ರಾಜ್ಯ

ಕಲಬುರಗಿ: ಮಕ್ಕಳ ಕಳ್ಳರೆಂದು ಶಂಕೆ, ಗ್ರಾಮಸ್ಥರಿಂದ ತಂದೆ-ಮಗನಿಗೆ ಥಳಿತ

ಮಕ್ಕಳ ಕಳ್ಳರು ಎಂದು ಭಾವಿಸಿ, ತಂದೆ, ಮಗನಿಗೆ ಸ್ಥಳೀಯರು ಥಳಿಸಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಸ್ಟೇಷನ್ ತಾಂಡಾದಲ್ಲಿ ಶನಿವಾರ ನಡೆದಿದೆ

ಕಲಬುರಗಿ: ಮಕ್ಕಳ ಕಳ್ಳರೆಂದು ಶಂಕೆ, ಗ್ರಾಮಸ್ಥರಿಂದ ತಂದೆ-ಮಗನಿಗೆ ಥಳಿತ
ಸಂಗ್ರಹ ಚಿತ್ರ
Published On :

ಕಲಬುರಗಿ: ಮಕ್ಕಳ ಕಳ್ಳರು ಎಂದು ಭಾವಿಸಿ, ತಂದೆ, ಮಗನಿಗೆ ಸ್ಥಳೀಯರು ಥಳಿಸಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಸ್ಟೇಷನ್ ತಾಂಡಾದಲ್ಲಿ ಶನಿವಾರ ನಡೆದಿದೆ

ಶಂಕರ್ ಜೋಶಿ ಹಾಗೂ ಸಂತೋಷ ಜೋಶಿ ಎಂಬ ತಂದೆ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲತಃ ಕಲಬುರಗಿಯ ಬಬಲಾದ ಗ್ರಾಮದವರಾದ ಇವರು, ಇಂದು ಮುಂಜಾನೆ ಸ್ಟೇಷನ್ ತಾಂಡಾಕ್ಕೆ ತೆರಳಿದ್ದರು. 

ಈ ಸಂದರ್ಭದಲ್ಲಿ ಮಗುವೊಂದಕ್ಕೆ ಸಂತೋಷ ಜೋಶಿ,  ಬಿಸ್ಕಿಟ್ ನೀಡಿದ್ದರು. ಅಪರಿಚಿತನೋರ್ವ ಮಗುವಿಗೆ ಬಿಸ್ಕಿಟ್ ನೀಡುತ್ತಿರುವುದನ್ನು ಕಂಡು ಗಾಬರಿಗೊಂಡ ತಾಂಡಾ ನಿವಾಸಿಗಳು, ಅವರಿಬ್ಬರೂ ಮಕ್ಕಳು ಕಳ್ಳರಿರಬಹುದು ಎಂಬ ಭಾವಿಸಿ ಥಳಿಸಿದ್ದಾರೆ.

ಅಪ್ಪ, ಮಗ ಬೇರೆ ಬೇರೆ ಸ್ಥಳಗಳಿಗೆ ತೆರಳಿ ಜೋತಿಷ್ಯ ಹೇಳುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಚಿತ್ತಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.