ಹೊಸ ವರ್ಷದ ಸ್ವಾಗತಕ್ಕೆ ರಾಜ್ಯ ಕರಾವಳಿ ತೀರಗಳಿಗೆ ಪ್ರವೇಶ ನಿಷೇಧ
ಕೋವಿಡ್ -19 ಹೊಸ ಸ್ವರೂಪದ ಸೋಂಕು ಹರಡುವಿಕೆ ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ಉಲ್ಲಾಳ, ಸೋಮೇಶ್ವರ, ಮೊಗವೀರ ಪಟ್ಟಣ, ಪಣಂಬೂರು, ತಣ್ಣೀರ್‍ಬಾವಿ, ಸಸಿಹಿತ್ಲು ಮತ್ತು ಸೂರತ್ಕಲ್ ಬೀಚ್ ಸೇರಿದಂತೆ ಕಡಲತೀರಗಳಿಗೆ....

ಮಂಗಳೂರು: ಕೋವಿಡ್ -19 ಹೊಸ ಸ್ವರೂಪದ ಸೋಂಕು ಹರಡುವಿಕೆ ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ಉಲ್ಲಾಳ, ಸೋಮೇಶ್ವರ, ಮೊಗವೀರ ಪಟ್ಟಣ, ಪಣಂಬೂರು, ತಣ್ಣೀರ್‍ಬಾವಿ, ಸಸಿಹಿತ್ಲು ಮತ್ತು ಸೂರತ್ಕಲ್ ಬೀಚ್ ಸೇರಿದಂತೆ ಕಡಲತೀರಗಳಿಗೆ ಡಿಸೆಂಬರ್ 31ರ ಮಧ್ಯಾಹ್ನದಿಂದ ಜನವರಿ 2ರ ಮಧ್ಯಾಹ್ನದವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಆದರೆ, ಸಾಂಪ್ರದಾಯಿಕ ಮೀನುಗಾರರಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ. ವಿಶೇಷವಾಗಿ ಹೊಸ ವರ್ಷದ ಮುನ್ನಾದಿನದಂದು ಕಡಲತೀರಗಳಿಗೆ ಜನರ ಹರಿವು ತಡೆಯಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ, ಡಿ 31 ಮತ್ತು ಜನವರಿ 1 ರಂದು ಜನಸಾಮಾನ್ಯರು ಮತ್ತು ಪ್ರವಾಸಿಗರು ಜಲಮೂಲಗಳಿಗೆ ಪ್ರವೇಶಿಸುವುದನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ.
ಕರ್ನಾಟಕ ಸಾಂಕ್ರಾಮಿಕ ರೋಗಗಳ ಕೋವಿಡ್ -19 ನಿಯಂತ್ರಣ 2020 ಮತ್ತು ಸಿಆರ್‌ಪಿಸಿಯ ಸೆಕ್ಷನ್ 144(3)ರ ಅಡಿ ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ, ಹನೂರು ತಾಲ್ಲೂಕಿನ ಹೊಗೇನಕಲ್ ಜಲಪಾತಗಳು, ಚಾಮರಾಜನಗರ ತಾಲ್ಲೂಕಿನ ಚಿಕ್ಕಹೊಳೆ-ಸುವರ್ಣಾವತಿ ಜಲಾಶಯದಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಪ್ರವಾಸಿಗರ ಪ್ರವೇಶ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.
ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಜಲಮೂಲಗಳಲ್ಲಿ ಸೇರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೋವಿಡ್ -19 ಹರಡುವಿಕೆ ತಡೆಗಟ್ಟಲು ಈ ನಿರ್ಬಂಧಗಳನ್ನು ಹೇರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


