ರಾಜ್ಯ

ವಿಜಯಪುರ: ಕೊರೊನಾ ಪೀಡಿತ ವೃದ್ಧೆಯ ಪತಿ ಅನಾರೋಗ್ಯದಿಂದ ಸಾವು

ವಿಜಯಪುರ ಜಿಲ್ಲೆಯ ಕೊರೋನಾವೈರಸ್ ಪೀಡಿತ ವೃಉದ್ದೆಯ ಪತಿ (69) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ಈ ವೃದ್ದ ಸಾವನ್ನಪ್ಪಿದ್ದು ಇಂದು ಮಧ್ಯಾಹ್ನವಷ್ಟೇ ಆತನ ಪತ್ನಿಗೆ ಕೊರೋನಾ ಇರುವುದು ದೃಢಪಟ್ಟಿತ್ತು.

ವಿಜಯಪುರ: ಕೊರೊನಾ ಪೀಡಿತ ವೃದ್ಧೆಯ ಪತಿ ಅನಾರೋಗ್ಯದಿಂದ ಸಾವು
Published On :

ವಿಜಯಪುರ: ವಿಜಯಪುರ ಜಿಲ್ಲೆಯ ಕೊರೋನಾವೈರಸ್ ಪೀಡಿತ ವೃದ್ದೆಯ ಪತಿ (69) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.  ಭಾನುವಾರ ರಾತ್ರಿ ಈ ವೃದ್ದ ಸಾವನ್ನಪ್ಪಿದ್ದು  ಇಂದು ಮಧ್ಯಾಹ್ನವಷ್ಟೇ ಆತನ ಪತ್ನಿಗೆ ಕೊರೋನಾ ಇರುವುದು ದೃಢಪಟ್ಟಿತ್ತು.

ವಿಜಯಪುರದಲ್ಲಿ ನಿನ್ನೆಯವರೆಗೆ ಯಾವುದೇ ಕೊರೋನಾ ಪ್ರಕರಣಗಳು ವರದಿಯಾಗಿರಲಿಲ್ಲ ಆದರೆ ಇಂದು ಮಧ್ಯಾಹ್ನ ವಿಜಯಪುರ ಚಪ್ಪರ ಬಂದ್ ಕಾಲೋನಿಯ ನಿವಾಸಿ 60 ವರ್ಷದ ವೃದ್ದೆಯಲ್ಲಿ ಕೊರೋನಾ ಕಾಣಿಸಿತ್ತು. ಆದರೆ ಆಕೆ ಯಾವ ದೂರದೂರಿನ ಪ್ರಯಾಣಕ್ಕೆ ತೆರಳಿಲ್ಲದಿದ್ದದ್ದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ.

ಇದೀಗ ಮೃತಪಟ್ಟಿರುವ ಆಕೆಯ ಪತಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾನೆ ಎನ್ನುವುದು ದೃಢವಾಗಿಲ್ಲ. ಮೃತನ ವೈದ್ಯಕೀಯ ವರದಿಗಾಗಿ ಜಿಲ್ಲಾಡಳಿತ ನಿರೀಕ್ಷೆಯಲ್ಲಿದೆ. 

ಮೃತನದು ಅವಿಭಕ್ತ ಕುಟುಂಬವಾಗಿದ್ದು ಬರೋಬ್ಬರಿ 24 ಜನರು ಇದ್ದಾರೆ. ಒಟ್ಟು 22 ಜನರ ಗಂಟಲು ದ್ರವವನ್ನ ಪರೀಕ್ಷೆಗೆ ಕಳಿಸಲಾಗಿದೆ. ಮೃತ ವ್ಯಕ್ತಿ ಮಹಾರಾಷ್ಟ್ರದಲ್ಲಿ ತನ್ನ ಸಂಬಂಧಿಗಳ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದನೆಂದು ತಿಳಿದುಬಂದಿದೆ. ಇದೇ ಕಾರಣ ಆತನ ಪತ್ನಿಗೂ ಕೊರೋನಾ ತಗುಲಿರಬಹುದು ಎಂದು ಶಂಕೆ ಇದೀಗ ವ್ಯಕ್ತವಾಗಿದೆ.  ಆದರೆ ವೃದ್ದನ ಸಾವಿನ ರಹಸ್ಯ ಅರಿಯಲು ವೈದ್ಯಕೀಯ ವರದಿ ಬರುವವರೆಗೆ ಕಾಯಬೇಕಿದೆ.     

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.