ರಾಜ್ಯ

ಹುಬ್ಬಳ್ಳಿ: ಪತ್ನಿ ಕಣ್ಣೆದುರೇ ಕೆರೆಗೆ ಹಾರಿ ಪತಿ ಆತ್ಮಹತ್ಯೆ!

ಉದ್ಯಮದಲ್ಲಿನ ನಷ್ಟ ಹಾಗೂ ಕೌಟುಂಬಿಕ ಕಲಹಕ್ಕೆ ಬೇಸತ್ತ ಪತಿಯೊಬ್ಬ ತನ್ನ ಪತ್ನಿಯ ಕಣ್ಣೆದುರೇ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಸಂತೋಷ್ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿ: ಪತ್ನಿ ಕಣ್ಣೆದುರೇ ಕೆರೆಗೆ ಹಾರಿ ಪತಿ ಆತ್ಮಹತ್ಯೆ!
ರೋಹಿತ್ ಗೌಡ ಪಾಟೀಲ್
Published On :

ಹುಬ್ಬಳ್ಳಿ: ಉದ್ಯಮದಲ್ಲಿನ ನಷ್ಟ ಹಾಗೂ ಕೌಟುಂಬಿಕ ಕಲಹಕ್ಕೆ ಬೇಸತ್ತ ಪತಿಯೊಬ್ಬ ತನ್ನ ಪತ್ನಿಯ ಕಣ್ಣೆದುರೇ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಸಂತೋಷ್ ನಗರದಲ್ಲಿ ನಡೆದಿದೆ.

ಕೆರೆಗೆ ಹಾರಿದವ್ಯಕ್ತಿತಿಯನ್ನು ಸಂತೋಷ್ ನಗರ ನಿವಾಸಿ ರೋಹಿತ್ ಗೌಡ ಪಾಟೀಲ್ ಎಂದು ಗುರುತಿಸಲಾಗಿದೆ. ಈತ ಹೊಟೆಲ್ ಉದ್ಯಮಿಯಾಗಿದ್ದ.

ನಿನ್ನೆ ರಾತ್ರಿ ಮದ್ಯ ಸೇವಿಸಿ ಬಂದು ಪತ್ನಿಯೊಂದಿಗೆ ಜಗಳವಾಡಿದ್ದ ರೋಹಿತ್ ಗೌಡ ಮುಂಜಾನೆ ಎಂದಿನಂತೆ ಹೋಟೆಲ್ ಗೆ ತೆರಳಿದ ವೇಳೆ ಪತ್ನಿಯ ಬಳಿ ಬೈಕ್ ನ ಕೀ ನೀಡುವಂತೆ ಕೇಳಿದ್ದಾನೆ. ಆದರೆ ಪತ್ನಿ ಕೀ ನೀಡಲು ನಿರಾಕರಿಸಿದ್ದಾಳೆ. ಆ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ತಕ್ಷಣ ಕೋಪಗೊಂಡ ರೋಹಿತ್ ಗೌಡ ಹೋಟೆಲ್ ಹಿಂಭಾಗದ ಕೆರೆಯತ್ತ ಓಡಿದ್ದಾನೆ.

Story image

ಪತ್ನಿ ಎಷ್ಟು ಕರೆಯುತ್ತಿದ್ದರೂ ಕೇಳದೆ ನಾನು ಸಾಯುತ್ತೇನೆ ಎಂದು ಹೇಳಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ತನ್ನ ಕಣ್ಣೆದುರೇ ನಡೆದ ಘಟನೆಯಿಂದ ಪತ್ನಿ ರೋಧಿಸುತ್ತಾ ಕೆರೆ ದಂಡೆಯ ಮೇಲೆ ಕುಳಿತ ದೃಶ್ಯ ಮನಕಲಕುವಂತಿತ್ತು.

ಪೋಲೀಸರು, ಅಗ್ನಿಶಾಮಕ ದಳದ ನೆರವಿನಿಂದ ರೋಹಿತ್ ಮೃತದೇಹವನ್ನು ಮೇಲೆತ್ತಲಾಗಿದೆ. ಘಟನೆ ಸಂಬಂಧ ಹುಬ್ಬಳ್ಳಿಯ ಅಶೋಕ್ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.