ರಾಜ್ಯ

ಬಾಗಲಕೋಟೆ: ಎರಡೂವರೆ ವರ್ಷದ ಪುಟ್ಟ ಬಾಲಕಿ ಸಂಶಾಯಸ್ಪದ ಸಾವು, ತಂದೆ ವಿರುದ್ಧ ದೂರು ದಾಖಲು

ಎರಡೂವರೆ ವರ್ಷದ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

ಬಾಗಲಕೋಟೆ: ಎರಡೂವರೆ ವರ್ಷದ ಪುಟ್ಟ ಬಾಲಕಿ ಸಂಶಾಯಸ್ಪದ ಸಾವು, ತಂದೆ ವಿರುದ್ಧ ದೂರು ದಾಖಲು
ಬಾಗಲಕೋಟೆ: ಎರಡೂವರೆ ವರ್ಷದ ಪುಟ್ಟ ಬಾಲಕಿ ಸಂಶಾಯಸ್ಪದ ಸಾವು, ತಂದೆ ವಿರುದ್ಧ ದೂರು ದಾಖಲು
Published On :

ಬಾಗಲಕೋಟೆ: ಎರಡೂವರೆ ವರ್ಷದ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

ಮೃತಪಟ್ಟ ಬಾಲಕಿಯನ್ನು ವೈಷ್ಣವಿ ಎಂದು ಗುರುತಿಸಲಾಗಿದೆ. ಆಕೆಯ ತಂದೆ ಧರೆಪ್ಪ ತರದಾಳ ಕೊಲೆ ಮಾಡಿದ್ದಾನೆ ಎಂದು ಮಗುವಿನ ತಾಯಿಯ ಪೋಷಕರು ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಧರೆಪ್ಪ, ಒಂದೂವರೆ ವರ್ಷದ ಹಿಂದೆ ಪತ್ನಿ ವಂದನಾ ಎಂಬುವವರನ್ನು ಅನೈತಿಕ ಸಂಬಂಧ ಹೊಂದಿದ್ದಾರೆಂದು ಶಂಕಿಸಿ ಹತ್ಯೆಗೈದು ಜೈಲು ಸೇರಿದ್ದ. ನಂತರ ಪತ್ನಿಯ ಪೋಷಕರು ಹಾಗೂ ಧರೆಪ್ಪ ನಡುವೆ ರಾಜೀಮಾತುಕತೆ ನಡೆದು ಪ್ರಕರಣಕ್ಕೆ ಅಂತ್ಯಹಾಡಲಾಗಿತ್ತು.

ಇದಾಗಿ ಕೆಲ ದಿನಗಳ ನಂತರ ಧರೆಪ್ಪ ತನ್ನ ಮಗಳು ವೈಷ್ಣವಿಯನ್ನು ತನಗೆ ನಿಡಬೇಕೆಂದು ಬೇಡಿಕೆ ಇಟ್ಟಿದ್ದ. ಅದಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ. ನ್ಯಾಯಾಲಯದ ಆದೇಶದನ್ವಯ ಮಗಳನ್ನು ಕರೆದೊಯ್ದಿದ್ದ. 

ಆದರೆ ಈಗ ವೈಷ್ಣವಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಮಗುವನ್ನು ತಂದೆಯೇ ಕೊಲೆ ಮಾಡಿದ್ದಾನೆಂದು ಮಗುವಿನ ತಾಯಿ ಮನೆಯವರು ಆರೋಪಿಸಿದ್ದಾರೆ.ಘಟನೆ ಕುರಿತಂತೆ ತೆರೆದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.