ರಸ್ತೆಯಲ್ಲಿ ನೂರರ ಗರಿಗರಿ ನೋಟು: ಕೊರೋನಾ ವೈರಸ್ ಭೀತಿಯಿಂದ ಬೆಚ್ಚಿ ಬಿದ್ದ ಗಂಗಾವತಿ ಜನ
ಗಂಗಾವತಿಯ ಜಯನಗರದ ಮೊದಲ ಹಂತದ ಎರಡನೇ ತಿರುವಿನಲ್ಲಿ ಬೆಳಂಬೆಳಗ್ಗೆ ರಸ್ತೆಯಲ್ಲಿ ನೂರರ ಗರಿಗರಿ ನೋಟುಗಳನ್ನು ಕಂಡು ಜನ ಬೆಚ್ಚಿ ಬಿದ್ದ ಘಟನೆ ನಡೆದಿದೆ.

ಗಂಗಾವತಿ: ಇಲ್ಲಿನ ಜಯನಗರದ ಮೊದಲ ಹಂತದ ಎರಡನೇ ತಿರುವಿನಲ್ಲಿ ಬೆಳಂಬೆಳಗ್ಗೆ ರಸ್ತೆಯಲ್ಲಿ ನೂರರ ಗರಿಗರಿ ನೋಟುಗಳನ್ನು ಕಂಡು ಜನ ಬೆಚ್ಚಿ ಬಿದ್ದ ಘಟನೆ ನಡೆದಿದೆ.
ಹಾಸ್ಯ ಸಾಹಿತಿ ಬೀಚಿ ಬಿ. ಪ್ರಾಣೇಶ ಅವರ ನಿವಾಸ ಸಮೀಪ ಇರುವ ಉದ್ಯಮಿ ಗುಪ್ತ ಎಂಬುವವರ ಮನೆ ಸಮೀಪ ಈ ಘಟನೆ ನಡೆದಿದ್ದು, ಅಪರಿಚಿತರು ನೂರು ರೂಪಾಯಿ ಮುಖ ಬೆಲೆಯ ಒಟ್ಟು ಐದು ನೋಟುಗಳನ್ನು ಎಸೆದು ಹೋಗಿದ್ದಾರೆ.
ನೂರರ ನೋಟು ಕಂಡ ಜನ ಭಯಭೀತರಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿ ನಗರ ಠಾಣೆಯ ಪಿಎಸ್ಐ ವೆಂಕಟಸ್ವಾಮಿ ಪರಿಶೀಲನೆ ನಡೆಸಿದರು.
ಕೊರೋನಾದಂತ ವಿಪತ್ತಿನ ಸಂದರ್ಭದಲ್ಲಿ ಅಪರಿಚಿತರ ಇಂತಹ ಕೃತ್ಯಗಳಿಂದ ಜನ ತೀವ್ರ ಆತಂಕಕ್ಕೀಡಾಗಿದ್ದಾರೆ. ಪೊಲೀಸರು ನೋಟುಗಳನ್ನು ಪರಿಶೀಲಿಸಿ ವಶಕ್ಕೆ ಪಡೆದುಕೊಂಡರು.
ವರದಿ: ಶ್ರೀನಿವಾಸ .ಎಂ.ಜೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


