ಹಾಲು, ಔಷಧಿ, ಅಗತ್ಯ ವಸ್ತುಗಳು ಸಿಗದೆ ಪಾದರಾಯನಪುರ ನಿವಾಸಿಗಳ ಪರದಾಟ!
5 ಕೊರೋನಾ ವೈರಸ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ ಪಾದರಾಯನಪುರವನ್ನು ಸರ್ಕಾರ ಸೀಲ್ ಮಾಡಿದೆ. ಒಂದೆಡೆ ಬಿಬಿಎಂಪಿ ಅಧಿಕಾರಿಗಳು ಜನರ ಮನೆ ಬಾಗಿಲಿಗೇ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದೇವೆಂದು ಹೇಳುತ್ತಿದ್ದರೂ ಅಲ್ಲಿನ ವಾಸ್ತವಿಕತೆಯೇ ಬೇರೆಯಿದೆ.

ಬೆಂಗಳೂರು: 5 ಕೊರೋನಾ ವೈರಸ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ ಪಾದರಾಯನಪುರವನ್ನು ಸರ್ಕಾರ ಸೀಲ್ ಮಾಡಿದೆ. ಒಂದೆಡೆ ಬಿಬಿಎಂಪಿ ಅಧಿಕಾರಿಗಳು ಜನರ ಮನೆ ಬಾಗಿಲಿಗೇ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದೇವೆಂದು ಹೇಳುತ್ತಿದ್ದರೂ ಅಲ್ಲಿನ ವಾಸ್ತವಿಕತೆಯೇ ಬೇರೆಯಾಗಿದೆ.
ತಮ್ಮ ವಾರ್ಡ್ ಸೀಲ್ ಆದಾಗಿನಿಂದಲೂ ಹಾಲು, ಔಷಧಿ ಹಾಗೂ ಇತರೆ ಅಗತ್ಯ ವಸ್ತುಗಳು ಸಿಗದೆ ಪರದಾಡುತ್ತಿದ್ದೇವೆಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಅರಾಫತ್ ನಗರದ 11ನೇ ಅಡ್ಡ ರಸ್ತೆಯಲ್ಲಿ ಉರ್ದುವಿನಲ್ಲಿ ಬರೆದಿರುವ ಬಿತ್ತಿ ಪತ್ರಗಳು ರಾರಾಜಿಸುತ್ತಿವೆ. ಈ ಪತ್ರದಲ್ಲಿ ಜನರಿಗೆ ಉಚಿತವಾಗಿ ಪಡಿತರವನ್ನು ವಿತರಿಸಲಾಗುತ್ತಿದೆ ಎಂದು ಬರೆಯಲಾಗಿದೆ. ಆದರೆ, ಅಲ್ಲಿನ ಜನರು ಮಾತ್ರ ಅಂತಹ ಯಾವುದೇ ವಸ್ತುಗಳು ನಮಗೆ ತಲುಪುತ್ತಿಲ್ಲ. ನಮ್ಮಲ್ಲಿರುವ ಅಗತ್ಯ ವಸ್ತುಗಳು ಈಗಾಗಲೇ ಖಾಲಿಯಾಗುತ್ತಿದ್ದು, ದಯವಿಟ್ಟು ನಮಗೆ ಪಡಿತರ ವಿತರಿಸಿ ಎಂದು ಅಂಗಲಾಚುತ್ತಿದ್ದಾರೆ.
