ರಾಜ್ಯ

ಹುಬ್ಬಳ್ಳಿ: ಪ್ರೀತಿ ಬೇಡ ದೂರವಾಗೋಣ ಎಂದದ್ದಕ್ಕೆ ಯುವತಿ ಮೇಲೆ ತಲ್ವಾರ್ ಬೀಸಿದ ಭಗ್ನಪ್ರೇಮಿ!

ತಾನು ಪ್ರೀತಿಸುತ್ತಿದ್ದ ಯುವತಿ ನನ್ನಿಂದ ದೂರವಾಗುತ್ತಾಳೆ ಎಂದು ತಿಳಿದಾಗ ಹತಾಶೆಗೊಂಡ ಭಗ್ನ ಪ್ರೇಮಿಯೊಬ್ಬ ನಡುರಸ್ತೆಯಲ್ಲೇ ಆಕೆಯ ಮೇಲೆ ತಲ್ವಾರ್​ನಿಂದ ಹಲ್ಲೆ ಮಾಡಿದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ: ಪ್ರೀತಿ ಬೇಡ ದೂರವಾಗೋಣ ಎಂದದ್ದಕ್ಕೆ ಯುವತಿ ಮೇಲೆ ತಲ್ವಾರ್ ಬೀಸಿದ ಭಗ್ನಪ್ರೇಮಿ!
Published On :

ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಯುವತಿ ನನ್ನಿಂದ ದೂರವಾಗುತ್ತಾಳೆ ಎಂದು ತಿಳಿದಾಗ ಹತಾಶೆಗೊಂಡ ಭಗ್ನ ಪ್ರೇಮಿಯೊಬ್ಬ ನಡುರಸ್ತೆಯಲ್ಲೇ ಆಕೆಯ ಮೇಲೆ  ತಲ್ವಾರ್​ನಿಂದ ಹಲ್ಲೆ ಮಾಡಿದ  ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಪ್ರೇಮಿ ಇಮ್ತಿಯಾಜ್ ಹಾಗೆ ತನ್ನ ಪ್ರೇಯಸಿಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಯುವಕ. 

Story image

ಯುವಕ ಇಮ್ತಿಯಾಜ್ ಕುಂದಗೋಳದ ಕುಂಕುರ ಗ್ರಾಮದವನಾಗಿದ್ದು ಆಟೋ ಚಾಲಕನಾಗಿ ಜೀವನ ನಡೆಸುತ್ತಿದ್ದ. ಇವನು ಕಳೆದ ಎರಡು ವರ್ಷಗಳಿಂದ ದೇಶಪಾಂಡೆ ನಗರದ ಯುವತಿಯನ್ನು ಪ್ರೀತಿಸುತ್ತಿದ್ದ. ಮೊದಲು ಪ್ರೀತಿಗೆ ಒಪ್ಪಿಕೊಂಡಿದ್ದ ಯುವತಿ ಇತ್ತೀಚೆಗೆ ಅವನಿಂದ ದೂರವಾಗಲು ಬಯಸಿದ್ದಾಳೆ. ಇದರಿಂದ ಹತಶಾನಾಗಿದ್ದ ಇಮ್ತಿಯಾಜ್ ಇಂದು ಬೆಳಿಗ್ಗೆ ಮಾಸ್ಕ್ ಧರಿಸಿ ಬಂದು ಯುವತಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ

ಘಟನೆಯಿಂದ ಯುವತಿ ಗಂಭೀರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Story image

ಈ ಸಂಬಂಧ ಉಪನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ಆರೋಪಿ ಇಮ್ತಿಯಾಜ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.