ಹುಬ್ಬಳ್ಳಿ: ಸ್ವಯಂಚಾಲಿತ ಉಸಿರಾಟದ ಸಾಧನ ಅಂಬು ಬ್ಯಾಗ್!
ಕೋವಿಡ್-19 ರೋಗಿಗಳಿಗೆ ಉಸಿರಾಟಕ್ಕೆ ಅನುಕೂಲವಾಗುವಂತಹ ಸ್ವಯಂ ಚಾಲಿತ ಉಸಿರಾಟದ ಸಾಧನ ಅಂಬು ಬ್ಯಾಗ್ ನ್ನು ಹುಬ್ಬಳ್ಳಿಯ ಸ್ಟಾರ್ಟ್ ಆಪ್ ಕಂಪನಿಯೊಂದು ಸಿದ್ಧಪಡಿಸಿದೆ.

ಹುಬ್ಬಳ್ಳಿ: ಕೋವಿಡ್-19 ರೋಗಿಗಳಿಗೆ ಉಸಿರಾಟಕ್ಕೆ ಅನುಕೂಲವಾಗುವಂತಹ ಸ್ವಯಂ ಚಾಲಿತ ಉಸಿರಾಟದ ಸಾಧನ ಅಂಬು ಬ್ಯಾಗ್ ನ್ನು ಹುಬ್ಬಳ್ಳಿಯ ಸ್ಟಾರ್ಟ್ ಆಪ್ ಕಂಪನಿಯೊಂದು ಸಿದ್ಧಪಡಿಸಿದೆ.
ಕಿಮ್ಸ್ ಆಸ್ಪತ್ರೆ ಮತ್ತು ಮುಂಬೈಯ ಐಐಟಿ ಸಹಯೋಗದೊಂದಿಗೆ ಒರಿಗಮಿ ಆಟೊಮೇಷನ್ ಸ್ವಯಂಚಾಲಿತ ಉಸಿರಾಟದ ಸಾಧನವನ್ನು ಕಂಡುಹಿಡಿದಿದೆ. ಸಾಗರ್ ವೀರಪ್ಪನವರ್ ಮಾಲೀಕತ್ವದ ಈ ಕಂಪನಿ ಈಗಾಗಲೇ ಕ್ಲಿನಿಕಲ್ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಅಂಬು ಬ್ಯಾಗ್ ನ್ನು ಪ್ರದರ್ಶನದಲ್ಲಿಡಲಾಗಿದ್ದು, ತೃಪ್ತಿದಾಯಕ ಮಾತುಗಳು ಕೇಳಿಬರುತ್ತಿವೆ.
ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಆಸ್ಪತ್ರೆಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೊರೋನಾ ಪಾಸಿಟಿವ್ ಕಂಡುಬಂದ ಅನೇಕ ವೃದ್ಧರು ಹಾಗೂ ದುರ್ಬಲ ರೋಗಿಗಳಲ್ಲಿ ಉಸಿರಾಟದ ತೊಂದರೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅನೇಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳ ಕೊರತೆಯಿದೆ.
ವೈದ್ಯಕೀಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತಯಾರಿಕಾ ಕಂಪನಿಗಳಿಂದ ವೆಂಟಿಲೇಟರ್ ಪಡೆದುಕೊಳ್ಳುವುದು ಕಷ್ಟಕರವಾಗಿದೆ. ಇವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಟಾರ್ಟ್ ಅಪ್ ಕಂಪನಿ ಅಂಬು ಬ್ಯಾಗ್ ಉಸಿರಾಟದ ಸಾಧನವನ್ನು ಸಿದ್ಧಪಡಿಸಿದೆ.
ಗಾಳಿಯೂ ಹರಿವಿನ ನಿಯಂತ್ರಣಕ್ಕಾಗಿ ಸಂಪೂರ್ಣ ಎಲೆಕ್ಟ್ರಾನಿಕ್ ಸ್ಟಾಕ್ ನೊಂದಿಗೆ ಈ ಉಪಕರಣವನ್ನು ತಯಾರಿಸಲಾಗಿದ್ದು, ಮಕ್ಕಳು, ವಯಸ್ಕರು ಹಾಗೂ ವೃದ್ಧರಿಗೆ ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ ಎಂದು ಇದನ್ನು ಕಂಡುಹಿಡಿದವರಲ್ಲಿ ಒಬ್ಬರಾದ ಆನಂದ್ ಕಡಕೋಳ್ ಹೇಳುತ್ತಾರೆ.
ಇದರ ಬೆಲೆ 2 ಲಕ್ಷದಿಂದ 5 ಲಕ್ಷ ನಡುವೆ ಆಗಿದ್ದು, ಆರು ತಿಂಗಳ ಹಿಂದೆಯೇ ಕೆಲಸ ಆರಂಭಿಸಲಾಯಿತು. ಜನವರಿ ತಿಂಗಳಿನಿಂದ ವಿಶ್ವದ ವಿವಿಧೆಡೆ ಕೋವಿಡ್ -19 ಕಾಯಿಲೆ ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಈ ಉಪಕರಣಗಳನ್ನು ಹೆಚ್ಚಾಗಿ ಉತ್ಪಾದಿಸಲು ಯೋಜನೆ ರೂಪಿಸಲಾಯಿತು. ಇದೀಗ ಬಳಕೆಗೆ ಸಿದ್ಧವಾಗಿದೆ. ಸಂಬಂಧಿತ ಪ್ರಾಧಿಕಾರದಿಂದ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಂಬು ಬ್ಯಾಗ್ ನ್ನು ಕಿಮ್ಸ್ ಆಸ್ಪತ್ರೆಯ ನಿರ್ದೇಶಕರು ಹಾಗೂ ಇತರ ತಜ್ಞರ ಮುಂದೆ ಪ್ರದರ್ಶಕ್ಕೀಡಲಾಗಿದ್ದು, ಕಡಿಮೆ ವೆಚ್ಚದಲ್ಲಿ ಉತ್ತಮ ಉಪಕರಣವನ್ನು ತಯಾರಿಸಲಾಗಿದ್ದು, ಎಲ್ಲರೂ ಸಂತೋಷಗೊಂಡಿದ್ದಾರೆ. ಇನ್ನು ಕೆಲವೊಂದು ಪರೀಕ್ಷೆಗಳನ್ನು ನಡೆಸಿದ ಬಳಿಕ ರೋಗಿಗಳಿಗೆ ಉಪಚರಿಸಲು ಈ ಉಪಕರಣವನ್ನು ಬಳಸಲಾಗುವುದು ಎಂದು ಕಿಮ್ಸ್ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