ಏಪ್ರಿಲ್. 10 ರಂದು ಅರಾಫತ್ ನಗರ ಮತ್ತು ಬಾಪೂಜಿನಗರದಲ್ಲಿ ಐದು ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದ್ದವು. ದಾದ ಬಳಿಕ ಈ ಪ್ರದೇಶಗಳನ್ನು ಸರ್ಕಾರ ಸೀಲ್ ಮಾಡಿತ್ತು. ಏಪ್ರಿಲ್ 19 ರಂದು ಜನರು ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ದರು. ಕ್ವಾರಂಟೈನ್ ನಲ್ಲಿರುವ ಸೋಂಕಿತರ ಭೇಟಿಗೆ ಅವಕಾಶ ನೀಡುವಂತೆ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಘಟನೆಯನ್ನು ಗಂಭೀರಾಗಿ ಪರಿಗಣಿಸಿದ್ದ ಪೊಲೀಸರು ಹಲವರನ್ನು ಬಂಧನಕ್ಕೊಪಡಿಸಿದ್ದಾರೆ. ಘಟನೆ ಬಳಿಕ ಈ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಕಠಿಣಗೊಳಿಸಲಾಗಿದ್ದು, ಸಾಮಾನ್ಯ ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಕೆಲ ದಿನಗಳ ಹಿಂದೆ ತರಕಾರಿ ಹಾಗೂ ಹಣ್ಣು ಮಾರಾಟಗಾರರು ಬರುತ್ತಿದ್ದರು. ಆದರೆ, ಕಳೆದ ಐದು ದಿನಗಳಿಂದ ಅವರೂ ಕೂಡ ಬರುತ್ತಿಲ್ಲ. ಹಿಂಸಾಚಾರ ನಡೆಯುವುದಕ್ಕೂ ಮುನ್ನ ಅಲ್ಪ ಸ್ವಲ್ಪವಾದರೂ ಅಗತ್ಯ ವಸ್ತುಗಳು ಸಿಗುತ್ತಿದ್ದವು. ಆದರೀಗ, ಸೀಲ್'ಡೌನ್ ಕಠಿಣವಾಗಿದ್ದು, ಯಾರೊಬ್ಬರೂ ಬರುತ್ತಿಲ್ಲ. ಮೈಸೂರು ರಸ್ತೆಯನ್ನು ಹೊರಗಿನಿಂದಲೇ ಬಂದ್ ಮಾಡಲಾಗಿದ್ದು, ಯಾರೊಬ್ಬರನ್ನೂ ಒಳಗೆ ಬಿಡುತ್ತಿಲ್ಲ. ನಾವೂ ಕೂಡ ಹೊರಗೆ ಹೋಗುತ್ತಿಲ್ಲ ಎಂದು ಅರಾಫತ್ ನಗರ ನಿವಾಸಿ ಮೊಹಮ್ಮದ್ ಜಮೀರ್ ಹೇಳಿದ್ದಾರೆ.
ಒಮ್ಮೆ ಗೆಳೆಯನ ಬಳಿ ಹಾಲು ತರಲು ಹೋಗಿದ್ದೆ. ಈ ವೇಳೆ ಮಹಿಳೆಯೊಬ್ಬರು ಓಡಿ ಬಂದು ನನಗೆ ಮಗುವಿದ್ದು, ಕೆಲ ದಿನಗಳಿಂದ ಎಲ್ಲಿಯೂ ಹಾಲು ಸಿಗುತ್ತಿಲ್ಲ ಎಂದು ಹೇಳಿದರು. ಬಿಬಿಎಂಪಿ ಉಚಿತ ಹಾಲು ವಿತರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ನಗೆ ಸಿಗುತ್ತಿಲ್ಲ. ದಿನಸಿ ಅಂಗಡಿಗಳು ಬೆಳಿಗ್ಗೆ ಹಾಗೂ ಸಂಜೆ ವೇಳೆ ಕೆಲ ಗಂಟೆಗಳ ಕಾಲವಷ್ಟೇ ತೆರೆದಿರುತ್ತದೆ ಎಂದು ತಿಳಿಸಿದ್ದಾರೆ.
