ರಾಜ್ಯ

ಗಂಗಾವತಿ: ಅಂಗಳದಲ್ಲಿ ಆಟವಾಡಿಕೊಂಡಿದ್ದ ಮಗುವಿಗೆ ದ್ರಾವಣ ಹಾಕಿ ಪರಾರಿಯಾದ ದುಷ್ಕರ್ಮಿಗಳು

ಆಟವಾಡಿಕೊಂಡಿದ್ದ ಎರಡು ವರ್ಷದ ಪುಟ ಬಾಲಕನೊಬ್ಬನಿಗೆ ಅಪರಿಚಿತ ವ್ಯಕ್ತಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಆಗಮಿಸಿ ಹಾಡುಹಗಲೆ ಬಾಯಿಕೆ ಯಾವುದೋ ದ್ರಾವಣ ಹಾಕಿ ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.

ಗಂಗಾವತಿ: ಅಂಗಳದಲ್ಲಿ ಆಟವಾಡಿಕೊಂಡಿದ್ದ ಮಗುವಿಗೆ ದ್ರಾವಣ ಹಾಕಿ ಪರಾರಿಯಾದ ದುಷ್ಕರ್ಮಿಗಳು
ಸಂಗ್ರಹ ಚಿತ್ರ
Published On :

ಗಂಗಾವತಿ: ಆಟವಾಡಿಕೊಂಡಿದ್ದ ಎರಡು ವರ್ಷದ ಪುಟ ಬಾಲಕನೊಬ್ಬನಿಗೆ ಅಪರಿಚಿತ ವ್ಯಕ್ತಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಆಗಮಿಸಿ ಹಾಡುಹಗಲೆ ಬಾಯಿಕೆ ಯಾವುದೋ ದ್ರಾವಣ ಹಾಕಿ ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ. 

ನಗರದ ಕೇಂದ್ರ ಬಸ್ ನಿಲ್ದಾಣದ ಹಿಂದಿರುವ ವಿವೇಕಾನಂದ ಕಾಲೋನಿ  ನಿವಾಸಿ ಬಸಯ್ಯ ಹಿರೇಮಠ ಎಂಬುವವರ ಮಗ ಸಿದ್ಧಾರ್ಥ ಎಂಬ ಪುಟ್ಟ ಬಾಲಕನಿಗೆ ಅಪರಿಚತ ದುಷ್ಕರ್ಮಿಗಳು ಲಸಿಕೆ ಹಾಕಿ ಪರಾರಿಯಾಗಿದ್ದಾರೆ.    

ತನ್ನ ಅಕ್ಕ ಶ್ರೇಯಾ ಹಿರೇಮಠ ಜೊತೆ ಮನೆಯ ಅಂಗಳದಲ್ಲಿ ಆಟವಾಡಿಕೊಂಡಿದ್ದ ಮಗುವಿಗೆ, ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಅಪರಿಚಿತರು ಚಾಕೊಲೆಟ್ ಕೊಡುವುದಾಗಿ ಬಾಯಿ ತೆಗೆಯಿಸಿ ಎರಡು ಹನಿ ಯಾವುದೋ ಲಸಿಕೆ ಹಾಕಿ ಪರಾರಿಯಾಗಿದ್ದಾರೆ. 

ಘಟನೆ ಗಮನಕ್ಕೆ ಬರುತ್ತಿದ್ದಂತೆಯೆ ಪಾಲಕರು ಕೂಡಲೆ ಮಗುವನ್ನು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಈ ಬಗ್ಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಪೊಲೀಸ್ ಠಾಣೆಗೆ ಎಂಎಲ್ಸಿ ವರದಿ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.