ರಾಜ್ಯ

ನಮ್ಮೆಲ್ಲರ ಗುರಿ ಸಹನಶೀಲವಾದ ಸಮಾಜ ನಿರ್ಮಾಣ, ಮಕ್ಕಳ‌ ಭವ್ಯ‌ ಭವಿಷ್ಯವಷ್ಟೇ: ಸುರೇಶ್ ಕುಮಾರ್

2009ರಲ್ಲಿ ಶಿಕ್ಷಣ ಹಕ್ಕು ಕಾಯಿದೆ ರಾಷ್ಟ್ರಾದ್ಯಂತ ಜಾರಿಗೆ ಬಂದಿತು. ಅದರಂತೆ 6-14 ವರ್ಷದ ವಿದ್ಯಾರ್ಥಿಯ ಕಲಿಕೆಯನ್ನು ಹಕ್ಕಾಗಿ ಪರಿಗಣಿಸಲಾದ ಬಳಿಕ 2012-13ರಿಂದ ಯಾವುದೇ ಪಠ್ಯಕ್ರ ಮದ ಆಯ್ದ ಅನುದಾನ ರಹಿತ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳ ಕಲಿಕೆಯನ್ನೂ ಪೋಷಿಸುವ ನಿಲುವನ್ನು ಸಹ ಅಂದಿನ ಸರ್ಕಾರ ತೆಗೆದುಕೊಂಡಿತ್ತು.

ನಮ್ಮೆಲ್ಲರ ಗುರಿ ಸಹನಶೀಲವಾದ ಸಮಾಜ ನಿರ್ಮಾಣ, ಮಕ್ಕಳ‌ ಭವ್ಯ‌ ಭವಿಷ್ಯವಷ್ಟೇ: ಸುರೇಶ್ ಕುಮಾರ್
ಸುರೇಶ್ ಕುಮಾರ್
Published On :

ಬೆಂಗಳೂರು: 2009ರಲ್ಲಿ ಶಿಕ್ಷಣ ಹಕ್ಕು ಕಾಯಿದೆ ರಾಷ್ಟ್ರಾದ್ಯಂತ ಜಾರಿಗೆ ಬಂದಿತು. ಅದರಂತೆ 6-14 ವರ್ಷದ ವಿದ್ಯಾರ್ಥಿಯ ಕಲಿಕೆಯನ್ನು ಹಕ್ಕಾಗಿ ಪರಿಗಣಿಸಲಾದ ಬಳಿಕ 2012-13ರಿಂದ ಯಾವುದೇ ಪಠ್ಯಕ್ರ ಮದ ಆಯ್ದ ಅನುದಾನ ರಹಿತ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳ ಕಲಿಕೆಯನ್ನೂ ಪೋಷಿಸುವ ನಿಲುವನ್ನು ಸಹ ಅಂದಿನ ಸರ್ಕಾರ ತೆಗೆದುಕೊಂಡಿತ್ತು.

ಅಂದಿನಿಂದ ಪ್ರಾರಂಭವಾದಂತೆ ಯಾವುದೇ ಒಂದು ಶೈಕ್ಷಣಿಕ ಸಾಲು ಪೂರ್ಣಗೊಂಡ ಮರುವರ್ಷದಲ್ಲಿ ಹಿಂ ದಿನ ಸಾಲಿನ ವಿದ್ಯಾರ್ಥಿಗಳ ದಾಖಲಾತಿಯ ಆಧಾರದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಿಗೆ ಆರ್ ಟಿಇ ಶುಲ್ಕವನ್ನು ಮರುಪಾವತಿಸುವ ಪ್ರಕ್ರಿಯೆ ಆನೂಚಾನವಾಗಿ ನಡೆದುಕೊಂಡು ಬಂದಿದೆ. ನನಗೆ  ಒದಗಿಸಲಾದ ಅಂಕಿಅಂಶಗಳ ಆಧಾರದಲ್ಲಿ 2012-13ರಿಂದ ಇಲ್ಲಿಯವರೆಗೆ ಸುಮಾರು 5.35ಲಕ್ಷ ಮಕ್ಕಳಿಗೆ ಆರ್ ಟಿಇ ಅಡಿಯಲ್ಲಿ ವಿವಿಧ ಖಾಸಗಿ ಅನುದಾನರಹಿತ ಶಾಲೆಗಳಿಗೆ ರಾಜ್ಯ ಸರ್ಕಾರವು ದಾಖಲಾತಿಯನ್ನು ಒದ ಗಿಸಿದ್ದು,ಅಷ್ಟು ಸಂಖ್ಯೆಯ ಮಕ್ಕಳ ಬೋಧನಾ ಶುಲ್ಕದ ಮರುಪಾವತಿಯಾಗಿ  2020-21ನೇ ಸಾಲಿನಲ್ಲಿ ಎಲ್ಲ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ನಮ್ಮ ಸರ್ಕಾರ ತನ್ನ ಆಯವ್ಯಯದಲ್ಲಿ ರೂ.550 ಕೋಟಿಗಳನ್ನು ಆರ್ ಟಿಇ ಶುಲ್ಕ ಮರುಪಾವತಿಗೆ ಮೀಸಲಿಟ್ಟಿತ್ತು. ಕೋವಿಡ್‌ ಸಂಕಷ್ಟದ ಸಮಯದಲ್ಲಿಯೂ ಪರಿಸ್ಥಿತಿಯನ್ನು ಅರಿತು, ನಮ್ಮ ಒತ್ತಾಸೆಯ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿ  ಯೂರಪ್ಪನವರು,ಖಾಸಗಿ ಶಾಲೆಗಳಿಗೆ ಅನವಶ್ಯಕ ಸಮಸ್ಯೆಯಾಗಬಾರದೆನ್ನುವ ಸದುದ್ದೇಶದಿಂದ ಮೊದ ಲ ಎರಡು ಕಂತುಗಳಾದ ರೂ.275 ಕೋಟಿ ರೂಗಳನ್ನು ಜೂ 6ರಲ್ಲಿ ಒಟ್ಟಿಗೇ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೇ ಸೆ 28 ರಂದು ಎರಡನೇ ಬಾರಿಗೆ ಮೂರನೇ ಕಂತು.ರೂ.137.5 ಕೋಟಿ ಹಾಗೂ ಡಿಸೆಂಬರ್ 10ರಲ್ಲಿ ಮೂರನೇ ಬಾರಿಗೆ ನಾಲ್ಕನೇ ಹಾಗೂ ಕೊನೆಯ ಕಂತಾದ ರೂ.137.50 ಕೋಟಿ ಅಂದರೆ ಡಿಸೆಂಬರ್‌ 2020ರ ಮಾಸದ ಒಳಗೆ ಇಡೀ ವರ್ಷದ ಅನುದಾನವಾದ ರೂ.550 ಕೋಟಿಗಳನ್ನು  ನಮ್ಮ ಸರ್ಕಾರ ಖಾಸಗಿ ಶಾಲೆಗಳ ಆರ್.ಟಿ.ಇ.ಶುಲ್ಕ ಮರುಪಾವತಿಗೆ ಬಿಡುಗಡೆ ಮಾಡಿದೆ ಎಂದು ಅವರು ವಿವರಿಸಿದರು. ಯಾವುದೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಆಯವ್ಯಯದಲ್ಲಿ ನಿಗದಿಯಾದ ಆರ್.ಟಿ.ಇ ಶುಲ್ಕ ಮರುಪಾವ ತಿ ಅನುದಾನ ಇಷ್ಟು ಶೀಘ್ರವಾಗಿ ಬಿಡುಗಡೆಗೊಂಡಿರುವುದಕ್ಕೆ ಇದು ಮೊದಲ  ಬಾರಿಯ ದಾಖಲೆಯಾಗಿದೆ.ಸ ರ್ಕಾರದ ಆದೇಶಗಳಿಗೆ ಅನುಗುಣವಾಗಿ ಡಿ 11ರಂದೇ ನಮ್ಮ ಇಲಾಖೆಯ ಆಯುಕ್ತರು ಈ ಸಾಲಿಗೆ ಆರ್‌ಟಿಇ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಅಂತಿಮ ಸುತ್ತೋಲೆಯನ್ನು ಹೊರಡಿಸಿ,ಈ ಸಾಲಿಗೆ ನಿಗದಿಯಾದ ಸಂಪೂರ್ಣ ಅನುದಾನವನ್ನು ಜಿಲ್ಲೆಗಳಿಗೆ ಹಂಚಿಕೆ  ಮಾಡಿದ್ದಾರೆ.2019-20ನೇ ಸಾಲಿನ ಆರ್ಟಿಇ ಶುಲ್ಕ ಮರು ಪಾವತಿಗೆ ಈ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅನುವಾಗುವಂತೆ ಹದಿನೈದು ದಿನಗಳ ಒಳಗೆ ಶಾಲೆಗಳ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡುವುದು ಹಾಗೂ ಯಾವುದೇ ಕಾರಣಕ್ಕೂ ಅನುದಾನವನ್ನು ಉಪನಿ ರ್ದೇಶಕರು ಬಳಸದೆ  ಉಳಿಸತಕ್ಕದ್ದೆಲ್ಲವೆಂದು ಸೂಚನೆ ಸಹ ನೀಡಿದ್ದಾರೆ. ನನಗೆ ಲಭ್ಯವಿರುವ ಮಾಹಿತಿಯಂತೆ 2019-20ನೇ ಸಾಲಿಗೆ ಸಂಬಂಧಿಸಿದಂತೆ ಈ ಸಾಲಿನಲ್ಲಿ ಬಿಡುಗಡೆ ಮಾಡಲಾದ 550 ಕೋಟಿ ರೂಗಳಿಗೆ ಅನುಸಾ ರವಾಗಿ ಡಿ 23ರ ಮಾಹಿತಿಯಂತೆ 441.53 ಕೋಟಿ ರೂಗಳನ್ನು ಶಾಲೆಗಳಿಗೆ ಬಿಡುಗಡೆ ಮಾಡಲಾಗಿದೆ.ಅಂದರೆ  ಸುಮಾರು ಶೇ.80 ರಷ್ಟು ಪ್ರಗತಿ ಈಗಾಗಲೇ ತೋರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನನ್ನ ಗ್ರಹಿಕೆಯಂತೆ ಯಾವುದೇ ಶೈಕ್ಷಣಿಕ ಸಾಲಿನಲ್ಲಿ,ಡಿಸೆಂಬರ್‌ ಮಾಸಾಂತ್ಯಕ್ಕೆ ಆರ್.ಟಿಇ ಶುಲ್ಕ ಮರುಪಾವತಿ ಪ್ರಕ್ರಿಯೆಯಲ್ಲಿ ಇಲಾಖೆಯು ಇಷ್ಟು ಪ್ರಗತಿಯನ್ನು ಸಾಧಿಸಿದ್ದಿಲ್ಲ.ಇನ್ನು ಆನ್‌ ಲೈನ್‌ ತಂತ್ರಾಂಶದ ಮೂಲಕ ಶುಲ್ಕ ಮರುಪಾವತಿಯನ್ನು ಸರ್ಕಾರವು ಪ್ರಾರಂಭಿಸಿದ ಪ್ರಮುಖ ಉದ್ದೇಶ, ಮಧ್ಯವರ್ತಿಗಳ  ಉಪಟಳವನ್ನು ತಡೆಯಬೇಕು,ಯಾವುದೇ ಶಾಲೆಯ ಆಡಳಿತ ಮಂಡಳಿಯು ವ್ಯವಸ್ಥೆಯ ಲೋಪದೋಷಗಳಿಂದ ಅನಗತ್ಯ ಶೋ ಷಣೆಗೆ ಒಳಗಾಗಬಾರದೆಂಬುದಾಗಿತ್ತು.ತಂತ್ರಾಂಶ ಬಳಕೆಯೆನ್ನು ವುದು ಪಾರದರ್ಶಕತೆಗೆ ಒತ್ತುಕೊಟ್ಟಿದ್ದಷ್ಟೇ ಅಲ್ಲ,ವಿದ್ಯಾರ್ಥಿಯ ದಾಖಲಾತಿಗೆ ಅನುಗುಣವಾದ ಶುಲ್ಕದ ಸರಳ  ಮರುಪಾವತಿಗೆ ನಾಂದಿ ಹಾಡಿತು.ಇನ್ನು ಯಾವುದೇ ಶಾಲೆ ಅಪೇಕ್ಷಿತ ದಾಖಲೆಗಳನ್ನು ಆನ್‌ ಲೈನ್‌ ಮೂಲಕ ಸಲ್ಲಿಸದೇ ಇದ್ದಲ್ಲಿ,ತಂತ್ರಾಂಶವು ಅದನ್ನು ಅನುಮೋದಿಸದೇ ಇರುವುದು ಸಹಜವಾಗಿ ನಡೆಯು ವ ಪ್ರಕ್ರಿಯೆಯಾಗಿದೆ.ತಂತ್ರಾಂಶದ ಬಳಕೆಯನ್ನು ಸೀಮಿತ ಗೊಳಿಸಿದಲ್ಲಿ ಅದು ಇಲ್ಲಸಲ್ಲದ ಸಮಸ್ಯೆಗಳಿಗೆ  ದಾರಿ ಮಾಡುತ್ತದೆ ಎನ್ನುವುದನ್ನು ವಿಶೇಷವಾಗಿ ಸಮರ್ಥನೆ ಮಾಡಿಕೊಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ನನಗೆ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 2016-17 ನೇ ಸಾಲಿಗೆ ಸಂಬಂಧಿಸಿದಂತೆ ಇಲ್ಲಿಯ ವರೆಗೆ ಸುಮಾರು 12 ಶಾಲೆಗಳು ನಿಗದಿತ ದಾಖಲೆಗಳನ್ನು ಸಲ್ಲಿಸಿಲ್ಲದ ಕಾರಣ ಆರ್.