ಕೊರೋನಾ ವೈರಸ್: ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಿಸಿದ ಸಿಎಂ ಬಿಎಸ್ ವೈ
ಮಾರಕ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳ ಸ್ಥಾನವನ್ನು ಸಿಎಂ ಬಿಎಸ್ ಯಡಿಯೂರಪ್ಪ ಭರ್ತಿ ಮಾಡಿದ್ದು, ಬೆಂಗಳೂರು ನಗರದ ಉಸ್ತುವಾರಿಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

ಬೆಂಗಳೂರು: ಮಾರಕ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳ ಸ್ಥಾನವನ್ನು ಸಿಎಂ ಬಿಎಸ್ ಯಡಿಯೂರಪ್ಪ ಭರ್ತಿ ಮಾಡಿದ್ದು, ಬೆಂಗಳೂರು ನಗರದ ಉಸ್ತುವಾರಿಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.
ಕೊರೋನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹಬ್ಬುತ್ತಿದ್ದು, ಸರ್ಕಾರ ಕೂಡ ಸಮರೋಪಾದಿಯಲ್ಲಿ ಹತ್ತಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಎಲ್ಲ ಸಚಿವರಿಗೂ ಒಂದೊಂದು ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹೊರಡಿಸಲಾಗಿದ್ದ ಆದೇಶವನ್ನು ಮಾರ್ಪಡಿಸಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ, ಕರ್ನಾಟಕ ಸರ್ಕಾರದ ಸಚಿವಾಲಯ ಆದೇಶ ಹೊರಡಿಸಿದೆ.
ಅದರಂತೆ ಸಚಿವ ಶ್ರೀರಾಮುಲು ಅವರಿಗೆ ಚಿತ್ರದುರ್ಗದ ಹೊಣೆಗಾರಿಕೆ ನೀಡಿದ್ದು, ಡಿಸಿಎಂ ಅಶ್ವತ್ ನಾರಾಯಣ ಅವರಿಗೆ ಹೆಚ್ಚುವರಿಯಾಗಿ ರಾಮನಗರ ಜಿಲ್ಲೆ ವಹಿಸಲಾಗಿದೆ. ಇನ್ನು ಸಚಿವ ವಿ ಸೋಮಣ್ಣ ಅವರಿಗೆ ಕೊಡಗು ಜಿಲ್ಲೆ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.
ಉಳಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಇಂತಿದೆ
ಬಿಎಸ್ ಯಡಿಯೂರಪ್ಪ- ಬೆಂಗಳೂರು ನಗರ ಜಿಲ್ಲೆ
ಆರ್.ಅಶೋಕ್- ಬೆಂಗಳೂರು ಗ್ರಾಮಾಂತರ
ಸಿ.ಎಸ್.ಅಶ್ವಥ್ ನಾರಾಯಣ- ರಾಮನಗರ
ಎಸ್.ಸುರೇಶ್ ಕುಮಾರ್ – ಚಾಮರಾಜನಗರ
ವಿ.ಸೋಮಣ್ಣ – ಕೊಡಗು (ಹೆಚ್ಚುವರಿ)
ಲಕ್ಷ್ಣಣ ಸವದಿ- ರಾಯಚೂರು
ಗೋವಿಂದ ಕಾರಜೋಳ- ಬಾಗಲಕೋಟೆ
ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ
ಜಗದೀಶ್ ಶೆಟ್ಟರ್- ಬೆಳಗಾವಿ, ಧಾರವಾಡ (ಹೆಚ್ಚುವರಿ)
ಬಿ.ಶ್ರೀರಾಮುಲು- ಚಿತ್ರದುರ್ಗ
ಸಿ.ಟಿ.ರವಿ – ಚಿಕ್ಕಮಗಳೂರು
ಬಸವರಾಜ ಬೊಮ್ಮಾಯಿ – ಹಾವೇರಿ, ಉಡುಪಿ (ಹೆಚ್ಚುವರಿ)
ಕೋಟಾ ಶ್ರೀನಿವಾಸ ಪೂಜಾರಿ – ದಕ್ಷಿಣ ಕನ್ನಡ
ಜೆ.ಸಿ. ಮಾಧುಸ್ವಾಮಿ – ತುಮಕೂರು, ಹಾಸನ (ಹೆಚ್ಚುವರಿ)
ಸಿ.ಸಿ. ಪಾಟೀಲ – ಗದಗ
ಎಚ್.ನಾಗೇಶ್ – ಕೋಲಾರ
ಪ್ರಭು ಚವ್ಹಾಣ – ಬೀದರ್, ಯಾದಗಿರಿ (ಹೆಚ್ಚುವರಿ)
ಶಶಿಕಲಾ ಜೊಲ್ಲೆ – ವಿಜಯಪುರ
ಶಿವರಾಮ್ ಹೆಬ್ಬಾರ್ – ಉತ್ತರ ಕನ್ನಡ
ಎಸ್.ಟಿ.ಸೋಮಶೇಖರ್ – ಮೈಸೂರು
ಕೆ.ಸುಧಾಕರ್ – ಚಿಕ್ಕಬಳ್ಳಾಪುರ
ಕೆ.ಸಿ.ನಾರಾಯಣಗೌಡ – ಮಂಡ್ಯ
ಆನಂದಸಿಂಗ್- ಬಳ್ಳಾರಿ
ಬೈರತಿ ಬಸವರಾಜ – ದಾವಣಗೆರೆ
ಬಿ.ಸಿ. ಪಾಟೀಲ್ - ಕೊಪ್ಪಳ
ಇದೇ ವೇಳೆ ಸರ್ಕಾರ ಎಲ್ಲ ಜಿಲ್ಲೆಗಳ ಉಸ್ತುವಾರಿಯ ಜವಾಬ್ದಾರಿಯನ್ನು ಐಎಎಸ್ ಅಧಿಕಾರಿಗಳಿಗೆ ನೀಡಿದ್ದು, ಅದರ ವಿವರ ಇಂತಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