ಕೆಲವರು ಸೃಷ್ಟಿಸಿದ ಹಿಂಸಾಚಾರದಿಂದ ನಾವು ಶಿಕ್ಷೆ ಅನುಭವಿಸುವಂತಾಗಿದೆ. ಭಾನುವಾರ ರಾತ್ರಿ ಘರ್ಷಣೆ ಏರ್ಪಟ್ಟ ಬಳಿಕ ನಮಗೆ ಅಗತ್ಯ ವಸ್ತುಗಳೂ ಕೂಡ ಸಿಗುತ್ತಿಲ್ಲ. ಇಲ್ಲಿನ ಅಂಗಡಿಗಳಲ್ಲಿದ್ದ ವಸ್ತುಗಳೂ ಕೂಡ ಖಾಲಿಯಾಗುತ್ತಿವೆ. ಕೆಲವು ಬಾರಿ ಆಹಾರ ಹಾಗೂ ಪಡಿತರ ಕಿಟ್ಸ್ ಗಳನ್ನು ನೀಡುತ್ತಾರೆ. ಇನ್ನು ಕೆಲವೊಮ್ಮೆ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಜನರಿಗೆ ಆಹಾರ ನೀಡಲು ಅವಕಾಶ ನೀಡಲಾಗುತ್ತಿಲ್ಲ ಎಂದು ಎನ್'ಜಿಒ ಒಬ್ಬರು ಹೇಳಿದ್ದಾರೆ.
ಎನ್'ಜಿಒ ಗಳು ನೀಡುತ್ತಿದ್ದ ಆಹಾರಗಳನ್ನು ತೆಗೆದುಕೊಂಡು ಬಂದು ಮೊದಲು ಜನರಿಗೆ ಹಂಚುತ್ತಿದ್ದೆ. ಆದರೆ, ಅವರಿಗೇ ಇದೀಗ ಒಳಗೆ ಬರಲು ಅವಕಾಶ ನೀಡಲಾಗುತ್ತಿಲ್ಲ. ವೈದ್ಯಕೀಯ ಸಹಾಯ ಪಡೆಯಲೂ ಕೂಡ ನಮಗೆ ಸಾಧ್ಯವಾಗುತ್ತಿಲ್ಲ. 3 ದಿನಗಳ ಹಿಂದಷ್ಟೇ ನನ್ನ ಸ್ನೇಹಿತನ ಮಗಳಿಗೆ ಜ್ವರ ಬಂದಿದ್ದು, ಔಷಧಿ ತರಲು ಹೊರಗೆ ಹೋಗಲಾಗಿತ್ತು. ಆದರೆ. ಎಲ್ಲಿಯೂ ಔಷಧಿ ಸಿಗಲಿಲ್ಲ. ಭದ್ರತೆ ನೀಡುತ್ತಿರುವ ಪೊಲೀಸರು ಔಷಧಿ ನೀಡುವುದಕ್ಕಾದರೂ ಸಹಾಯ ಮಾಡಬೇಕು. ಆಹಾರ ಹಾಗೂ ಔಷಧಿಗಾಗಿ ಸಾಕಷ್ಟು ರೋಗಿಗಳು ಇಲ್ಲಿ ಪರದಾಡುತ್ತಿದ್ದಾರೆಂದು ಜಮೀರ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇಯರ್ ಗೌತಮ್ ಕುಮಾರ್ ಅವರು, ನಮ್ಮಿಂದ ಸಾಧ್ಯವಾದಷ್ಟು ಮನೆಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದೇವೆ. ಈ ವೇಳೆ ಕೆಲ ಮನೆಗಳು ಬಿಟ್ಟು ಹೋಗಿರಬಹುದು. ನಮ್ಮ ಸಹಾಯವಾಣಿ ಸಂಖಅಯೆ 080-61914960 ಜನರು ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಆಯುಕ್ತರು ಹಾಗೂ ಜಂಟಿ ಆಯುಕ್ತರೊಂದಿಗೆ ಮಾತುಕತೆ ನಡೆಸಿ, ಪರಿಶೀಲನೆ ನಡೆಸುತ್ತೇನೆಂದು ಹೇಳಿದ್ದಾರೆ.
ಈಗಾಗಲೇ ತರಕಾರಿ ಹಾಗೂ ಹಣ್ಣುಗಳ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಜನರು ರಸ್ತೆಗಳಲ್ಲಿ ಸುತ್ತಾಡುತ್ತಿರುವ ಕುರಿತು ಸಾಕಷ್ಟು ದೂರುಗಳೂ ಕೂಡ ಬರುತ್ತಿವೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


