ಕೊರೋನಾ ಭೀತಿ: ಸಂಖ್ಯಾವಾರು, ಶೇಕಡಾವಾರುಗಳನ್ನೆಲ್ಲಾ ಪಕ್ಕಕ್ಕಿಡಿ, ಇತರರಿಗೆ ಹೋಲಿಕೆ ಮಾಡಿದರೆ ರಾಜ್ಯವೇ ಉತ್ತಮ!
ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಗತಿಯನ್ನು ನೋಡುತ್ತಿದ್ದರೆ, ಎಲ್ಲರ ಎದೆ ನಡುಗುತ್ತಿರುವುದಂತೂ ನಿಜ.ಅದರಲ್ಲೂ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 44 ಪ್ರಕರಣಗಳು ಹೆಚ್ಚಾಗಿರುವುದಂತೂ ಈ ಭೀತಿಯನ್ನು ಮತ್ತಷ್ಟು ಹೆಚ್ಚಾಗುವಂತೆ ಆದರೆ, ಸಂಖ್ಯಾವಾರು, ಶೇಕಡಾವಾರುಗಳನ್ನೆಲ್ಲಾ ಪಕ್ಕಕ್ಕಿಟ್ಟು, ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ನಾವೇ ಉತ್ತಮವಾಗಿದ್ದೇವೆಂಬ ತುಸು ನೆಮ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಗತಿಯನ್ನು ನೋಡುತ್ತಿದ್ದರೆ, ಎಲ್ಲರ ಎದೆ ನಡುಗುತ್ತಿರುವುದಂತೂ ನಿಜ.ಅದರಲ್ಲೂ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 44 ಪ್ರಕರಣಗಳು ಹೆಚ್ಚಾಗಿರುವುದಂತೂ ಈ ಭೀತಿಯನ್ನು ಮತ್ತಷ್ಟು ಹೆಚ್ಚಾಗುವಂತೆ ಆದರೆ, ಸಂಖ್ಯಾವಾರು, ಶೇಕಡಾವಾರುಗಳನ್ನೆಲ್ಲಾ ಪಕ್ಕಕ್ಕಿಟ್ಟು, ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ನಾವೇ ಉತ್ತಮವಾಗಿದ್ದೇವೆಂಬ ತುಸು ನೆಮ್ಮದಿ ಸಿಗುವುದಂತೂ ಸತ್ಯ.
ರಾಜ್ಯದಲ್ಲಿ ಈ ವರೆಗೂ 359 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 13 ಮಂದಿ ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ.
ಭಾರತದಲ್ಲಿ ಪ್ರತೀ ಮಿಲಿಯನ್ ಜನಸಂಖ್ಯೆಗೆ ವೈರಸ್ ಪೀಡಿತ ಪ್ರಕರಣಗಳ ಸಂಖ್ಯೆ 10 ಆಗಿದೆ. ಗುರುವಾರದ ವರದಿ ಪ್ರಕಾರ ಕರ್ನಾಟಕದಲ್ಲಿ ಇದರ ಸಂಖ್ಯೆ 5.15 ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 97.89, ಮಹಾರಾಷ್ಟ್ರದ 28.52, ಜಮ್ಮು ಮತ್ತು ಕಾಶ್ಮೀರದಲ್ಲಿ 25.02, ಮತ್ತು ತೆಲಂಗಾಣದಲ್ಲಿ 20ರಷ್ಟಿದೆ. ಈ ರಾಜ್ಯಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಕರ್ನಾಟಕ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದೆ ಎಂದೇ ಹೇಳಬಹುದು.
ಕೊರೋನಾ ಆರಂಭವಾದಾಗಿನಿಂದಲೂ ರಾಜ್ಯದಲ್ಲಿ ಒಟ್ಟು 13 ಸಾವುಗಳು ಸಂಭವಿಸಿವೆ. ದೇಶದಲ್ಲಿ ಸಾವನ್ನಪ್ಪಿತ್ತಿರುವವರ ಸಂಖ್ಯೆಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿ ಸಾವಿನ ಶೇಕಡಾವಾರು 2.1ರಷ್ಟಿದೆ. ಆದರೆ, ದೆಹಲಿಯಲ್ಲಿ 22.7%, ಮಹಾರಾಷ್ಟ್ರದಲ್ಲಿ 17.3%, ಮಧ್ಯಪ್ರದೇಶದಲ್ಲಿ 7.3%, ಗುಜರಾತ್ 6%, ತೆಲಂಗಾಣ 5.1%, ಪಂಜಾಬ್ 4.7% ರಷ್ಟಿದೆ.
ವೈರಸ್'ಗೆ ಸಾವನ್ನಪ್ಪುತ್ತಿರುವವರ ಪೈಕಿ ಬಹುತೇಕರು ವಯಸ್ಸಾದವರೇ ಆಗಿದ್ದಾರೆಂದು ಹೇಳಲಾಗುತ್ತಿದ್ದು, ಸೋಂಕಿಗೊಳಗಾದವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ವರೆಗೂ ರಾಜ್ಯದಲ್ಲಿ 88 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆ ಕೂಡ ಕಡಿಮೆಯೇ ಇದೆ. ಈವರೆಗೂ 2.72ರಷ್ಟು ಸ್ಯಾಂಪಲ್ಸ್ ಗಳು ಪರೀಕ್ಷೆಗೊಳಪಟ್ಟಿವೆ.
ಕರ್ನಾಟಕದಲ್ಲಿ ಪ್ರತೀನಿತ್ಯ 44 ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮಾರ್ಚ್ 16 ರಂದು ಶೇ.57ರಷ್ಟು ಪ್ರಕರಣ ಬೆಳಕಿಗೆ ಬಂದಿದ್ದೇ ಈವರೆಗಿನ ಹೆಚ್ಚಿನ ಪ್ರಕರಣಗಳಾಗಿವೆ. ಲಕ್ಷ ಜನಸಂಖ್ಯೆಗೆ ಕರ್ನಾಟಕದಲ್ಲಿ 225 ಟೆಸ್ಟ್ ಗಳು ನಜಡೆಯುತ್ತಿವೆ. ಲಡಾಖ್ 3,347, ದೆಹಲಿ 1,121, ರಾಜಸ್ತಾನ 594, ಕೇರಳ 521, ಮಹಾರಾಷ್ಟ್ರ 453 ಸಂಖ್ಯೆಗೆ ಹೋಲಿಕೆ ಮಾಡಿದರೆ, ಕರ್ನಾಟಕದ ಸಂಖ್ಯೆ ಕಡಿಮೆಯಿದೆ ಎಂದು ವರದಿಗಳು ತಿಳಿಸಿವೆ,
ಈ ನಡುವೆ ಹೇಳಿಕೆ ನೀಡಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೆಚ್ಚುವರಿ ಟೆಸ್ಟ್ ಕಿಟ್ ಗಳೊಂದಿಗೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಬಳಕ ಪಾಸಿಟಿವ್ ಕೇಸ್ ಗಳ ಸಂಖ್ಯೆಗಳೂ ಹೆಚ್ಚಾಗಲಿದೆ. ಪರೀಕ್ಷೆಗಳೂ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದ್ದೇ ಆದರೆ, ಪಾಸಿಟಿವ್ ಪ್ರಕರಣಗಳ ಸಂಖ್ಯೆಗಳೂ ಕೂಡ ಗಣನೀಯವಾಗಿ ಏರಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


