊಡೆದಿದ್ದಾಳೆ. ಅಷ್ಟೇ ಅಲ್ಲದೆ, ಬಾಯಿಗು ಬಡಿದು, ಕಟ್ಟಿಯಿಂದ ಅಮಾನವೀಯವಾಗಿ ಥಳಿಸಿದ್ದಾಳೆ.
ಮಗುವನೊಂದಿಗೆ ಅಂಗನವಾಡಿ ಕಾರ್ಯಕರ್ತೆ ಅಮಾನವೀಯವಾಗಿ ವರ್ತಿಸಿರುವ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಘಲಲ್ಲಿ ಹರಿದಾಡತ್ತಿದ್ದು, ವೈರಲ್ ಆಗಿದೆ. ಮಹಿಳೆ ವಿರುದ್ಧ ಇದೀಗ ಹಲವು ಟೀಕೆಗಳು ವ್ಯಕ್ತವಾಗತೊಡಗಿವೆ. ಘಟನೆ ಗುಂಡೂರು ಗ್ರಾಮದ ಸಜ್ಜಿಹೊಲ ಏರಿಯಾ ಅಂಗವಾಡಿ ಕೇಂದ್ರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


