ಸರ್ಪದೋಷ ನಿವಾರಣೆಗಾಗಿ 5 ಬಾರಿ ಸೆಕ್ಸ್ ಮಾಡು ಎಂದ ಕಾಮಿಸ್ವಾಮಿ ಅಂದರ್!
ಸರ್ಪದೊಷ ಪರಿಹಾರವಾಗಬೇಕಾದರೆ ತನ್ನೊಡನೆ ಐದು ಬಾರಿ ಸೆಕ್ಸ್ ಮಾಡಬೇಕೆಂದು ನಂಬಿಸಿ ಯುವತಿಯ ಅತ್ಯಾಚಾರ ನಡೆಸಲು ಯತ್ನಿಸಿದ್ದ ಕಾಮಿಸ್ವಾಮಿಯ ಪುತ್ರವನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ಪ್ರಧಾನಿ ಆರೋಪಿ ಪರಾರಿಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.

ಬೆಂಗಳೂರು: ಸರ್ಪದೊಷ ಪರಿಹಾರವಾಗಬೇಕಾದರೆ ತನ್ನೊಡನೆ ಐದು ಬಾರಿ ಸೆಕ್ಸ್ ಮಾಡಬೇಕೆಂದು ನಂಬಿಸಿ ಯುವತಿಯ ಅತ್ಯಾಚಾರ ನಡೆಸಲು ಯತ್ನಿಸಿದ್ದ ಕಾಮಿಸ್ವಾಮಿಯ ಪುತ್ರವನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ಪ್ರಧಾನಿ ಆರೋಪಿ ಪರಾರಿಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.
ಘಟನೆ ವಿವರ
ಬಾಣಸವಾಡಿ ಪೋಲೀಸ್ ಠಾಣೆ ವ್ಯಾಪ್ತಿಯ ಸಂಸ್ಥೆಯೊಂದರಲ್ಲಿ ಎಚ್ಆರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ಕೆಲ ಸಮಸ್ಯೆ ತಲೆದೋರಿದ್ದು ಸಲಹೆ ಪಡೆಯುವುದಕ್ಕಾಗಿ ಗಣೇಶ್ ಎಂಬ ಸ್ವಾಮೀಜಿಯನ್ನು ಭೇಟಿಯಾಗುತ್ತಾಳೆ. ಆಗ ಗಣೇಶ್ ಯುವತಿಗೆ ಸರ್ಪದೊಷವಿರುವುದಾಗಿ ಹೇಳಿದ್ದು ಪರಿಹರಿಸಲು ಪೂಜೆ ಮಾಡಬೇಕಿದೆ ಎಂದು ಹೇಳಿದ್ದಾನೆ. ಅಲ್ಲದೆ ಪೂಜಾ ಕೆಲಸಕ್ಕಾಗಿ ನಲವತ್ತು ಸಾವಿರ ರು. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ.
ಕಳೆದ ಶನಿವಾರ ರಾತ್ರಿ ಹತ್ತರಿಂದ ಪೂಜೆ ಪ್ರಾರಂಭಿಸಿ ಸುಮಾರು ಒಂದು ಗಂಟೆ ಕಾಲ ಪೂಜೆ ಮುಂದುವರಿಸಿದ್ದಾನೆ. ಬಳಿಕ ಪೂಜಾ ಸಲಕರಣೆಗಳನ್ನು ಕ್ಕೆ ಸುಬ್ರಹ್ಮಣ್ಯದಲ್ಲಿ ವಿಸರ್ಜನೆ ಮಾಡಬೇಕು ಎಂದು ಹೇಳಿದ ಗಣೇಶ್ ಯುವತಿಯನ್ನು ಸಹ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕರೆದೊಯ್ಯುತ್ತಾನೆ. ಸಂತ್ರಸ್ಥೆ ಸಹ ಆರೋಪ್ಪಿಯ ಮಾತಿಗೆ ಮರುಳಾಗಿ ಅದೇ ದಿನ ರಾತ್ರಿ ಸುಬ್ರಹ್ಮಣ್ಯಕ್ಕೆ ತೆರಳುತ್ತಾಳೆ. ಅಲ್ಲಿ ಆತ ಮೊದಲೇ ಎರಡು ಕೋಣೆಗಳನ್ನು ಬುಕ್ ಮಾಡಿದ್ದು ಯುವತಿಯೊಡನೆ ಕಾಮಕೇಳಿ ಆಡಲು ಸಿದ್ದತೆ ನಡೆಸಿದ್ದನೆನ್ನಲಾಗಿದೆ.
ಅಲ್ಲಿ ಆತ "ನಿನ್ನ ಗುಪ್ತಾಂಗದಲ್ಲಿ ದೋಷವಿದೆ, ಇದನ್ನು ನಿವಾರಿಸಲು ನನ್ನೊಡನೆ ಐದು ಬಾರಿ ಸಂಭೋಗ ನಡೆಸಬೇಕು. ನನ್ನ ಪುತ್ರನೊಡನೆ ಸಹ ದೇಹ ಹಂಚಿಕೊಳ್ಳಬೇಕು. ಇದನ್ನು ಯಾರೊಡನೆ ತಪ್ಪಿಯೂ ಬಾಯಿ ಬಿಡಬಾರದು" ಎಂದು ಹೇಳಿ ಆಕೆಯನ್ನು ಲೈಂಗಿಕ ಕ್ರಿಯೆಗೆ ಪುಸಲಾಯಿಸಿದ್ದಾನೆ. ಇದನ್ನು ಕಂಡ ಯುವತಿಗೆ ಅನುಮಾನ ಬಂದಿದ್ದು ಆಕೆ ಅದೇನೋ ಸಾಹಸ ಮಾಡಿ ಸುಬ್ರಹ್ಮಣ್ಯದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಮರಳಿದ್ದಾಳೆ.
ಬೆಂಗಳೂರಿಗೆ ಆಗಮಿಸಿದ ನಂತರ ಯುವತಿ ಬಾಣಸವಾಡಿ ಪೋಲೀಸರಿಗೆ ದೂರು ಸಲ್ಲಿಸಿದ್ದು ಪೋಲೀಸರು ಗಣೇಶ್ ಮನೆ ಮೇಲೆ ದಾಳಿ ಮಾಡಿ ಆತನ ಪುತ್ರ ಮಣಿಕಂಠನನ್ನು ಬಂಧಿಸಿದ್ದಾರೆ. ಸದ್ಯ ಗಣೇಶ್ ತಲೆಮರೆಸಿಕೊಂಡಿದ್ದು ತೀವ್ರ ಶೋಧ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


