ಬೆಂಗಳೂರು: ಕೊರೋನಾ ಲಕ್ಷಣವಿದೆ ಎಂದು ಗೆಳೆಯರಿಗೆ ಮೆಸೇಜ್ ಮಾಡಿ ಐಐಎಸ್ಸಿ ವಿದ್ಯಾರ್ಥಿ ಆತ್ಮಹತ್ಯೆ
ಭಾರತೀಯ ವಿಜ್ಞಾನ ಸಂಸ್ಥೆಯ 25 ವರ್ಷದ ಎಂ ಟೆಕ್ ವಿದ್ಯಾರ್ಥಿ ಕಾಲೇಜು ಕ್ಯಾಂಪಸ್ ನ ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ 25 ವರ್ಷದ ಎಂ ಟೆಕ್ ವಿದ್ಯಾರ್ಥಿ ಕಾಲೇಜು ಕ್ಯಾಂಪಸ್ ನ ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಛತ್ತೀಸ್ ಗಢದಲ್ಲಿರುವ ತನ್ನ ಸ್ನೇಹಿತರಿಗೆ ಮೊಬೈಲ್ ನಲ್ಲಿ ಕಳೆದ ಕೆಲ ದಿನಗಳಿಂದ ತನಗೆ ಕೋವಿಡ್-19 ಸೋಂಕಿನ ಲಕ್ಷಣಗಳಿವೆ, ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಯುವಕನನ್ನು ಸಂದೀಪ್ ಕುಮಾರ್ ಮಾರ್ಕಂಡೆ ಎಂದು ಗುರುತಿಸಲಾಗಿದೆ. ತಮಗೆ ಸಂದೇಶ ಬಂದ ಕೂಡಲೇ ಛತ್ತೀಸ್ ಗಢದಲ್ಲಿರುವ ಸಂದೀಪ್ ನ ಸ್ನೇಹಿತರು ಬೆಂಗಳೂರಿನ ಐಐಎಸ್ಸಿ ಸಿಬ್ಬಂದಿಗೆ ಮೇಲ್ ಮಾಡಿ ತಿಳಿಸಿದ್ದಾರೆ. ಐಐಎಸ್ಸಿಯ ಆಡಳಿತ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಕೋಣೆಗೆ ಹೋಗಿ ಬೀಗ ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತು.
ತಮಗೆ ಸಂದೇಶ ಸಿಕ್ಕಿದ ಕೂಡಲೇ ಛತ್ತೀಸ್ ಗಢದಲ್ಲಿರುವ ಸ್ನೇಹಿತರು ಸಂದೀಪ್ ಗೆ ಪದೇ ಪದೇ ಕರೆ ಮಾಡಲು ಯತ್ನಿಸಿದರು. ಜೀವನದಲ್ಲಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳದಂತೆ ಒತ್ತಾಯಿಸಲು ಪ್ರಯತ್ನಿಸಿದ್ದರು. ಆದರೆ ಸಂದೀಪ್ ನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಕರೆ ಸ್ವೀಕರಿಸದಿದ್ದಾಗ ಕೂಡಲೇ ಐಐಎಸ್ಸಿ ಸಿಬ್ಬಂದಿಗೆ ಮೇಲ್ ಮೂಲಕ ತಿಳಿಸಿದ್ದಾರೆ. ಸಂಸ್ಥೆಯ ಸಿಬ್ಬಂದಿ ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆ 7.30ರ ಹೊತ್ತಿಗೆ ಸದಾಶಿವನಗರ ಪೊಲೀಸರಿಗೆ ವಿಷಯ ಮುಟ್ಟಿಸಲಾಯಿತು. ಅವರು ಬಂದು ಸಂಸ್ಥೆ ಸಿಬ್ಬಂದಿಯೊಂದಿಗೆ ಸಂದೀಪ್ ಕೊಠಡಿಯ ಹತ್ತಿರ ಹೋಗಿ ಬಾಗಿಲು ಬೆಲ್ ಒತ್ತಿದಾಗ ಪ್ರತಿಕ್ರಿಯೆ ಬರಲಿಲ್ಲ. ನಂತರ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಅಷ್ಟು ಹೊತ್ತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಾಗಿತ್ತು. ನಂತರ ಯುವಕನ ಶವವನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಐಐಎಸ್ಸಿ ಆಡಳಿತಾಧಿಕಾರಿಗಳ ದೂರಿನ ಮೇಲೆ ಅಸಹಜ ಸಾವು ಎಂದು ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಸಂಸ್ಥೆ ಸಿಬ್ಬಂದಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


