ರಾಜ್ಯ

ಕೋವಿಡ್-19: ಬೆಂಗಳೂರಿನಲ್ಲಿ 369 ಸೇರಿ ರಾಜ್ಯದಲ್ಲಿಂದು 830 ಹೊಸ ಪ್ರಕರಣಗಳು ಪತ್ತೆ, 2164 ಸೋಂಕಿತರು ಗುಣಮುಖ 

ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇಂದು ಅತಿ ಕಡಿಮೆ ಎನ್ನುವಂತೆ 830 ಕೊರೋನಾ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.

ಕೋವಿಡ್-19: ಬೆಂಗಳೂರಿನಲ್ಲಿ 369 ಸೇರಿ ರಾಜ್ಯದಲ್ಲಿಂದು 830 ಹೊಸ ಪ್ರಕರಣಗಳು ಪತ್ತೆ, 2164 ಸೋಂಕಿತರು ಗುಣಮುಖ 
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇಂದು ಅತಿ ಕಡಿಮೆ ಎನ್ನುವಂತೆ 830 ಕೊರೋನಾ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. 2164 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಒಟ್ಟು ಸಂಖ್ಯೆ 874202 ಆಗಿದೆ. ಸದ್ಯ 16065 ಸಕ್ರಿಯ ಪ್ರಕರಣಗಳಿವೆ.

10 ಮಂದಿ ಸಾವನ್ನಪ್ಪಿದ್ದು, ಒಟ್ಟಾರೇ ಮೃತರ ಸಂಖ್ಯೆ 11954 ಆಗಿದೆ. ಒಟ್ಟಾರೇ ಸೋಂಕಿತರ ಸಂಖ್ಯೆ 902240 ಆಗಿದ್ದು, ಪಾಸಿಟಿವ್ ದರ ಶೇ.1.27, ಮರಣ ಪ್ರಮಾಣ ದರ ಶೇ.1. 20 ರಷ್ಟಿದೆ.

ಬಾಗಲಕೋಟೆಯಲ್ಲಿ 4, ಬಳ್ಳಾರಿ 17, ಬೆಳಗಾವಿ 11, ಬೆಂಗಳೂರು ಗ್ರಾಂ 7, ಬೆಂಗಳೂರು ನಗರ 369, ಬೀದರ್ 4, ಚಾಮರಾಜನಗರ 7, ಚಿಕ್ಕಬಳ್ಳಾಪುರ 31, ಚಿಕ್ಕಮಗಳೂರು 15, ಚಿತ್ರದುರ್ಗ 5, ದಕ್ಷಿಣ ಕನ್ನಡ 22, ದಾವಣಗೆರೆ 18, ಧಾರವಾಡ 14, ಗದಗ 2, ಹಾಸನ 29, ಹಾವೇರಿ 3, ಕಲಬುರಗಿ 12, ಕೊಡಗು 34, ಕೋಲಾರ 25, ಕೊಪ್ಪಳ 5, ಮಂಡ್ಯ 5, ಮೈಸೂರು 56, ರಾಯಚೂರು 6, ರಾಮನಗರ 2, ಶಿವಮೊಗ್ಗ 13, ತುಮಕೂರು 36, ಉಡುಪಿ 12, ಉತ್ತರ ಕನ್ನಡ 18, ವಿಜಯಪುರ 15, ಯಾದಗಿರಿ 17 ಪ್ರಕರಣಗಳು ಕಂಡುಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.