ಕ್ವಾರಂಟೈನ್ ಬಗ್ಗೆ ಶಾಸಕ ರವೀಂದ್ರರಿಗೆ ಅರಿವು ಮೂಡಿಸಿದ ಸಂಸದೆ ಸುಮಲತಾ ಅಂಬರೀಶ್..!
ಕೋವಿಡ್-19 ಕುರಿತಂತೆ ಕ್ವಾರಂಟೈನ್ ಬಗ್ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಸಂಸದೆ ಸುಮಲತಾ ಅಂಬರಿಷ್ ಅರಿವು ಮೂಡಿಸಿದ ಪ್ರಸಂಗ ನಡೆಯಿತು.

ಮಂಡ್ಯ: ಕೋವಿಡ್-19 ಕುರಿತಂತೆ ಕ್ವಾರಂಟೈನ್ ಬಗ್ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಸಂಸದೆ ಸುಮಲತಾ ಅಂಬರಿಷ್ ಅರಿವು ಮೂಡಿಸಿದ ಪ್ರಸಂಗ ನಡೆಯಿತು.
ಇಂದು ಮಂಡ್ಯದ ಜಿ.ಪಂ.ಸಭಾಂಗಣದಲ್ಲಿ ಸಚಿವರಾದ ಡಾ.ಕೆ. ಸುಧಾಕರ್ ಹಾಗೂ ನಾರಾಯಣಗೌಡ ಅವರ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ ಶ್ರೀರಂಗಪಟ್ಟಣ ತಾಲೂಕಿನ ಉರಳಿಕ್ಯಾತನಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ಕ್ವಾರಂಟೈನ್ ಮಾಡುವ ಸಂದರ್ಭದಲ್ಲಿ ಅಲ್ಲಿನ ಗ್ರಾ.ಪಂ.ಸಿಬ್ಬಂದಿ ನಿಂದಿಸಿದರೆಂದು ನೊಂದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದಂತೆ ಅವರನ್ನು ಹಾಗು ಅವರ ಕುಟುಂಬದವರನ್ನು ಕ್ವಾರಟೈನ್ ಮಾಡಲಾಗಿದೆ. ಯಾವ ಕಾರಣಕ್ಕೆ ಇವರನ್ನು ಕ್ವಾರಟೈನ್ ಮಾಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಇದರಿಂದ ಅವರಿಗೆ ಅವಮಾನವಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ ಅಂಬರೀಶ್ರವರು ಅವರಿಗೆ ಕ್ವಾರಂಟೈನ್ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ, ವೈದ್ಯರ ಸೂಚನೆ ಮೇರೆಗೆ ಆವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಇದರಲ್ಲಿ ತಪ್ಪೆನಿದೆ ಎಂದರು. ಕ್ವಾರಂಟೈನ್ ಮಾಡುವುದು ಅವಮಾನ ಅಲ್ಲ ಒಬ್ಬ ಜನಪ್ರತಿನಧಿಯಾಗಿ ನೀವೆ ಈ ರೀತಿ ಹೇಳಿದರೆ ಜನ ತಪ್ಪು ಅಭಿಪ್ರಾಯ ತೀಳಿದುಕೊಳ್ಳುತ್ತಾರೆ. ಆಶಾ ಕಾರ್ಯಕರ್ತೆ ವಾರಿರ್ಸ್ ಆಗಿಯು ಸಹ ಕಾರ್ಯ ನೀರ್ವಹೀಸುತ್ತಿದ್ದು ಅವರಿಗೆ ಕ್ವಾರಂಟೈನ್ ಮಾಡಿಸುವುದು ಸಹ ನಿಮ್ಮ ಕರ್ತವ್ಯ ಎಂದು ತಿಳಿ ಹೇಳಿದರು.
-ನಾಗಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


