ದೊಡ್ಡಬಳ್ಳಾಪುರದಲ್ಲಿ ಕಲಿಕಾ ಡ್ರೈವಿಂಗ್ ಲೈಸನ್ಸ್ ,ಇನ್ಸೂರೆನ್ಸ್ ,ಹೆಲ್ಮೆಟ್ ಮೇಳ!
ನಾಗರಿಕರಿಗಾಗಿ ಕಾನೂನು ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಾಳೆ ಕಲಿಕಾ ಡ್ರೈವಿಂಗ್ ಲೈಸೆನ್ಸ್ , ಇನ್ಸೂರೆನ್ಸ್ ಹೈಲೆಟ್ ಮೇಳವನ್ನು ಆಯೋಜಿಸಲಾಗಿದೆ.

ದೊಡ್ಡಬಳ್ಳಾಪುರ:ನಾಗರಿಕರಿಗಾಗಿ ಕಾನೂನು ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಾಳೆ ಕಲಿಕಾ ಡ್ರೈವಿಂಗ್ ಲೈಸೆನ್ಸ್ , ಇನ್ಸೂರೆನ್ಸ್ ಹೈಲೆಟ್ ಮೇಳವನ್ನು ಆಯೋಜಿಸಲಾಗಿದೆ.
ದಕ್ಷ ಐಪಿಎಸ್ ಅಧಿಕಾರಿ ರವಿ. ಡಿ. ಚೆನ್ನಣ್ಣನವರ್ ಈ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ನಾಗರಿಕರಿಗೆ ಬಂದೂಕು ತರಬೇತಿಗೆ ನೋಂದಣಿ ಹಾಗೂ ಪೊಲೀಸರೊಂದಿಗೆ ಉಚಿತ ಟ್ರಾಫಿಕ್ ವಾರ್ಡನ್ ಕೆಲಸ ಮಾಡುವ ನವ ಯುವಕರಿಗೆ ನೋಂದಣಿಗೆ ಅವಕಾಶವಿದೆ.
ಕಲಿಕಾ ಡ್ರೈವಿಂಗ್ ಲೈಸೆನ್ಸ್ ಮಾಡಿಸುವವರು ವಿಳಾಸದ ಪುರಾವೆಗಾಗಿ ಚುನಾವಣಾ ಆಯೋಗದ ಗುರುತಿನ ಚೀಟಿ, ಪಾಸ್ ಪೋರ್ಟ್, ಜೀವ ವಿಮಾ ಪಾಲಿಸಿ, ವಿದ್ಯುತ್ ಬಿಲ್, ಕುಟುಂಬ ಪಡಿತರ ಚೀಟಿ, ನೀರಿನ ಬಿಲ್, ಟೆಲಿಪೋನ್ ಬಿಲ್, ವೇತನದ ಚೀಟಿಯನ್ನು ಹಾಜರುಪಡಿಸಬೇಕಾಗುತ್ತದೆ.
ಜನ್ಮ ದಿನಾಂಕದ ದಾಖಲಾತಿಗಾಗಿ ಜನ್ಮ ದಿನಾಂಕದ ದೃಢೀಕರಣ ಪತ್ರ, ಶಾಲೆಯ ಪ್ರಮಾಣ ಪತ್ರ, ಪಾಸ್ ಪೋರ್ಟ್, ಜೀವ ವಿಮಾ ಪಾಲಿಸಿ, ಅಭ್ಯರ್ಥಿಯು ಅನಕ್ಷರಸ್ಥನಾಗಿದ್ದರೆ ನ್ಯಾಯಾಲಯದಿಂದ ದೃಢೀಕರಣ ಪ್ರಮಾಣ ಪತ್ರ ( ಅಫಿಡವಿಟ್ ) ಹಾಗೂ ರಾಷ್ಟ್ರೀಯತೆಗಾಗಿ ಜನ್ಮ ದಿನಾಂಕದ ದೃಢೀಕರಣ ಪ್ರಮಾಣ ಪತ್ರ, ಶಾಲೆಯ ಪ್ರಮಾಣ ಪತ್ರ, ಅನಿವಾಸಿ ಭಾರತೀಯರು ಚಾಲ್ತಿಯಲ್ಲಿರುವ ಪಾಸ್ ಪೋರ್ಟ್ ನೀಡಬೇಕಾಗುತ್ತದೆ.
ಕಲಿಕಾ ಚಾಲನಾ ಪರವಾನಿಗೆಗೆ ಕೇವಲ 200 ರೂ. ಭರಿಸಬೇಕಾಗುತ್ತದೆ. ಈ ಅವಕಾಶವನ್ನು ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕಾಗಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


