ಸೈಬರ್ ಅಪರಾಧ ದಳದ ಯಶಸ್ವಿ ಕಾರ್ಯನಿರ್ವಹಣೆ: 15 ದಿನಗಳಲ್ಲಿ 400 ಪ್ರಕರಣಗಳ ವಿಲೇವಾರಿ
ಸೈಬರ್ ಅಪರಾಧ ಪೊಲೀಸ್ ಠಾಣೆ (ಸಿಸಿಪಿಎಸ್) 2017 ರಲ್ಲಿ ಪ್ರಾರಂಭವಾದಾಗಿನಿಂದ ಬಾಕಿ ಉಳಿದಿರುವ 16,000 ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ನಡೆಸುವ ತೀರ್ಮಾನಕ್ಕೆ ಬಂದಿದೆ ಎಂದೆಣಿಸುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಂಟು ಸೈಬರ್ ಎಕನಾಮಿಕ್ ನಾರ್ಕೋಟಿಕ್ (ಸಿಇಎನ್) ಕೇಂದ್ರಗಳು ಪ್ರಾರಂಬವಾಗಿರುವ ನಂತರ 2019 ರಲ್ಲಿ ಇಡೀ ವರ್ಷದಲ್ಲಿ 1,000 ಪ್ರಕರಣಗಳಿಗೆ ಹೋಲ

ಬೆಂಗಳೂರು: ಸೈಬರ್ ಅಪರಾಧ ಪೊಲೀಸ್ ಠಾಣೆ (ಸಿಸಿಪಿಎಸ್) 2017 ರಲ್ಲಿ ಪ್ರಾರಂಭವಾದಾಗಿನಿಂದ ಬಾಕಿ ಉಳಿದಿರುವ 16,000 ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ನಡೆಸುವ ತೀರ್ಮಾನಕ್ಕೆ ಬಂದಿದೆ ಎಂದೆಣಿಸುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಂಟು ಸೈಬರ್ ಎಕನಾಮಿಕ್ ನಾರ್ಕೋಟಿಕ್ (ಸಿಇಎನ್) ಕೇಂದ್ರಗಳು ಪ್ರಾರಂಬವಾಗಿರುವ ನಂತರ 2019 ರಲ್ಲಿ ಇಡೀ ವರ್ಷದಲ್ಲಿ 1,000 ಪ್ರಕರಣಗಳಿಗೆ ಹೋಲಿಸಿದ್ದರೆ ಕಳೆದ ತಿಂಗಳ ಕೇವಲ 15 ದಿನಗಳಲ್ಲಿ 400 ಪ್ರಕರಣಗಳನ್ನು ಯಶಸ್ವಿಯಾಗಿ ಬಗೆಹರಿಸಿದೆ.
ಸಿಸಿಪಿಎಸ್ ಈಗ ಬಾಕಿ ಇರುವ ಪ್ರಕರಣಗಳ ತನಿಖೆಗಾಗಿ ಮಾತ್ರ ಗಮನ ಹರಿಸುತ್ತಿದ್ದರೆ, ಸಿಇಎನ್ ಕೇಂದ್ರಗಳು ಹೊಸ ಪ್ರಕರಣಗಳನ್ನು ದಾಖಲಿಸುತ್ತಿವೆ ಎಂದು ಉಪ ಪೊಲೀಸ್ ಆಯುಕ್ತ (ಅಪರಾಧ 1) ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ
"ಸಂತ್ರಸ್ಥರು ಹಣವನ್ನು ಕಳೆದುಕೊಂಡಾಗ ಹೆಚ್ಚಿನ ಪ್ರಕರಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ ಮತ್ತು ನಾವು ಅದನ್ನು ಬ್ಯಾಂಕ್ ಮೂಲಕ ಹಿಂಪಡೆಯಲು ಸಾಧ್ಯವಾಗುತ್ತದೆ. ತನಿಖೆಯೊಂದಿಗೆ ಮುಂದುವರಿಯುವ ಅಗತ್ಯವಿಲ್ಲ ಎಂದು ಸಂತ್ರಸ್ಥರು ನಮಗೆ ಪತ್ರವನ್ನು ನೀಡುತ್ತಾನೆ.ಸಂಸ್ಥಸ್ಥಇನ್ನೂ ಆರೋಪಿಯನ್ನು ಪತ್ತೆಹಚ್ಚಲು ಬಯಸಿದರೆ, ಪ್ರಕರಣವು ಮತ್ತಷ್ಟು ಬೆಳೆಯುತ್ತದೆ" ಅವರು ಹೇಳಿದ್ದಾರೆ.
