ರಾಜ್ಯ

ಶ್ರೀಗುರು ಭಾಗವತದ ಕನ್ನಡ ಅವತರಣಿಕೆ ಬಿಡುಗಡೆ

ಗುರು-ಶಿಷ್ಯರ ನಡುವಿನ ಸಂಬಂಧ, ಗುರುತತ್ವ ಇತ್ಯಾದಿ ಮಹತ್ವಪೂರ್ಣ ವಿಷಯಗಳನ್ನೊಳಗೊಂಡ ಸಂಗ್ರಹ ಶ್ರೀ ಗುರು ಭಾಗವತದ ಐದು ಸಂಪುಟಗಳ ಕನ್ನಡ ಅವತರಣಿಕೆಯನ್ನು ಶಿರಡಿ ಸಾಯಿ ಮಂಗಲಂ ಟ್ರಸ್ಟ್ (ಹೊಸೂರು) ವತಿಯಿಂದ ಬಿಡುಗಡೆ ಮಾಡಲಾಯಿತು.

ಶ್ರೀಗುರು ಭಾಗವತದ ಕನ್ನಡ ಅವತರಣಿಕೆ ಬಿಡುಗಡೆ
ಗುರು ಭಾಗವತ ಕನ್ನಡ ಅವತರಣಿಕೆ
Published On :

ಬೆಂಗಳೂರು: ಮಾನವರ ಜೀವನದಲ್ಲಿ ಸದ್ಗುರುಗಳ ಮಹತ್ವ ಹಾಗೂ ಪಾತ್ರ, ಗುರು-ಶಿಷ್ಯರ ನಡುವಿನ ಸಂಬಂಧ, ಗುರುತತ್ವ ಇತ್ಯಾದಿ ಮಹತ್ವಪೂರ್ಣ ವಿಷಯಗಳನ್ನೊಳಗೊಂಡ ಸಂಗ್ರಹ ಶ್ರೀ ಗುರು ಭಾಗವತದ ಐದು ಸಂಪುಟಗಳ ಕನ್ನಡ ಅವತರಣಿಕೆಯನ್ನು ಭಾನುವಾರ ಶ್ರೀ ಶಿರಡಿ ಸಾಯಿ ಮಂಗಲಂ ಟ್ರಸ್ಟ್ (ಹೊಸೂರು) ವತಿಯಿಂದ ಬಿಡುಗಡೆ ಮಾಡಲಾಯಿತು. ಖ್ಯಾತ ಚಿಂತಕ ಚಂದ್ರ ಭಾನು ಸತ್ಪಥಿಯವರು ಇದನ್ನು ರಚಿಸಿದ್ದಾರೆ.

ಶ್ರೀ ಶಿರಡಿ ಸಾಯಿ ಮಂಗಲಂ ಟ್ರಸ್ಟ್ ಹಾಗೂ ಪ್ರಸನ್ನ ಮಿಯಾಪುರಂ ಮತ್ತು ಅವರ ಪತ್ನಿ ರಶ್ಮಿ ಮಿಯಾಪುರಂ ಅವರ ವಿಶೇಷ ಕಾಳಜಿಯಿಂದ ಇದೇ ಮೊದಲ ಬಾರಿಗೆ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲಾಗಿದೆ.

ಡಾ.ಸತ್ಪಥಿಯವರು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಮಾಜಿ ಮಹಾನಿರ್ದೇಶಕರು ಮತ್ತು ಶ್ರೀ ಸಾಯಿಬಾಬಾ ಅವರ ಭಕ್ತರು. ತಮ್ಮ ಸೇವಾವಧಿಯಲ್ಲಿ ತಮ್ಮ ಪ್ರಶಂಸನೀಯ ಸೇವೆಗಾಗಿ ಮತ್ತು ಬಾಬಾರವರ ಮೇಲಿನ ಪ್ರೌಢ ಬರಹಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಜತೆಗೆ ಉತ್ತಮ ಜೀವನ ಹಾಗೂ ಆಧ್ಯಾತ್ಮಿಕ ಮುಕ್ತಿಗೆ ಗುರುವಿನ ಮಾರ್ಗದರ್ಶನದ ಅಗತ್ಯತೆಯ ಬಗೆಗೂ ಅವರು ಕೃತಿಗಳನ್ನು ರಚಿಸಿದ್ದಾರೆ.

ಶ್ರೀ ಗುರು ಭಾಗವತದ ಏಳು ಸಂಪುಟಗಳನ್ನು ಅವರು ರಚಿಸಿದ್ದು, ಮೂಲತಃ ಒಡಿಯಾ ಭಾಷೆಯಲ್ಲಿರುವ ಈ ಕೃತಿ ಬಳಿಕ ಇಂಗ್ಲಿಷ್, ಹಿಂದಿ, ಅಸ್ಸಾಮಿ, ಮರಾಠಿ, ಬಂಗಾಳಿ ಮತ್ತು ತೆಲುಗು ಭಾಷೆಗೆ ತರ್ಜುಮೆಗೊಂಡಿದೆ. ಐದು ಸಂಪುಟಗಳ ಜತೆಗೆ, ಶ್ರೀ ಗುರು ಭಾಗವತದ ವಿಶೇಷ ಉಲ್ಲೇಖಗಳನ್ನು ಒಳಗೊಂಡ ವಿಶೇಷ ಡೈರಿಯನ್ನು ಕೂಡಾ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಖ್ಯಾತ ಕನ್ನಡ ಬರಹಗಾರ ಶ್ರೀ. ಬಾಬು ಕೃಷ್ಣಮೂರ್ತಿ, ಶ್ರೀ. ವರದರಾಜನ್ ಅಯ್ಯಂಗಾರ್ ಮತ್ತು ಶ್ರೀ. ಅನಂತರಾಮು ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು. ಕನ್ನಡಿಗರಿಗೆ ಪ್ರಯೋಜನವಾಗುವ ರೀತಿಯಲ್ಲಿ ಈ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ಬಗ್ಗೆ ಲೇಖಕರು ಸಂತಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.