ರಾಜ್ಯ

ಲಾಲ್ ಬಾಗ್ ನಲ್ಲಿ 209 ಮಳೆ ನೀರು ಕೊಯ್ಲು ಹೊಂಡಗಳು!

ಬಾಸ್ ಮತ್ತು ಯೂನೈಟೆಡ್ ವೇ ಆಪ್ ಬೆಂಗಳೂರು ಸ್ವಯಂ ಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ ಲಾಲ್ ಬಾಗ್ ಸಸ್ಯೋದ್ಯಾನದಲ್ಲಿ ನಿರ್ಮಿಸಲಾಗಿರುವ 209 ಮಳೆ ನೀರು ಕೊಯ್ಲು ಹೊಂಡಗಳನ್ನು ತೋಟಗಾರಿಕೆ ಇಲಾಖೆ ಗುರುವಾರ ಉದ್ಘಾಟಿಸಿತು.

ಲಾಲ್ ಬಾಗ್ ನಲ್ಲಿ 209 ಮಳೆ ನೀರು ಕೊಯ್ಲು ಹೊಂಡಗಳು!
ಲಾಲ್ ಬಾಗ್
Published On :

ಬೆಂಗಳೂರು: ಬಾಸ್ ಮತ್ತು ಯೂನೈಟೆಡ್ ವೇ ಆಪ್ ಬೆಂಗಳೂರು ಸ್ವಯಂ ಸೇವಾ ಸಂಸ್ಥೆ ಸಹಭಾಗಿತ್ವದಲ್ಲಿ ಲಾಲ್ ಬಾಗ್ ಸಸ್ಯೋದ್ಯಾನದಲ್ಲಿ ನಿರ್ಮಿಸಲಾಗಿರುವ 209 ಮಳೆ ನೀರು ಕೊಯ್ಲು ಹೊಂಡಗಳನ್ನು ತೋಟಗಾರಿಕೆ ಇಲಾಖೆ ಗುರುವಾರ ಉದ್ಘಾಟಿಸಿತು.

ಈ 209 ಮಳೆ ನೀರು ಕೊಯ್ಲು ಹೊಂಡಗಳ ಪೈಕಿಯಲ್ಲಿ 124ನ್ನು ಬಾಸ್ ಕಂಪನಿ ಸಿಎಸ್ ಆರ್ ಚಟುವಟಿಕೆಯಡಿ ಪ್ರಯೋಜಿಸಿದ್ದರೆ , 85 ಹೊಂಡಗಳನ್ನು ತೋಟಗಾರಿಕೆ ಇಲಾಖೆ ಅನುದಾನ ಒದಗಿಸಿದೆ. ಇನ್ನೂ 50 ಹೂಂಡಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಹೆಚ್ಚಿನ ಮರಗಳಿದ್ದರೂ ಸಹ ನಾಗರಿಕ ಕಾರ್ಯಗಳು ಪ್ರಗತಿಯಲ್ಲಿರುವುದರಿಂದ ಲಾಲ್ ಬಾಗ್ ಮಾತ್ರವಲ್ಲದೇ, ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ  ತೀವ್ರ ಮಟ್ಟದಲ್ಲಿ ಕುಸಿದಿದ್ದು, ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಸಸ್ಯೋದ್ಯಾನಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಲಾಲ್ ಬಾಗ್ ನಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಈ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಲಾಲ್ ಬಾಗ್ ಉಪ ನಿರ್ದೇಶಕಿ ಜಿ. ಕುಸುಮಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.