ಭದ್ರತೆಯೊಂದಿಗೆ ಕೆಲವೆಡೆ ಕೆಎಸ್ ಆರ್ ಟಿಸಿ ಬಸ್ ಸಂಚಾರ
ಮೂರು ದಿನಗಳಿಂದ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಇಂದು ಕೆಲವು ಮಾರ್ಗಗಳಲ್ಲಿ 210 ಬಸ್ ಗಳು ಭದ್ರತೆಯ ನಡುವೆ ಸಂಚರಿಸಿವೆ.

ಬೆಂಗಳೂರು: ಮೂರು ದಿನಗಳಿಂದ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಇಂದು ಕೆಲವು ಮಾರ್ಗಗಳಲ್ಲಿ 210 ಬಸ್ ಗಳು ಭದ್ರತೆಯ ನಡುವೆ ಸಂಚರಿಸಿವೆ.
ಬೆಂಗಳೂರು ವಿಭಾಗದಲ್ಲಿ 23, ಮೈಸೂರು ಗ್ರಾಮಾಂತರ 10, ಮೈಸೂರು ನಗರ 1, ಕೋಲಾರ 2, ಮಂಡ್ಯ 1, ಶಿವಮೊಗ್ಗ 5, ದಾವಣಗೆರೆ 3, ಪುತ್ತೂರು 1, ಮಂಗಳೂರು ವಿಭಾಗದಲ್ಲಿ 163 ಬಸ್ ಗಳು ಸಂಚರಿಸುತ್ತಿವೆ.
ಬೆಂಗಳೂರಿನಲ್ಲಿ ಕೂಡ ಇಂದು ಕೆಲವು ಬಿಎಂಟಿಸಿ ಬಸ್ಗಳು ಸಂಚಾರ ನಡೆಸತೊಡಗಿವೆ. ಬಿಎಂಟಿಸಿ ಬಸ್ಗಳ ಚಾಲಕರು, ಕಂಡಕ್ಟರ್ ಗೆ ಮುಷ್ಕರ ನಿರತರಿಂದ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಬೆಳಗ್ಗೆ ಪೊಲೀಸ್ ವಾಹನಗಳ ಭದ್ರತೆಯೊಂದಿಗೆ ಬಿಎಂಟಿಸಿ ಬಸ್ಗಳು ಸಂಚಾರ ಆರಂಭಿಸಿವೆ ಎಂದು ಕೆಎಸ್ಆರ್ಟಿಸಿ ಮಾಹಿತಿ ನೀಡಿದೆ.
ಸಂಚಾರ ಆರಂಭಿಸಿದ ಬಿಎಂಟಿಸಿ
ಇಂದು ಮುಂಜಾನೆ ಬೆಂಗಳೂರಿನ ಮೆಜೆಸ್ಟಿಕ್ನಿಂದ ಎಜಿಎಸ್ ಲೇಔಟ್ ಕಡೆಗೆ ಸಂಚರಿಸುವ 45D ಸಂಖ್ಯೆಯ ಬಸ್ ಸಂಚಾರ ಆರಂಭಿಸಿದೆ. ಪೊಲೀಸ್ ಸರ್ಪಗಾವಲಿನಲ್ಲಿ ಬಸ್ ಸಂಚಾರ ಆರಂಭಿಸಿದೆ. ಮತ್ತೊಂದು ಬಸ್ ಎಜಿಎಸ್ ಲೇಔಟ್ ನಿಂದ ಮೆಜೆಸ್ಟಿಕ್ಗೆ ಆಗಮಿಸಿದೆ. 7-8 ಪ್ರಯಾಣಿಕರನ್ನು ಹೊತ್ತು ಸಾಗಿದ ಬಿಎಂಟಿಸಿ ಬಸ್ಗೆ ಸಾರಿಗೆ ಇಲಾಖೆಯಿಂದ ಎಸ್ಕಾರ್ಟ್ ವ್ಯವಸ್ಥೆ ಕಲ್ಪಿಸಲಾಯಿತು. ಎಜಿಎಸ್ ಲೇಔಟ್ನ ಡಿಪೋದಿಂದ ಬಸ್ ಹೊರ ಬರುವಾಗ ಯಾರೂ ತಡೆಯಲಿಲ್ಲ. ಪೊಲೀಸರು ಸ್ವಲ್ಪ ದೂರ ಎಸ್ಕಾರ್ಟ್ ಮಾಡಿದರು. ಮಾರ್ಗ ಮಧ್ಯದಲ್ಲಿ ಯಾರೂ ತಡೆದಿಲ್ಲ. ಜನರು ಕೂಡ ಬರುತ್ತಿದ್ದಾರೆ. ಸಾರಿಗೆ ನೌಕರರಿಗೆ ಒಳ್ಳೆಯದಾಗಲಿ ಅಂತ ಮುಷ್ಕರ ಮಾಡುತ್ತಿದ್ದಾರೆ. ಮುಷ್ಕರದ ನಡುವೆ ಡ್ಯೂಟಿ ಕೂಡ ಮುಖ್ಯ. ಜನರಿಗೆ ಅನುಕೂಲವಾಗಬೇಕು ಎಂಬ ಕಾರಣಕ್ಕೆ ಬಸ್ ಸಂಚಾರ ಆರಂಭಿಸಿದ್ದೇವೆ ಎಂದು ಬಿಎಂಟಿಸಿ ಬಸ್ ಕಂಡಕ್ಟರ್ ಹೇಳಿದ್ದಾರೆ.
ಬೆಳಗ್ಗೆಯಿಂದ ಸಂಚಾರ ಆರಂಭಿಸಿರುವ ಮತ್ತೊಂದು ಬಿಎಂಟಿಸಿ ಬಸ್ಗೂ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ. ವಿಜಯನಗರದಿಂದ ಮೆಜೆಸ್ಟಿಕ್ಗೆ ಬಂದ ಬಿಎಂಟಿಸಿ ಬಸ್ ಹಿಂದೆ ಸಾರಿಗೆ ಇಲಾಖೆಯ ಜೀಪ್ನಿಂದ ಎಸ್ಕಾರ್ಟ್ ಆಗಮಿಸಿತು. ಬೆಂಗಳೂರಿನಲ್ಲಿ ನಿಧಾನವಾಗಿ ಬಿಎಂಟಿಸಿ ಬಸ್ ಸಂಚಾರ ಆರಂಭವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


