ರಾಜ್ಯ

ಮಾಧ್ಯಮಗಳ ಎದುರೇ ಶಿಷ್ಯನಿಗೆ ಸಿದ್ದರಾಮಯ್ಯ ಕಪಾಳ ಮೋಕ್ಷ!

ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ತೆರೆಳುತ್ತಿದ್ದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಿಷ್ಯನಿಗೆ ಎಲ್ಲರ ಎದುರೇ ಕೆನ್ನೆಗೆ ಬಾರಿಸಿದ್ದಾರೆ.

ಮಾಧ್ಯಮಗಳ ಎದುರೇ ಶಿಷ್ಯನಿಗೆ ಸಿದ್ದರಾಮಯ್ಯ ಕಪಾಳ ಮೋಕ್ಷ!
ಸಿದ್ದರಾಮಯ್ಯ
Published On :

ಮೈಸೂರು: ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ತೆರೆಳುತ್ತಿದ್ದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಿಷ್ಯನಿಗೆ ಎಲ್ಲರ ಎದುರೇ ಕೆನ್ನೆಗೆ ಬಾರಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿ ವಾಪಸ್ ಹೋಗುತ್ತಿದ್ದ ವೇಳೆ ಸಿದ್ದರಾಮಯ್ಯ ಅವರ ಬೆಂಬಲಿಗ ಯಾರಿಗೋ ಫೋನ್ ಮಾಡಿ ಮಾತನಾಡುವಂತೆ ಅವರಿಗೆ ಕೊಟ್ಟಿದ್ದಾರೆ.

ಇದಕ್ಕೆ ಸಿಟ್ಟಿಗೆದ್ದಂತೆ ಕಾಣುತ್ತಿದ್ದ ಸಿದ್ದರಾಮಯ್ಯ ಅವರು ಮೊಬೈಲ್ ತಳ್ಳಿ, ಬೆಂಬಲಿಗನ ಕೆನ್ನೆಗೆ ಬಾರಿಸಿ, ನಡಿಯೋ ಎಂದು ಕರೆದೊಯ್ದಿದ್ದಾರೆ. 

ಕೈ ಮುಖಂಡರ ಸಮ್ಮುಖದಲ್ಲೇ, ವಿಮಾನ ನಿಲ್ದಾಣದ ಆವರಣದಲ್ಲೇ ಬೆಂಬಲಿಗನ ಕೆನ್ನೆಗೆ ಸಿದ್ದರಾಮಯ್ಯ ಹೊಡೆದಿದ್ದು ಚರ್ಚೆಗೆ ಗ್ರಾಸವಾಗಿದೆ.

ಸಿದ್ದರಾಮಯ್ಯ ಶಿಷ್ಯ ಯಾವುದೋ ಅಧಿಕಾರಿಗೆ ಕರೆ ಮಾಡಿ ಶಿಫಾರಸು ಮಾಡುವಂತೆ ಹೇಳಿ ಸಿದ್ದರಾಮಯ್ಯ ಕಿವಿಗೆ ಫೋನ್ ಇಟ್ಟಿದ್ದಾರೆ. ಇದರಿಂದ ಕಿರಿಕಿರಿಗೊಳಗಾದ ಸಿದ್ದರಾಮಯ್ಯ ಮೊಬೈಲ್ ತಳ್ಳಿ ಆತನ ಕೆನ್ನೆಗೆ ಬಾರಿಸಿದ್ದಾರೆ. ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.