ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಸ್ಟಾಪಿಂಗ್ ಘಟಕಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸನ್ ಮೊಬಿಲಿಟೀಸ್ ಕಂಪೆನಿಯ ವಿದ್ಯುತ್ ವಾಹನಗಳ ಬ್ಯಾಟರಿ ಸ್ವಾಪಿಂಗ್ ಘಟಕಗಳಿಗೆ ಚಾಲನೆ ನೀಡಿದರು.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸನ್ ಮೊಬಿಲಿಟೀಸ್ ಕಂಪೆನಿಯ ವಿದ್ಯುತ್ ವಾಹನಗಳ ಬ್ಯಾಟರಿ ಸ್ವಾಪಿಂಗ್ ಘಟಕಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ನಾಗರಿಕರು ವಿದ್ಯುತ್ ಚಾಲಿತ ವಾಹನಗಳನ್ನು ಬಳಸಲು ಉತ್ಸುಕ ರಾಗಿದ್ದಾರೆ.ಆದರೆ ಇದಕ್ಕೆ ಪೂರಕ ಸೌಲಭ್ಯಗಳನ್ನು ಒದಗಿಸಬೇಕಾಗಿದೆ.ಈ ನಿಟ್ಟಿನಲ್ಲಿ ಸನ್ ಮೊಬಿಲಿಟಿಯವರು ರೂಪಿಸಿರುವ ಬ್ಯಾಟರಿ ಸ್ವಾಪಿಂಗ್ ನೆಟ್ ವರ್ಕ್ ಒಂದು ಮಹತ್ವಪೂರ್ಣ ಬೆಳವಣಿಗೆ ಎಂದು ಶ್ಲಾಘಿಸಿದರು.ಪರಿ ಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಸರ್ಕಾರ ಒತ್ತು ನೀಡಲಿದ್ದು,ಬ್ಯಾಟರಿ ಸ್ವಾಪಿಂಗ್ ಘಟಕಗಳು ವೆಚ್ಚ ಹಾಗೂ ಸಮಯದ ಉಳಿತಾಯ ಮಾಡಲಿವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಸನ್ ಮೊಬಿಲಿಟಿಯ ಉಪಾಧ್ಯಕ್ಷರಾದ ಉದಯ್ ಖೇಮ್ಕಾ ಹಾಗೂ ಚೇತನ್ ಮೈನಿ ಅವರು ಭಾರತದ ಮೊದಲ ವಿದ್ಯುತ್ ಚಾಲಿತ ಕಾರ್ ತಯಾರಿಕೆಗೆ ಕರ್ನಾಟಕ ಸರ್ಕಾರ ನೀಡಿದ ಬೆಂಬಲ ವನ್ನು ಸ್ಮರಿಸಿ,ಈ ಹಸಿರು ಉಪಕ್ರಮಕ್ಕೂ ಸರ್ಕಾರ ಬೆಂಬಲ ನೀಡುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ,ಸನ್ ಮೊಬಿಲಿಟಿ ಸಂಸ್ಥೆಯ ಸಿಇಓ ಡಿ.ಎಸ್. ರಾವತ್, ಪಿಯಾಜಿಯೊ ವೆಹಿಕಲ್ಸ್ ನ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿಯಾಗೊ ಗ್ರಾಫಿ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


