ಹಿಂದಿನ ಜನ್ಮದ ಮೂಲವನ್ನು ಅರಸಿ ಕೊಪ್ಪದ ಮೇಗೂರಿಗೆ ಬಂದ ಬೆಂಗಳೂರು ಯುವತಿ!
ಚಿಕ್ಕಮಗಳೂರಿನ ಕೊಪ್ಪ ತಾಲೂಕು ಮೇಗೂರಿಗೆ ಕರೆದೊಯ್ಯಿವಂತೆ ಬೆಂಗಳೂರಿನ ಯುವತಿಯೊಬ್ಬಳು ತನ್ನ ಹೆತ್ತವರನ್ನು ನಿರಂತರವಾಗಿ ಒತ್ತಾಯಿಸಿದ ಬಳಿಕ ಅವರು ಆಕೆಯನ್ನು ಈ ಗ್ರಾಮಕ್ಕೆ ಕರೆತಂದಿದ್ದರು. ವಿಶೇಷವೆಂದರೆ ಈ ಯುವತಿ ಮೇಗೂರಿಗೆ ಹೊರಗಿನವಳಾಗಿದ್ದರೂ ಅಲ್ಲಿನ ಎಲ್ಲಾ ಬೀದಿ, ದೇವಾಲಯಗಳ ಪರಿಚಯವಿದ್ದುದಾಗಿ ಹೇಳಿದ್ದಲ್ಲದೆ ಮೇಗೂರು ತನ್ನ ಹಿಂದಿನ ಜನ್ಮದಲ್ಲಿನ ಊರು ಎಂದೂ ಹೇ

ಕೊಪ್ಪ: ಚಿಕ್ಕಮಗಳೂರಿನ ಕೊಪ್ಪ ತಾಲೂಕು ಮೇಗೂರಿಗೆ ಕರೆದೊಯ್ಯಿವಂತೆ ಬೆಂಗಳೂರಿನ ಯುವತಿಯೊಬ್ಬಳು ತನ್ನ ಹೆತ್ತವರನ್ನು ನಿರಂತರವಾಗಿ ಒತ್ತಾಯಿಸಿದ ಬಳಿಕ ಅವರು ಆಕೆಯನ್ನು ಈ ಗ್ರಾಮಕ್ಕೆ ಕರೆತಂದಿದ್ದರು. ವಿಶೇಷವೆಂದರೆ ಈ ಯುವತಿ ಮೇಗೂರಿಗೆ ಹೊರಗಿನವಳಾಗಿದ್ದರೂ ಅಲ್ಲಿನ ಎಲ್ಲಾ ಬೀದಿ, ದೇವಾಲಯಗಳ ಪರಿಚಯವಿದ್ದುದಾಗಿ ಹೇಳಿದ್ದಲ್ಲದೆ ಮೇಗೂರು ತನ್ನ ಹಿಂದಿನ ಜನ್ಮದಲ್ಲಿನ ಊರು ಎಂದೂ ಹೇಳಿದ್ದಾರೆ.
ಯುವತಿಯನ್ನು ಜಾವಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಗೂರಿಗೆ ಭಾನುವಾರ ಕರೆತರಲಾಯಿತು. ಅವಳು ಬೆಂಗಳೂರಿನ ಹೆಬ್ಬಾಳ ಸಮೀಪದ ನಾಗವಾರ ಮೂಲದವಳಾಗಿದ್ದು ಕಳೆದ ಕೆಲವು ತಿಂಗಳುಗಳಿಂದ, ಅವಳು ವಿಚಿತ್ರವಾಗಿ ವರ್ತಿಸುತ್ತಿದ್ದಳು. ಅಲ್ಲದೆ ಊಟ ತಿಂಡಿಯನ್ನೂ ಸರಿಯಾಗಿ ಮಾಡುತ್ತಿರಲಿಲ್ಲ.
ಆಕೆಯ ಪೋಷಕರು ಪ್ರಶ್ನಿಸಿದಾಗ, ಆಕೆ ನಾಲ್ಕು ತಲೆಮಾರುಗಳ ಹಿಂದೆ ಮೇಗೂರಿನಲ್ಲಿ ತಾನು ಅರ್ಚಕರ ಮಗಳಾಗಿ ಜನಿಸಿದ್ದೆ, ಆ ಸ್ಥಳವನ್ನೊಮ್ಮೆ ನೋಡಬೇಕು ಎಂದು ಬಯಸುವುದಾಗಿ ಹೇಳಿದ್ದಾಳೆ.
ಹೆತ್ತವರು ಒತ್ತಡಕ್ಕೆ ಮಣಿದು ಮೆಗೂರು ಅಮೃತೇಶ್ವರ ದೇವಾಲಯಕ್ಕೆ ಮಗಳನ್ನು ಕರೆತಂದಿದ್ದಾರೆ. ಆ ಸ್ಥಳ ತಲುಪುತ್ತಿದ್ದ ಹಾಗೆಯೇ ಆಕೆಯಲ್ಲಿ ಬದಲಾವಣೆ ಕಾಣಿಸಿದ್ದಲ್ಲದೆ ಯುವತಿ ಸಹಜ ಸ್ಥಿತಿಗೆ ಮರಳಿದ್ದಾಳೆ. ಆದರೆ ಯುವತಿ ಹೇಳಿದಂತೆ ದೇವಾಲಯದ ಅರ್ಚಕರಾರೂ ನಮ್ಮಲ್ಲಿದ್ದದ್ದು ನಮಗೆ ಅರಿವಿಲ್ಲ ಎಂದು ಗ್ರಾಮದ ಹಿರಿಯರಾದ ಚನ್ನಕೇಶವ ಗೌಡ ಎನ್ನುವವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