ನಗರದಲ್ಲಿ ಒಂದೇ ಒಂದು ಸೈಬರ್ ಅಪರಾಧ ಪ್ರಕರಣವನ್ನು ಪೊಲೀಸರು ಸಂಪೂರ್ಣವಾಗಿ ಭೇದಿಸಿಲ್ಲ. "ಪ್ರಕರಣವನ್ನು ಪರಿಹರಿಸಿದಾಗ ಮಾತ್ರ ಪೊಲೀಸ್ ಸಿಬ್ಬಂದಿ ಸಂಪೂರ್ಣ ತೃಪ್ತರಾಗುತ್ತಾರೆ. ಆದರೆ ಇಲ್ಲಿ, ಅಪರಾಧಿಗಳು ಬೇರೆ ಯಾವುದಾದರೂ ರಾಜ್ಯದಲ್ಲಿರುತ್ತಾರೆ, ಮತ್ತು ಹೆಚ್ಚಿನ ಸಮಯ, ಅಲ್ಲಿನ ಕಾನೂನು ಸಂಸ್ಥೆಗಳು ನಮ್ಮೊಂದಿಗೆ ಸಹಕರಿಸುವುದಿಲ್ಲ. ಅಪರಾಧಿಗಳನ್ನು ಹಿಡಿಯುವುದು ಕಷ್ಟ, ”ಜೈನ್ ಹೇಳಿದರು. ಸಿ.ಸಿ.ಪಿ.ಎಸ್ ನ ಅಧಿಕಾರಿಯೊಬ್ಬರು, ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಮುಂದುವರಿಸುವುದು ಕಷ್ಟ, ಅದರಲ್ಲೂ ಸಾಮಾಜಿಕ ಮಾಧ್ಯಮ ಬಳಸಿ ಕಿರುಕುಳ ನೀಡುವ ಪ್ರಕರಣದ ಬೇಧಿಸುವುದು ಬಹು ಪ್ರಯಾಸಕರ ಎಂದಿದ್ದಾರೆ.
ಕ್ಯೂಆರ್ ಕೋಡ್ ಹಗರಣದ ಹಿಂದಿದ್ದ ಆರು ಸದಸ್ಯರ ಗ್ಯಾಂಗ್ ಅನ್ನು ಹಿಡಿಯಲು ತಂಡ ರಾಜಸ್ಥಾನಕ್ಕೆ ತೆರಳಿದೆ ಎಂದು ಸಿಸಿಪಿಎಸ್ ಮೂಲಗಳು ತಿಳಿಸಿವೆ. ತಂಡವು ಒಂದು ವಾರದ ಹಿಂದೆ ರಾಜಸ್ಥಾನಕ್ಕೆ ತೆರಳಿದ್ದು ಗ್ಯಾಗಿನ ಸದಸ್ಯರನ್ನು ಹಿಡಿದಿದೆ ಎಂದು ವರದಿಯಾಗಿದೆ. 2019 ರಲ್ಲಿ 10,500 ಪ್ರಕರಣಗಳು ದಾಖಲಾಗಿರುವುದರಿಂದ, ಅವೆಲ್ಲವನ್ನೂ ವಿಲೇವಾರಿ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಡಿಸಿಪಿ ಹೇಳಿದ್ದಾರೆ.“ಅಪರಾಧಿಗಳ ಹುಡುಕಾಟದಲ್ಲಿ ದೇಶದ ಪ್ರತಿಯೊಂದು ಭಾಗಕ್ಕೂ ತಂಡಗಳನ್ನು ಕಳುಹಿಸುವುದು ಪ್ರಾಯೋಗಿಕವಲ್ಲ.ಆದರೆ ಸಿಇಎನ್ ಕೇಂದ್ರಗಳು ನಮ್ಮ ಕೆಲಸವನ್ನು ಸರಾಗಗೊಳಿಸಿವೆ ”ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ
“ಹೆಚ್ಚಿನ ಪ್ರಕರಣಗಳು ಒಟಿಪಿ ಆಧಾರಿತವಾಗಿದ್ದು, ಅಲ್ಲಿ ನಾವು ಹಣವನ್ನು ಹಿಂಪಡೆಯಬಹುದು. ಮುಂದಿನ ರಾಜ್ಯ ಬಜೆಟ್‌ನಲ್ಲಿ, ನಾವು ಐಟಿ ವೃತ್ತಿಪರರಾಗಿರುವ ಇಬ್ಬರು ತಜ್ಞರನ್ನು ನಮಗೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. ಆಗ ಪ್ರತಿ ಪ್ರಕರಣವನ್ನು ನಿಖರವಾಗಿ ಪತ್ತೆ ಮಾಡಬಹುದು. ಇದೀಗ, ನಾವು ನಮ್ಮ ಪೊಲೀಸರಿಗೆ ಮೂಲ ಐಟಿ ಕೆಲಸವನ್ನು ಕಲಿಸುತ್ತಿದ್ದೇವೆ, ಆದರೆ ಅದು ಹೈಟೆಕ್ ಅಪರಾಧಗಳನ್ನು ಪರಿಹರಿಸಲು ಸಹಾಯ ಮಾಡುವುದಿಲ್ಲ ”ಎಂದು ಅವರು ಹೇಳಿದರು. ಬೆಂಗಳೂರು ನಗರ ಪೊಲೀಸರು ಉತ್ತಮ ಸಲಕರಣೆಗಳೊಂದಿಗೆ ಸಿಇಎನ್ ಕೇಂದ್ರಗಳನ್ನು ಬಲಪಡಿಸುವತ್ತ ಗಮನಹರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


