ಮುಖ್ಯಮಂತ್ರಿ ಚಂದ್ರು, ಚಂಪಾ ಸೇರಿ 70 ಮಂದಿಗೆ ಕೆಂಪೇಗೌಡ ಪ್ರಶಸ್ತಿ
2019ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರಕಟವಾಗಿದ್ದು ಮುಖ್ಯಮಂತ್ರಿ ಚಂದ್ರು, ಚಂದ್ರಶೇಖರ ಪಾಟೀಲ, ಶಿವರಾಮಯ್ಯ ಸೇರಿ 70 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರು:2019ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರಕಟವಾಗಿದ್ದು ಮುಖ್ಯಮಂತ್ರಿ ಚಂದ್ರು, ಚಂದ್ರಶೇಖರ ಪಾಟೀಲ, ಶಿವರಾಮಯ್ಯ ಸೇರಿ 70 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸೆಪ್ಟೆಂಬರ್ 4ರಂದು ಡಾ. .ರಾಜ್ಕುಮಾರ್ ಗಾಜಿನ ಮನೆಯಲ್ಲಿ ನಡೆಯುವ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಫಾಲಿಕೆ (ಬಿಬಿಎಂಪಿ) ಪ್ರತಿವರ್ಷ ನಿಡುವ ಈ ಪ್ರಶಸ್ತಿ ಆಯ್ಕೆಗೆ ಈ ಬಾರಿ ನಿವೃತ್ತ ನ್ಯಾಯಮೂರ್ತಿ ಸದಾಶಿವ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.
ಕೆಂಪೇಗೌಡ ಪ್ರಶಸ್ತಿಯು 25 ಸಾವಿರ ನಗದು ಹಾಗೂ ಕೆಂಪೇಗೌಡರ ಸ್ಮರಣಿಕೆಯನ್ನು ಹೊಂದಿರುತ್ತದೆ.
ಪ್ರಶಸ್ತಿ ಪಡೆದ ಪ್ರಮುಖರ ಪಟ್ಟಿ ಹೀಗಿದೆ-
ಮುಖ್ಯಮಂತ್ರಿ ಚಂದ್ರು (ಸಿನಿಮಾ)
ಚಂಪಾ (ಸಾಹಿತ್ಯ)
ಪ್ರೊ. ಶಿವರಾಮಯ್ಯ (ಸಾಹಿತ್ಯ)
ಅಬ್ದುಲ್ ಬಷೀರ್ (ಸಾಹಿತ್ಯ)
ಪ್ರೊ.ರವಿವರ್ಮ ಕುಮಾರ್ (ಕಾನೂನು)
ಬಿಂದುರಾಣಿ (ಕ್ರೀಡೆ)
ಶಾಂತರಾಮಮಮೂರ್ತಿ(ಕ್ರೀಡೆ)
ಸೈಯ್ಯದ್ ಇಬಯಾಯತುಲ್ಲಾ (ಅಂಗವಿಕಲ ಕ್ರೀಡಾಪಟು)
ಕುಮಾರಿ ಪ್ರತ್ಯಕ್ಷಾ- (ಬಾಲ ಪ್ರತಿಭೆ)
ಪ್ರೊ. ನಾಗೇಶ್ ಬೆಟ್ಟಕೋಟೆ (ರಂಗಭೂಮಿ)
ಮಂಜುಳಾ ಗುರುರಾಜ್ (ಸಂಗೀತ)
ಡಿ.ರೂಪಾ (ಸರ್ಕಾರಿ ಸೇವೆ)
ಅನುಚೇತ್ ಮತ್ತು ತಂಡ (ಗೌರಿ ಹತ್ಯೆ ಪ್ರಕರಣ ಬೇಧಿಸಿದ್ದಕ್ಕೆ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


