ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ! 6 ವಿಶೇಷ ಉಪನಗರ ರೈಲುಗಳಿಗೆ ರೈಲ್ವೆ ಮಂಡಳಿ ಅನುಮೋದನೆ
ಬೆಂಗಳೂರು ಮತ್ತು ಸುತ್ತಮುತ್ತ ಪ್ರಯಾಣಿಸಲು ಬಯಸುವವರಿಗೆ ಸಿಹಿಸುದ್ದಿ! ನೈಋತ್ಯ ರೈಲ್ವೆ ಶೀಘ್ರದಲ್ಲೇ ಆರು ಜೋಡಿ ಉಪನಗರ ರೈಲುಗಳನ್ನು ಓಡಿಸಲಿದೆ. ನೈಋತ್ಯ ರೈಲ್ವೆ 26 ವಿಶೇಷ ರೈಲುಗಳ ಪಟ್ಟಿಗೆ ರೈಲ್ವೆ ಮಂಡಳಿ ಬುಧವಾರ ಅನುಮೋದನೆ ಸಿಕ್ಕಿದೆ.

ಬೆಂಗಳೂರು: ಬೆಂಗಳೂರು ಮತ್ತು ಸುತ್ತಮುತ್ತ ಪ್ರಯಾಣಿಸಲು ಬಯಸುವವರಿಗೆ ಸಿಹಿಸುದ್ದಿ! ನೈಋತ್ಯ ರೈಲ್ವೆ ಶೀಘ್ರದಲ್ಲೇ ಆರು ಜೋಡಿ ಉಪನಗರ ರೈಲುಗಳನ್ನು ಓಡಿಸಲಿದೆ. ನೈಋತ್ಯ ರೈಲ್ವೆ 26 ವಿಶೇಷ ರೈಲುಗಳ ಪಟ್ಟಿಗೆ ರೈಲ್ವೆ ಮಂಡಳಿ ಬುಧವಾರ ಅನುಮೋದನೆ ಸಿಕ್ಕಿದೆ.
ಪ್ರಸ್ತಾವಿತ ಆರು ಜೋಡಿ ಉಪನಗರ ರೈಲುಗಳು ವಾರದಲ್ಲಿ ಆರು ದಿನ ಓಡುತ್ತವೆ: ಯಶವಂತಪುರ--ಹೊಸೂರು- ಯಶವಂತಪುರಮೆಮು ಎಕ್ಸ್‌ಪ್ರೆಸ್ ವಿಶೇಷ (ರೈಲು ಸಂಖ್ಯೆ 06547/06548), ಯಶವಂತಪುರ ತುಮಕೂರು- ಯಶವಂತಪುರ ಡೆಮು ಎಕ್ಸ್‌ಪ್ರೆಸ್ ವಿಶೇಷ (ರೈಲು ಸಂಖ್ಯೆ 06553/06554), ಬೆಂಗಳೂರು ನಗರ-ಮಾರಿಕುಪ್ಪಮ್-ಬೆಂಗಳುರು ನಗರ ಮೆಮುವಿಶೇಷ (ರೈಲು ಸಂಖ್ಯೆ 06555/06556), ಬಂಗಾರಪೇಟೆ-ಮೈಸೂರು-ಬಂಗಾರಪೇಟೆ ಮೆಮು ಎಕ್ಸ್ ಪ್ರೆಸ್ಸ್ ವಿಶೇಷ (ರೈಲು ಸಂಖ್ಯೆ 06557/06558), ಹಿಂದೂಪುರ-ಯಶವಂತಪುರ-ಹಿಂದೂಪುರ ಮೆಮು ಎಕ್ಸ್ ಪ್ರೆಸ್ ವಿಶೇಷ(ರೈಲು ಸಂಖ್ಯೆ 06563/06564) ಮತ್ತು ಯಶವಂತಪುರ-ಹಾಸನ-ಯಶವಂತಪುರ ಡೆಮು ಎಕ್ಸ್ ಪ್ರೆಸ್ ವಿಶೇಷ (ರೈಲು ಸಂಖ್ಯೆ 06579/06580).
ಬೆಂಗಳೂರು ನಗರ ಮತ್ತು ತಾಳಗುಪ್ಪ ಯಶವಂತಪುರಮತ್ತು ಹಾಸನ, ಕೆಎಸ್ಆರ್ ಬೆಂಗಳೂರು ಮತ್ತು ಧಾರವಾರ್ ನಡುವಿನ ಮೂರು ಇಂಟರ್ಸಿಟಿ ವಿಶೇಷ ಜೋಡಿ ರೈಲನ್ನು ಪ್ರತಿದಿನ ನ ಓಡಿಸಲಾಗುವುದು. ಓಡಬೇಕಾದ ಇತರ ರೈಲು ಜೋಡಿಗಳ ಪೈಕಿ ಕೆಎಸ್ಆರ್ ಬೆಂಗಳೂರಿನಿಂದ ಮಂಗಳೂರು ಸೆಂಟ್ರಲ್ (ವಾರದಲ್ಲಿ 4 ದಿನಗಳು), ನಾಂದೇಡ್ ಮತ್ತು ಮೀರಜ್ ಸೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


