ಗೌರಿ ಹತ್ಯೆಗೆ 2 ವರ್ಷ: 'ಆಕೆ ಮಾಡಿರುವ ಕೆಲಸ ಹಾಗೂ ಆಕೆ ಜನಮಾನಸದಲ್ಲಿ ಗೌರಿ ಚಿರಾಯು'
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಗುರವಾರಕ್ಕೆ ಸರಿಯಾಗಿ 23 ವರ್ಷ ಕಳೆಯಿತು. ಸೆಪ್ಟಂಬರ್ 5 2017 ರಂದಪ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಾತ್ರಿ ಸುಮಾರು 8.30ಕ್ಕೆ ಪರಶುರಾಮ್ ವಾಗ್ಮೋರೆ ಗುಂಡಿಗೆ ಗೌರಿ ಲಂಕೇಶ್ ಬಲಿಯಾಗಿದ್ದರು

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಗುರವಾರಕ್ಕೆ ಸರಿಯಾಗಿ 23 ವರ್ಷ ಕಳೆಯಿತು. ಸೆಪ್ಟಂಬರ್ 5 2017 ರಂದಪ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಾತ್ರಿ ಸುಮಾರು 8.30ಕ್ಕೆ ಪರಶುರಾಮ್ ವಾಗ್ಮೋರೆ ಗುಂಡಿಗೆ ಗೌರಿ ಲಂಕೇಶ್ ಬಲಿಯಾಗಿದ್ದರು.
ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಅವರ ಸಹೋದರಿ ಕವಿತಾ ಪ್ರತಿಕ್ರಿಯೆ ನೀಡಿದ್ದು, ಗೌರಿ ಹಂತಕರ ಬಗ್ಗೆ ಅಪಾರವಾದ ಕೋಪ, ಆಕ್ರೋಶ ಮನಸ್ಸಿನಲ್ಲಿದೆ, ಆದರೆ ನ್ಯಾಯಾಲಯದಲ್ಲಿ ಅವರ ಮುಖವನ್ನು ನೋಡಲು ಅವರು ಇಷ್ಟ ಪಡಲಿಲ್ಲವಂತೆ, ನನ್ನ ಮನಸ್ಸಲ್ಲಿ ತಡೆಯಲಾಗದಷ್ಟು ಆಕ್ರೋಷ ಕೋಪ ತಾಪ ಇದೆ, ಆದರೆ ಅವರನ್ನು ನೋಡಲು ನನಗೆ ಇಷ್ಟವಿಲ್ಲ., ಹೀಗಾಗಿ ಕೋರ್ಟ್ ವಿಚಾರಣೆಯಲ್ಲಿ ನಾನು ಭಾಗವಹಿಸಲಿಲ್ಲ,
ನಾನು ಗೌರಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಆಕೆ ನನ್ನ ಸಹೋದರಿ ಎನ್ನುವುದಕ್ಕಿಂತ ಉತ್ತಮ ಸ್ನೇಹಿತೆಯಾಗಿದ್ದಳು, ಆದರೆ ನನ್ನಿಂದ ಆಕೆಯನ್ನು ಕಸಿದು ಕೊಂಡಿದ್ದಾರೆ ಎಂದು ಕವಿತಾ ದುಃಖ ವ್ಯಕ್ತ ಪಡಿಸಿದ್ದಾರೆ,
ಕೆಲ ಬಾರಿ ನನಗೆ ಗೌರಿ ಇನ್ನೂ ಬದುಕಿದ್ದಾಳೆ ಎಂಬ ಭಾವನೆ ಬರುತ್ತದೆ, ಆಕೆಯ ಕೆಲಸಗಳ ಬಗ್ಗೆ ಹಲವು ಮಂದಿ ಮಾತನಾಡುವಾಗ ನನಗೆ ಆಕೆ ಜೀವಂತ ಎಂದನಿಸುತ್ತದೆ, ಸಾಮಾಜಿಕ ಮಾಧ್ಯಮಗಳಲ್ಲಿ ಗೌರಿ ಬಗ್ಗೆ ಅಪಾರ ಪ್ರಮಾಣದಲ್ಲಿ ಚರ್ಚೆಯಾಗುತ್ತದೆ,.ಅ ವೇಳೆ ಗೌರಿ ನಮ್ಮ ಸುತ್ತಮುತ್ತ ಎಲ್ಲಿಯೋ ಇರುವಳು ಎನ್ನಿಸುತ್ತೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


