ನಂಜನಗೂಡಿನ ಜುಬಿಲೆಂಟ್ ಕಂಪನಿಯಲ್ಲಿ ಸೋಂಕು: ತನಿಖೆಗೆ ಐಎಎಸ್ ಅಧಿಕಾರಿಯ ನೇಮಕ
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಜುಬಿಲೆಂಟ್ ಫಾರ್ಮಾ ಕಂಪನಿಯ ನೌಕರರಿಗೆ ಕೋವಿಡ್-19 ಸೋಂಕು ಉಂಟಾದ ಪ್ರಕರಣಗಳ ತನಿಖೆ ನಡೆಸಲು ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಿದೆ.

ಬೆಂಗಳೂರು:`ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಜುಬಿಲೆಂಟ್ ಫಾರ್ಮಾ ಕಂಪನಿಯ ನೌಕರರಿಗೆ ಕೋವಿಡ್-19 ಸೋಂಕು ಉಂಟಾದ ಪ್ರಕರಣಗಳ ತನಿಖೆ ನಡೆಸಲು ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಿದೆ.
ಮೈಸೂರು ಕೋವಿಡ್-19 ಹಾಟ್ಸ್ಪಾಟ್ ಆಗಲು ನಂಜನಗೂಡು ಜುಬಿಲೆಂಟ್ ಫಾರ್ಮಾ ಕಂಪನಿಯೇ ಮುಖ್ಯ ಕಾರಣ ಎಂದು ಹೇಳಿರುವ ಈ ಆದೇಶವು, ಹಲವು ಜನರು ಕೊರೋನವೈರಸ್ ಸೋಂಕಿಗೆ ಒಳಗಾಗಲು ಕಂಪನಿ ಕಾರಣವಾಗಿದೆ ಎಂದು ಹೇಳಿದೆ.
ಆದ್ದರಿಂದ ನಂಜನಗೂಡಿಯಲ್ಲಿ ಮೊದಲು, ಯಾರಿಂದ ಮತ್ತು ಎಲ್ಲಿಂದ ಸೋಂಕು ಹರಡಿತು, ಹರಡಲು ಕಾರಣಗಳು ಯಾವುವು, ಕಂಪನಿಯ ಜವಾಬ್ದಾರಿ ಏನು ಮುಂತಾದವುಗಳ ಬಗ್ಗೆ ತನಿಖೆ ನಡೆಸಲು ಹರ್ಷ ಗುಪ್ತಾ ಅವರನ್ನು ನೇಮಿಸಲಾಗಿದೆ ಎಂದು ಅದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


