ಕೊರೋನಾ ಸಂಕಷ್ಟದಲ್ಲಿ ಬಾಗಿಲು ಮುಚ್ಚಿರುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮಕ್ಕೆ ಸೂಚನೆ: ಸಚಿವ ಸುಧಾಕರ್
ಕೊರೋನದಂತಹ ಸಂದಿಗ್ಧ ಪರಿಸ್ಥತಿಯಲ್ಲಿ ಬಾಗಿಲು ಮುಚ್ಚಿರುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಕೆ ಸುಧಾಕರ್ ಹೇಳಿದರು.

ಮಂಡ್ಯ: ಕೊರೋನದಂತಹ ಸಂದಿಗ್ಧ ಪರಿಸ್ಥತಿಯಲ್ಲಿ ಬಾಗಿಲು ಮುಚ್ಚಿರುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಕೆ ಸುಧಾಕರ್ ಹೇಳಿದರು.
ಮಂಡ್ಯದಲ್ಲಿ ಇಂದು ಜಿ.ಪಂ.ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಪಾಲ್ಗೊಂಡು ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಕೊರೋನದಂತಹ ಸಂದಿಗ್ಧ ಪರಿಸ್ಥತಿಯಲ್ಲಿ ಬಾಗಿಲು ಮುಚ್ಚಿರುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮ ಕೈಗೊಳ್ಳ್ಳುವಂತೆ ಜಿಲ್ಲಾಢಳಿತಕ್ಕೆ ಸೂಚಿಸಿದರು.
ಅಂತೆಯೇ, 'ಈ ಕೂಡಲೆ ಐ.ಎಂ.ಎ.ಸಭೆ ಕರೆದು ಮುಚಿರುವ ಖಾಸಗಿ ಆಸ್ಪತ್ರೆಗಳನ್ನು ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು, ಕ್ಲಿನಿಕ್ ಗಳೂ ಸಹ ಬಾಗಿಲು ತೆರೆದು ಕಾರ್ಯ ನಿರ್ವಹಿಸಬೇಕು. ವೈದ್ಯರು ಮನೆಯಲ್ಲೆ ಕುಳಿತರೆ ಹೇಗೆ ಎಂದು ಪ್ರಶ್ನಿಸಿದರು. ಅಂತೆಯೇ ಕೊರೋನಾ ಕುರಿತಂತೆ ಮಾತನಾಡಿದ ಸುಧಾಕರ್ ಅವರು, 'ಅಮೇರಿಕಾ ಮತ್ತು ಜಪಾನ್ ನಿಂದ 3 ಲಕ್ಷ ಉತ್ತಮ ಗುಣಮಟ್ಟದ ಪಿ.ಪಿ.ಕಿಟ್ಗಳನ್ನು ತರಿಸಲಾಗುತ್ತಿದ್ದು, ಈ ಪ್ಯೆಕಿ 60 ಸಾವಿರ ಕಿಟ್ ಬಂದಿದೆ ಎಂದು ಹೇಳಿದರು.
ಅಂತೆಯೇ ಸಾಮಾನ್ಯ ಜನರು ಕಾಟನ್ ಮಾಸ್ಕ್ ಬಳಸಿದರೆ ಸಾಕು. ಆರೋಗ್ಯ ಚಟುವಟಿಕೆಯಲ್ಲಿ ತೊಡಗಿರುವವರು ಗುಣಮಟ್ಟದ ಮಾಸ್ಕ್ ಧರಿಸಬೇಕು. ಅಲ್ಲದೆ ಸಬ್ಸ್ಟಾಂರ್ಡ್ಕಿಟ್ನ್ನು ಹರಿಯುವ ನೀರಿಗೆ ಹಾಕುವುದು, ಎಲ್ಲೆಂದರಲ್ಲಿ ಬಿಸಾಡುವುದು ಅಪರಾಧ ಎದು ಹೇಳಿದರು. ಅಂತೆಯೇ ಬೇರೆ ರಾಜ್ಯಗಳಲ್ಲಿ ಪತ್ರಕರ್ತರಿಗೆ ವಿಮೆ ಜಾರಿ ಮಾಡಿರುವ ಕುರಿತು ಅಲ್ಲಿಂದ ಆದೇಶದ ಪತ್ರ ತರಿಸಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಇಲ್ಲಿನ ಪತ್ರಕರ್ತರಿಗೂ ವಿಮೆ ಜಾರಿ ಕುರಿತು ತೀರ್ಮಾನ ಕೈಗೊಳುವುದಾಗಿ ತಿಳಿಸಿದರು.
ಕೋವಿಡ್-19 ಹೋರಾಟದಲ್ಲಿ ಲಾಕ್ ಡೌನ್ ಶಾಶ್ವತ ಪರಿಹಾರ ಅಲ್ಲ, ಜನ ಸಾಮಾನ್ಯರು ಬದುಕಿನ ಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕಿರುವುದು ಅನಿವಾರ್ಯ. ಇಡೀ ಜಾಗತ್ತೆ ಇಂದು ಭಿನ್ನ ಹಾದಿಯಲ್ಲಿ ಹೆಜ್ಜೆ ಇರಿಸಬೇಕಾದ ಸಂದರ್ಭಎದುರಾಗಿದೆ. ಕೋವಿಡ್ ನಂತರ ಮತ್ತು ಕೋವಿಡ್ ಹಿಂದಿನ ದಿನಗಳು ಎಂಬ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಕೊರೋನಾ ರೋಗಾಣು ಜತೆ ಬದುಕಲೇಬೇಕಾಗಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಜತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿದಿಗಳ ಜವಾಬ್ದಾರಿ ಹೆಚ್ಚಿದೆ. ಮುಂದಿನ ದಿನಗಳ್ಲಲಿ ಎಲ್ಲರೂ ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಕ್ರಿಯಾಶೀಲರಾಗಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಸ್ವಚ್ಛತೆ ಜತೆಗೆ ಸರ್ಕಾರ ನೀಡುವ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು.
ಈ ನಡುವೆ ಪ್ರತಿಕ್ರಿಯಿಸಿದ ಸಚಿವ ನಾರಾಯಣಗೌಡ ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಸಾಕಷ್ಟು ಬಾರಿ ಹೇಳಿದರು ಕ್ರಮ ಕೈಗೊಂಡಿಲ್ಲ ಇದುವರೆವಿಗೂ ಯಾವ ಖಾಸಗಿ ಆಸ್ಪತ್ರೆಗಳು ತೆಗೆದಿಲ್ಲವೋ ಅಂತಹವರ ವಿರುದ್ದ ಲೈಸೆನ್ಸ್ ರದ್ದುಪಡಿಸುವ ಕ್ರಮವನ್ನು ತಕ್ಷಣ ಕೈಗೊಳ್ಳಬೇಕು ಇಲ್ಲದಿದರೆ ನಿಮ್ಮ ಮೇಲೆ ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ ಎಂದು ಆರೋಗ್ಯಧಿಕಾರಿ ಡಾ.ಮಂಚೇಗೌಡರಿಗೆ ಎಚ್ಚರಿಕೆ ನೀಡಿದರು.
-ನಾಗಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


