ದಾವಣಗೆರೆ: ವಾಟ್ಸಾಪ್ ಗ್ರೂಪ್ ನಲ್ಲಿ 'ಪವರ್ ಆಫ್ ಪಾಕಿಸ್ತಾನ್' ಫೇಸ್‌ಬುಕ್ ಪೇಜ್ ಹಂಚಿಕೊಂಡ ಕಾನ್‌ಸ್ಟೆಬಲ್ ಅಮಾನತು
ಪೊಲೀಸ್ ಕಾನ್‌ಸ್ಟೆಬಲ್ ಒಬ್ಬ ವಾಟ್ಸಾಪ್ ಗ್ರೂಪ್ ನಲ್ಲಿ 'ಪವರ್ ಆಫ್ ಪಾಕಿಸ್ತಾನ್' ಫೇಸ್‌ಬುಕ್ ಪುಟವನ್ನು ಹಂಚಿಕೊಂಡಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಂಡಿರುವ ಘಟನೆ ದಾವಣಗೆರೆ ಬಸವನಗರೆ ಠಾಣೆಯಲ್ಲಿ ನಡೆದಿದೆ.

ದಾವಣಗೆರೆ: ಪೊಲೀಸ್ ಕಾನ್‌ಸ್ಟೆಬಲ್ ಒಬ್ಬ ವಾಟ್ಸಾಪ್ ಗ್ರೂಪ್ ನಲ್ಲಿ 'ಪವರ್ ಆಫ್ ಪಾಕಿಸ್ತಾನ್' ಫೇಸ್‌ಬುಕ್ ಪುಟವನ್ನು ಹಂಚಿಕೊಂಡಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಂಡಿರುವ ಘಟನೆ ದಾವಣಗೆರೆ ಬಸವನಗರೆ ಠಾಣೆಯಲ್ಲಿ ನಡೆದಿದೆ.
ಬಸವನಗರ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ಸನಾವುಲ್ಲಾ ಪಾಕ್ ಪರವಾದ ಫೇಸ್‌ಬುಕ್ ಪುಟವನ್ನು ಹಂಚಿಕೊಂಡು ಅಮಾನತು ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯಾಗಿದ್ದು ಇದೇ ರೀತಿಯ ಕೃತ್ಯಕ್ಕಾಗಿ ಈತ ಈ ಹಿಂದೆ 2014 ರಲ್ಲಿಸಹ ಒಮ್ಮೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದ.
2008 ಬ್ಯಾಚ್ ಪೊಲೀಸ್ ಟೀಂ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಅವರು 'ಪವರ್ ಆಫ್ ಪಾಕಿಸ್ತಾನ್' ಫೇಸ್‌ಬುಕ್ ಪುಟವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಪರಾಧಕ್ಕೆ ತಕ್ಷಣ ಜಾರಿಗೆ ಬರುವಂತೆ ಸನಾವುಲ್ಲಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಜಿಲ್ಲಾಧಿಕಾರಿ ಹನುಮಂತರಾಯ, ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಪೊಲೀಸ್ ಉಪ ಅಧೀಕ್ಷಕ ಹಂತದ ಅಧಿಕಾರಿಯೊಬ್ಬರು ತನಿಖೆ ನಡೆಸಿದ್ದಾರೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


