ದಕ್ಷಿಣ ಕನ್ನಡ: ಶಟರ್ ಮುರಿದು ಲಕ್ಷಾಂತರ ಬೆಲೆಯ ಮದ್ಯ ಕಳವು
ಎಂಎಸ್ ಐಎಲ್ ನ ವೈನ್ಸ್ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು ೧ ಲಕ್ಷ ಮೌಲ್ಯದ ಮದ್ಯವನ್ನು ಕಳವುಗೈದಿರುವ ಘಟನೆ ಕುತ್ತಾರು ನಿತ್ಯಾನಂದನಗರದಲ್ಲಿ ಬೆಳಕಿಗೆ ಬಂದಿದೆ.

ಉಳ್ಳಾಲ: ಎಂಎಸ್ ಐಎಲ್ ನ ವೈನ್ಸ್ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು ೧ ಲಕ್ಷ ಮೌಲ್ಯದ ಮದ್ಯವನ್ನು ಕಳವುಗೈದಿರುವ ಘಟನೆ ಕುತ್ತಾರು ನಿತ್ಯಾನಂದನಗರದಲ್ಲಿ ಬೆಳಕಿಗೆ ಬಂದಿದೆ.
ಪುರುಷೋತ್ತಮ್ ಪಿಲಾರ್ ಅವರಿಗೆ ಸೇರಿದ ವೈನ್ಸ್ ಅಂಗಡಿಯಲ್ಲಿ ಕಳವು ನಡೆದಿದೆ. ಶಟರ್ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಡಿಮೆ ಬೆಲೆಯ ಮದ್ಯ ಸೇರಿದಂತೆ ಅಧಿಕ ಬೆಲೆಯ ಮದ್ಯದ ಬಾಟಲಿಗಳನ್ನು ದರೋಡೆಗೈದಿದ್ದಾರೆ.
ವೈನ್ಸ್ ಅಂಗಡಿಯೊಳಕ್ಕೆ ಸಿಸಿಟಿವಿ ಅಳವಡಿಸಲಾಗಿದೆ. ಆದರೆ ಚಾಣಾಕ್ಷತನ ತೋರಿಸಿರುವ ಕಳ್ಳರು ಸಿಸಿಟಿವಿ ದಾಖಲೆ ಹೊಂದಿರುವ ಡಿವಿಆರ್ ನ್ನೂ ಕೂಡ ಕಳವು ನಡೆಸಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


