ಐಎಂಎ ಹಣ ಪಡೆಯಲು ಅರ್ಜಿ ಸಲ್ಲಿಸುವ ದಿನಾಂಕ ಜನವರಿ 3ರವರೆಗೆ ವಿಸ್ತರಣೆ
ವಿಶೇಷ ನ್ಯಾಯಾಲಯದ ಆದೇಶದನ್ವಯ ಐಎಂಎನಲ್ಲಿ ಹಣ ಹೂಡಿರುವವರು ತಮ್ಮ ಹಣ ವಾಪಸ್ ಪಡೆಯುವಲ್ಲಿ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಜನವರಿ 3 ರ ವರೆಗೆ ವಿಸ್ತರಿಸಲಾಗಿದೆ.

ಬೆಂಗಳೂರು: ವಿಶೇಷ ನ್ಯಾಯಾಲಯದ ಆದೇಶದನ್ವಯ ಐಎಂಎನಲ್ಲಿ ಹಣ ಹೂಡಿರುವವರು ತಮ್ಮ ಹಣ ವಾಪಸ್ ಪಡೆಯುವಲ್ಲಿ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಜನವರಿ 3 ರವರೆಗೆ ವಿಸ್ತರಿಸಲಾಗಿದೆ.
ಐಎಂಎ ಸಂಸ್ಥೆಯಲ್ಲಿ ಹಣ ಹೂಡಿರುವವರ ಬಳಿ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಅಥವಾ ಐಎಂಎ ಸಂಸ್ಥೆಯವರು ನೀಡಿರುವ ಗುರುತಿನ ಚೀಟಿ ಇಲ್ಲದೆಯೂ ಸಹ ತಮ್ಮ ಹಣ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸೆಕ್ಷನ್ ೭ (೩) ರ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ (೨೦೦೪) ರ ಪ್ರಕಾರ ನಿಗದಿಪಡಿಸಿದ ಕೊನೆಯ ದಿನದ ಒಳಗಾಗಿ ಅರ್ಜಿ ಸಲ್ಲಿಸದಿದ್ದರೆ ನಂತರ ಯಾವುದೇ ಕ್ಲೇಮುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಐಎಂಎ ಪ್ರಕರಣದ ವಿಶೇಷ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ವಿವರಗಳಿಗೆ ಅರ್ಜಿದಾರರು ಕಾಲ್‌ಸೆಂಟರ್ ಸಂಖ್ಯೆ ೦೮೦-೪೬೮೮೫೯೫೯ ಗೆ ಬೆಳಿಗ್ಗೆ ೮.೦೦ ಗಂಟೆಯಿಂದ ರಾತ್ರಿ ೮.೦೦ ಗಂಟೆ ವರೆಗೆ ಕರೆ ಮಾಡಬಹುದು. ಅಲ್ಲದೆ ವೆಬ್‌ಸೈಟ್ "imaclaims.karnataka.gov.in ಇ ಮೇಲ್ - splocaima20@gmail.com ವಾಟ್ಸ್‌ಆಪ್ ಸಂಖ್ಯೆ: ೭೯೭೫೫೬೮೮೮೦ ಅಥವಾ ಚಾಟ್‌ಬಾಕ್ಸ್ ಲಿಂಕ್ https://ot.v-connect.in/ ಅಥವಾ ಸಮಕ್ಷಮ ಪ್ರಾಧಿಕಾರದ ಕಚೇರಿ, ೨ನೇ ಮಹಡಿ, ಬಿ.ಎಂ.ಟಿ.ಸಿ. ಕಾಂಪ್ಲೆಕ್ಸ್, ಶಾಂತಿನಗರ, ಬೆಂಗಳೂರು-೫೬೦ ೦೨೭ ಇಲ್ಲಿ ಪಡೆಯಬಹುದಾಗಿದೆ ಎಂದು ಐಎಂಎ ವಿಶೇಷ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