ಟಿಇ ಶುಲ್ಕ ಮರು ಪಾವತಿ ಯನ್ನು ಇಲ್ಲಿಯವರೆಗೆ ಪಡೆದಿಲ್ಲ.2017-18ಕ್ಕೆ ಸಂಬಂಧಿಸಿದಂತೆ 29 ಶಾಲೆಗಳು,  2018-19ನೇ ಸಾಲಿಗೆ ಸಂಬಂಧಿ ಸಿದಂತೆ 71 ಶಾಲೆಗಳು,2019-20 ನೇ ಸಾಲಿಗೆ ಸಂಬಂಧಿಸಿದಂತೆ 1039 ಶಾಲೆಗಳು ವಿವಿಧ ನಿರೀಕ್ಷಿತ ದಾಖಲೆಗಳ ನ್ನು ಸಲ್ಲಿಸದ ಕಾರಣ ಇನ್ನೂ ಆರ್.ಟಿ.ಇ.ಶುಲ್ಕ ಮರುಪಾವತಿಯನ್ನು ಇಂದಿಗೂ ಪಡೆದಿರುವುದಿಲ್ಲ ಎಂದು ಆರ್ ಟಿಇ ಹಣ ಮರು ಪಾವತಿಗೆ ಇರುವ ಅಡ್ಡಿಯನ್ನು  ತಿಳಿಸಿದ್ದಾರೆ. ಈ ಎಲ್ಲ ಶಾಲೆಗಳೂ ನಿರೀಕ್ಷಿತ ದಾಖಲೆಗಳನ್ನು ತಂತ್ರಾಂಶದ ಮೂಲಕ ಸಲ್ಲಿಸಿದ ಬಳಿಕವೂ ಹಣ ಪಾವತಿ ವಿಳಂಬವಾದ ಪ್ರಕರಣಗಳೇನಾದರೂ ಕಂಡು ನನ್ನ ಗಮನಕ್ಕೆ ತಂದಲ್ಲಿ ಅಂತಹ ಶಾಲೆಗಳಿಗೆ ನ್ಯಾಯ ಒದಗಿಸಿ ಕೊಡುವ ಭರವಸೆಯನ್ನು ನಾನು ನೀಡುತ್ತೇನಲ್ಲದೇ,ಈ ಲೋಪಕ್ಕೆ  ಕಾರಣವಾದವರ ವಿರುದ್ಧ ಕಠಿಣ ಕ್ರಮಕ್ಕೂ ಮುಂದಾಗುತ್ತೇನೆ.ದಾಖಲೆಗಳನ್ನು ಸಲ್ಲಿಸದೆಯೂ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸುವವರಿಗೆ ನನ್ನಲ್ಲಿ ಉತ್ತರವಿಲ್ಲ ಎಂದು ಹೇಳುವ ಮೂಲಕ ಶಾಲೆಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.

ಬಹಳ ಪ್ರಮುಖವಾದ ಅಂಶವೆಂದರೆ,ಆರ್.ಟಿ.ಇ.ಶುಲ್ಕ ಮರುಪಾವತಿಯೆನ್ನುವುದು ಸರ್ಕಾರವು ಯಾವುದೇ ವಿದ್ಯಾರ್ಥಿಯ ಕಲಿಕೆಗೆ ತೊಡಕಾಗಬಾರದೆನ್ನುವ ಸದುದ್ದೇಶದಿಂದ ತನ್ನ ಸೀಮಿತ ಸಂಪನ್ಮೂಲಗಳ ನಡುವೆ ಯೂ ನಿರ್ವಹಿಸುತ್ತಿರುವ ಪ್ರಧಾನ ಜವಾಬ್ದಾರಿಯಾಗಿದೆ.ಸರ್ಕಾರಿ ಶಾಲಾ ವ್ಯವಸ್ಥೆಯನ್ನು  ಪೋಷಿಸಬೇಕೆನ್ನುವ ಪ್ರಮುಖ ಜವಾಬ್ದಾರಿಯನ್ನು ಹೊಂದಿಯೂ ಯಾವುದೇ ಮಗು ಕಲಿಕೆಯಿಂದ ವಂಚಿತವಾಗಬಾರದೆನ್ನುವ ಸದಾಶಯವನ್ನು ಸರ್ಕಾರ ಈ ಶುಲ್ಕ ಮರುಪಾವತಿಯ ಮೂಲಕ ಶೃತಪಡಿಸುತ್ತದೆ ಎಂದು ಅವರು ವಿವರಿಸಿದರು.

ಇನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳು ತಮ್ಮಲ್ಲಿ ಕೆಲಸ ಮಾಡುವ ಶಿಕ್ಷಕರು,ಶಿಕ್ಷಕೇತರರಿಗೆ ಯಾವುದೇ ಪ್ರತಿಕೂಲ ಸಂದರ್ಭದಲ್ಲಿಯೂ ಉದ್ಯೋಗ ಭದ್ರತೆಯನ್ನು ನೀಡಬೇಕಾಗಿದೆ.ಅದು ಅವುಗಳ ಪ್ರಾಥಮಿಕ ಜವಾ ಬ್ದಾರಿಯೂ ಹೌದು.ಆದರೂ ಖಾಸಗಿ ಶಾಲೆಗಳು ನಮ್ಮ ಮಕ್ಕಳಿಗೆ ವಿದ್ಯಾದಾನವನ್ನು ಮಾಡುವ  ಶ್ರೇಷ್ಠ ಸಂಸ್ಥೆಗ ಳೆಂದೇ ಭಾವಿಸಿ ಸರ್ಕಾರವು ಹಲವು ಸುಧಾರಣೆಗಳಿಗೆ ಮುಂದಾಗಿದೆ. ನಿಯಮಗಳ ವ್ಯಾಪ್ತಿಯಲ್ಲಿ ಪಡೆಯಬೇಕಾ ದ ಎಲ್ಲ ಸವಲತ್ತುಗಳನ್ನು ಸರ್ಕಾರವು ಗಮನಿಸಿಯೇ ಹಲವು ರಿಯಾಯಿತಿಗಳಿಗೆ ಮುಂದಾಗಿದೆ.ಯಾವ ಆಗ್ರಹ ಗಳನ್ನು ನಿಯಮಗಳ ಆಧಾರದಲ್ಲಿ ಪರಿಗಣಿಸಬಹುದೋ ಅಂತಹವುಗಳನ್ನು  ಸರ್ಕಾರವು ಸಹಾನುಭೂತಿಯಿಂ ದಲೇ ಗಮನಿಸಿದೆ ಎಂದು ತಿಳಿಸುವ ಮೂಲಕ ಶಾಲೆಗಳ ಪರವಾಗಿದೆ ಎಂದು ತಿಳಿಸಿದರು.

ಅದನ್ನು ಬಿಟ್ಟು,ಆರ್.ಟಿಇ ಶುಲ್ಕ ಮರುಪಾವತಿಯಾಗಿದೆ ಎನ್ನುವ ಶಿಕ್ಷಣ ಸಚಿವರ ಹೇಳಿಕೆ ಸುಳ್ಳು ಎಂದು ಆ ಧಾರರಹಿತವಾದ ಆಪಾದನೆ ಮಾಡುವುದು ಅನವಶ್ಯಕ ಪ್ರಚಾರವನ್ನು,ಗಿಟ್ಟಿಸುವ ತಂತ್ರವಷ್ಟೇ ಹೊರತು ಬೇರೇ ನೂ ಆಗಲು ಸಾಧ್ಯವಿಲ್ಲ.ಆರೋಪಗಳನ್ನು ಮಾಡಿದವರೂ ಸಹ ಖಾಸಗಿ ಶಾಲೆಗಳ ಸಾಮಾಜಿಕ  ಜವಾಬ್ದಾರಿ, ಸರ್ಕಾರದ ನಿಯಂತ್ರಣದ ಇತಿಮಿತಿಗಳ ಬಗ್ಗೆಯೂ ಚರ್ಚಿಸಲಿ.ನಮಗೆ ಬೇಕಿರುವುದು ಸಹನಶೀಲವಾದ ಸಮಾ ಜ,ನಮ್ಮ ಮಕ್ಕಳ ಭವ್ಯ‌ ಭವಿಷ್ಯ.ಅದರಾಚೆಗೆ ಎಲ್ಲವೂ ಅರ್ಥಹೀನ ಎಂದು ಹೇಳುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರ ವಿರುದ್ದ ಕಿಡಿಕಾರಿದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.