ಆಸ್ತಿಗಾಗಿ ಮಹಿಳೆ ಕೊಲೆ: ಬೆಂಗಳೂರಿನಲ್ಲಿ ತಂದೆ -ಮಗನ ಬಂಧನ
ಆಸ್ತಿ ವಿಚಾರವಾಗಿ ಆ.17ರಂದು ಮಹಿಳೆಯನ್ನು ಕೊಂದ ಆರೋಪದಡಿ ಆಕೆಯ ಪತಿ ಹಾಗೂ ಪುತ್ರ ಸೇರಿ ಆರು ಮಂದಿಯನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಆಸ್ತಿ ವಿಚಾರವಾಗಿ ಆ.17ರಂದು ಮಹಿಳೆಯನ್ನು ಕೊಂದ ಆರೋಪದಡಿ ಆಕೆಯ ಪತಿ ಹಾಗೂ ಪುತ್ರ ಸೇರಿ ಆರು ಮಂದಿಯನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯ ಪತಿ ಆನೇಕಲ್ ನಿವಾಸಿ ಅಂಜನಿ (55), ಪುತ್ರ ವರುಣ್ (26), ನವೀನ್ ಕುಮಾರ್ (34), ಚಂದಾಪುರದ ನಾಗರಾಜು (22), ಪ್ರದೀಪ್ (22) ನಾಗರಾಜ ಅಲಿಯಾಸ್ ನಾಗ (21) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಜೋಶಿ ಹೇಳಿದ್ದಾರೆ.
ಗೀತಾ ಅವರು ಕೌಟುಂಬಿಕ ಕಲಹದಿಂದಾಗಿ ಹದಿನೈದು ವರ್ಷದಿಂದ ಪತಿ ಅಂಜನಿಯನ್ನು ತೊರೆದು ಒಬ್ಬರೇ ಪ್ರತ್ಯೇಕವಾಗಿ ವಾಸವಿದ್ದರು. ಗೀತಾ ಮನೆ ಬಿಟ್ಟು ಹೋದ ಬಳಿಕ
ಅಪ್ಪ-ಮಗ ಜತೆಗಿದ್ದರು. ಅಂಜನಿ ಮತ್ತು ವರುಣ್ ವಾಸ ವಿ ದ್ದ ಮನೆ ಗೀತಾ ಅವರ ಹೆಸರಿನಲ್ಲಿತ್ತು.
ಇತ್ತೀಚೆಗೆ ಪುತ್ರವರುಣ್ ಆಸ್ತಿ ಮಾರಾಟ ಮಾಡಲು ಮುಂದಾಗಿದ್ದ. ಆಸ್ತಿಯನ್ನು ತನ್ನ ಹೆಸರಿಗೆ ಮಾಡಿ ಕೊಡುವ ವಿಚಾರವಾಗಿ ಪುತ್ರ, ತಾಯಿಯೊಂದಿಗೆ ಹಲವು ಬಾರಿ ಜಗಳ
ಮಾಡಿದ್ದ. ತಾಯಿಗೆ ಗೊತ್ತಾಗದಂತೆ ಎರಡು ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿ, ಖರೀದಿದಾರರಿಂದ ಒಂದು ಕೋಟಿ ಹಣವನ್ನು ಮುಂಗಡವಾಗಿ ಪಡೆದಿದ್ದ. ಈ ವಿಷಯ
ಗೊತ್ತಾಗಿ ಗೀತಾ ಅವರು ಆಸ್ತಿ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಇದೇ ಕಾರಣಕ್ಕೆ ತಾಯಿ ಹಾಗೂ ಮಗ-ತಂದೆ ನಡುವೆ ಜಗಳ ಶುರುವಾಗಿತ್ತು. ಮೂವರು ಹಲವು
ಬಾರಿ ಠಾಣೆ ಮೆಟ್ಟಿಲೇರಿದ್ದರು ಎಂದು ಪೊಲೀಸರು ತಿಳಿಸಿದರು.
`
ಇತ್ತೀಚೆಗೆ ಪುತ್ರ ವರುಣ್ ಆಸ್ತಿ ಮಾರಾಟ ಮಾಡಲು ಮುಂದಾಗಿದ್ದ. ಆಸ್ತಿಯನ್ನು ತನ್ನ ಹೆಸರಿಗೆ ಮಾಡಿ ಕೊಡುವ ವಿಚಾರವಾಗಿ ಪುತ್ರ, ತಾಯಿಯೊಂದಿಗೆ ಹಲವು ಬಾರಿ ಜಗಳ
ಮಾಡಿದ್ದ. ತಾಯಿಗೆ ಗೊತ್ತಾಗದಂತೆ ಎರಡು ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿ, ಖರೀದಿದಾರರಿಂದ ಒಂದು ಕೋಟಿ ಹಣವನ್ನು ಮುಂಗಡವಾಗಿ ಪಡೆದಿದ್ದ. ಈ ವಿಷಯ
ಗೊತ್ತಾಗಿ ಗೀತಾ ಅವರು ಆಸ್ತಿ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಇದೇ ಕಾರಣಕ್ಕೆ ತಾಯಿ ಹಾಗೂ ಮಗ-ತಂದೆ ನಡುವೆ ಜಗಳ ಶುರುವಾಗಿತ್ತು. ಮೂವರು ಹಲವು
ಬಾರಿ ಠಾಣೆ ಮೆಟ್ಟಿಲೇರಿದ್ದರು ಎಂದು ಪೊಲೀಸರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


