ರಾಜ್ಯ

ಲೋಕೋ ಪೈಲಟ್ ಅಪಹರಣ, ದರೋಡೆ ಪ್ರಕರಣ: ಓಲಾ ಚಾಲಕ, ಆತನ ಸಹಚರನ ಬಂಧನ

ಬೆಂಗಳೂರು ಲೊಕೋ ಪೈಲಟ್ ಸೋನು ಕುಮಾರ್ ಸಿಂಗ್ ಅಪಹರಣ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಲೋಕೋ ಪೈಲಟ್ ಅಪಹರಣ, ದರೋಡೆ ಪ್ರಕರಣ: ಓಲಾ ಚಾಲಕ, ಆತನ ಸಹಚರನ ಬಂಧನ
ಅಪಹರಣಕ್ಕೊಳಗಾಗಿದ್ದ ಲೋಕೋ ಪೈಲಟ್
Published On :

ಬೆಂಗಳೂರು: ಬೆಂಗಳೂರು ಲೊಕೋ ಪೈಲಟ್ ಸೋನು ಕುಮಾರ್ ಸಿಂಗ್ ಅಪಹರಣ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ಪಾಟ್ನಾದಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸೋನು ಕುಮಾರ್ ಸಿಂಗ್ ಅವರನ್ನು ಆರೋಪಿಗಳು ಅಪಹರಣ ಮಾಡಿದ್ದರು. ಬಳಿಕ ರೂ.1.8 ಲಕ್ಷ, ಲಗೇಜ್ ಹಾಗೂ ಎರಡು ಮೊಬೈಲ್ ಕಸಿದುಕೊಂಡಿದ್ದರು. ಬಳಿಕ ಚಿಕ್ಕಮಗಳೂರಿನ ಕಡೂರು ಬಳಿ ಕಾರು ನಿಲ್ಲಿಸಿದ್ದ ಸಂದರ್ಭದಲ್ಲಿ ಸೋನು ಅವರು ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದರು. 

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿದ್ದು, ಇದೀಗ ಓಲಾ ಚಾಲಕ ಹಾಗೂ ಆತನೊಂದಿಗಿದ್ದ ಸಹಚರನೊಬ್ಬನನ್ನು ಶಿವಮೊಗ್ಗದಲ್ಲಿ ಬಂಧನಕ್ಕೊಳಪಡಿಸಿದ್ದಾರೆ. 

ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು, ಬಳಿಕ ತಮ್ಮೊಂದಿಗೆ ಶಿವಮೊಗ್ಗ ಜಿಲ್ಲೆಗೆ ಬರುವಂತೆ ತಿಳಿಸಿದ್ದರು. ರಾತ್ರಿ ಪೊಲೀಸರೊಂದಿಗೆ ತೆರಳಿ, ಆರೋಪಿಗಳನ್ನು ಗುರ್ತಿಸಿದ್ದೆ. ಬುಧವಾರ ಬೆಳಿಗ್ಗೆ ಬೆಂಗಳೂರಿಗೆ ಹಿಂತಿರುಗಿದ್ದೆ. ಆರೋಪಿಗಳು ರೂ.1.8 ಲಕ್ಷ ದೋಚಿದ್ದರು ಎಂದು ಸಿಂಗ್ ಅವರು ಹೇಳಿದ್ದಾರೆ. ಕುಟುಂಬಸ್ಥರು ಹಾಗೂ ಸ್ನೇಹಿತರಿಂಗ ಹಣವನ್ನು ಖಾತೆಗೆ ಜಮೆ ಮಾಡಲಾಗಿತ್ತು. ಓಲಾ ಆ್ಯಪ್ ನಿಂದಲೇ ನಾನು ಕಾರು ಬುಕ್ ಮಾಡಿದ್ದೆ. ಒಟಿಪಿ ಕೂಡ ಬಂದಿತ್ತು ಎಂದು ಸಿಂಗ್ ತಿಳಿಸಿದ್ದಾರೆ. 

ಓಲಾ ಚಾಲಕನ ಹೆಸರು ಮಣಿಕಂದನ್. ವಿಮಾನ ನಿಲ್ದಾಣದಿಂದಲೇ ನಾನು ಕ್ಯಾಬ್ ಹತ್ತಿದ್ದೆ. ಆದರೆ, ಘಟನೆ ಸಂಬಂಧ ಓಲಾ ಸಂಸ್ಥೆಯು ಅಧಿಕೃತವಾಗಿ ಹೇಳಿಕೆ ನೀಡಲು ನಿರಾಕರಿಸುತ್ತಿದೆ. ಹಲವು ಬಾರಿ ಮನವಿ ಮಾಡಿಕೊಂಡರೂ ಹೇಳಿಕೆ ನೀಡುತ್ತಿಲ್ಲ. ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಎಫ್ಐಆರ್ ದಾಖಲಾಗಿರುವ ಬಗ್ಗೆ ನಮಗೆ ಸಾಕ್ಷ್ಯಾಧಾರ ಬೇಕೆಂದು ಹೇಳುತ್ತಿದ್ದಾರೆಂದು ಸಿಂಗ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.