ಬೆಂಗಳೂರು: ಫಸ್ಟ್ ನೈಟ್ ನಲ್ಲೇ ವರನ ಎಡವಟ್ಟು: ಒಂದೇ ತಿಂಗಳಿಗೆ ಮುರಿದು ಬಿತ್ತು ದಾಂಪತ್ಯ!
ಮಗಳು ಚನ್ನಾಗಿರಲಿ ಎಂದು ಪೋಷಕರು ಅಳಿಯನಿಗೆ ಮರ್ಸಿಡಿಸ್ ಬೆಂಝ್ ಕಾರನ್ನು ವರೋಪಚಾರವಾಗಿ ನೀಡಿದ್ದರು. ಅಲ್ಲದೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟರೂ ಫಸ್ಟ್ ನೈಟ್ ನಲ್ಲೇ ವರ ಎಡವಟ್ಟು ಮಾಡಿಕೊಂಡಿದ್ದು ಮದುವೆಯಾಗಿ ಒಂದೇ ತಿಂಗಳಿಗೆ ದಾಂಪತ್ಯ ಜೀವನ ಮುರಿದುಬಿದ್ದಿದೆ.

ಬೆಂಗಳೂರು: ಮಗಳು ಚನ್ನಾಗಿರಲಿ ಎಂದು ಪೋಷಕರು ಅಳಿಯನಿಗೆ ಮರ್ಸಿಡಿಸ್ ಬೆಂಝ್ ಕಾರನ್ನು ವರೋಪಚಾರವಾಗಿ ನೀಡಿದ್ದರು. ಅಲ್ಲದೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟರೂ ಫಸ್ಟ್ ನೈಟ್ ನಲ್ಲೇ ವರ ಎಡವಟ್ಟು ಮಾಡಿಕೊಂಡಿದ್ದು ಮದುವೆಯಾಗಿ ಒಂದೇ ತಿಂಗಳಿಗೆ ದಾಂಪತ್ಯ ಜೀವನ ಮುರಿದುಬಿದ್ದಿದೆ.
ಬೆಂಗಳೂರಿನ ಎಲ್ ಬಿಎಸ್ ನಗರದ ನಿವಾಸಿ ಭರತ್ ಅಕ್ಟೋಬರ್ 29ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ಆದರೆ ಫಸ್ಟ್ ನೈಟ್ ದಿನವೇ ಭರತ್ ಕಂಠಪೂರ್ತಿ ಕುಡಿದುಬಂದಿದ್ದು ಆತನ ವರ್ತನೆಯನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದಳು. ಈ ವಿಷಯವನ್ನು ಪೋಷಕರಿಗೆ ತಿಳಿಸಿದಾಗ ಅಂದಿನ ಮಧುಚಂದ್ರವನ್ನು ಮುಂದಿನ ದಿನಕ್ಕೆ ಮುಂದೂಡಿದರು.
ಎರಡನೇ ದಿನವೂ ಭರತ್ ಮತ್ತೆ ಕುಡಿದು ಬಂದಿದ್ದರಿಂದ ಪತ್ನಿ ಮಧುಚಂದ್ರಕ್ಕೆ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಭರತ್ ಪತ್ನಿಯನ್ನು ಥಳಿಸಿದ್ದಾನೆ. ಇನ್ನು ಭರತ್ ಗೆ ಕುಡಿಯುವ ಚಟವಿರುವುದನ್ನು ಮುಚ್ಚಿಟ್ಟಿದ್ದ ಪತಿಯ ವಿರುದ್ಧ ಹೌಹಾರಿದ್ದಳು.

ಈ ಘಟನೆಯ ಬಳಿಕ ಭರತ್ ಹಾಗೂ ಆತನ ಪೋಷಕರು ಕಿರುಕುಳ ನೀಡಲು ಶುರು ಮಾಡಿದ್ದಾರೆ. ಇನ್ನು ಭರತ್ ಗೆ ಅದಾಗಲೇ ಮದುವೆಯಾಗಿರುವ ವಿಚಾರ ಸಹ ತಿಳಿದಿದ್ದರಿಂದ ಮಹಿಳೆ ನವೆಂಬರ್ 29ರಂದು ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರಿನನ್ವಯ ಪತಿ ಭರತ್ ನನ್ನು ಪೊಲೀಸರು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


