ರಾಜ್ಯ

ಬೆಂಗಳೂರು: ಅನೈತಿಕ ಸಂಬಂಧ ಪ್ರಶ್ನಿಸಿದ ಪ್ರೇಯಸಿಯ ಗಂಡನಿಗೆ ಗುಂಡಿಕ್ಕಿ ಹತ್ಯೆ!

ಅನೈತಿಕ ಸಾಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪ್ರೇಯಸಿಯ ಗಂಡನಿಗೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

ಬೆಂಗಳೂರು: ಅನೈತಿಕ ಸಂಬಂಧ ಪ್ರಶ್ನಿಸಿದ ಪ್ರೇಯಸಿಯ ಗಂಡನಿಗೆ ಗುಂಡಿಕ್ಕಿ ಹತ್ಯೆ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಅನೈತಿಕ ಸಾಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪ್ರೇಯಸಿಯ ಗಂಡನಿಗೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು  ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

ಆನೇಕಲ್ ತಾಲೂಕಿನ ಶ್ರೀರಾಂಪುರದಲ್ಲಿ ಸಂಭವಿಸಿದ ಘಟನೆಯಲ್ಲಿ ರಮೇಶ್ ಕೊಲೆಯಾಗಿದ್ದು ಈತನನ್ನು ಮುನಿಯಪ್ಪ ಎಂಬಾತ ಹತ್ಯೆಮಾಡಿದ್ದಾನೆ.ರಾತ್ರಿ ವೇಳೆ ಮೊಬೈಲ್ ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ರಮೇಶ್ ಮೇಲೆ ಮುನಿಯಪ್ಪ  ಸಿಂಗಲ್​ ಬ್ಯಾರೆಲ್ ಬಂದೂಕಿನಿಂದ ಶೂಟ್ ಮಾಡಿದ್ದಾನೆ.

ಮೃತ ರಮೇಶ್ ಪತ್ನಿಯೊಡನೆ ಮುನಿಯಪ್ಪ ಸಂಬಂಧ ಹೊಂದಿದ್ದ ಎನ್ನುವುದಾಗಿ ಹೇಳಲಾಗಿದ್ದು ಈ ಸಂಬಂಧ ರಮೇಶ್ ಜಿಗಣಿ ಪೋಲೀಸರಿಗೆ ದೂರು ಸಲ್ಲಿಸಿದ್ದರು. 

ಕಳೆದ ಎರಡು ವರ್ಷಗಳಿಂದ ಅವರಿಬ್ಬರ ನಡುವೆ ಅನೈತಿಕ ಸಂಬಂಧವಿತ್ತು ಎಂದು ಗ್ರಾಮಸ್ಥರು ವಿವರಿಸಿದ್ದು ಈ ಕುರಿತಂತೆ ರಮೇಶ್ ಹಾಗೂ ಮುನಿಯಪ್ಪ ನಡುವೆ ಆಗಾಗ ವಾಗ್ವಾದಗಳು ನಡೆದಿದ್ದವು. ಇಬ್ಬರಿಗೆ ದ್ವೇಷವಿತ್ತು. ಅದೇ ದ್ವೇಷದಿಂದ ಮುನಿಯಪ್ಪ ಈ ಕೃತ್ಯ ಎಸಗಿದ್ದಾನೆಂದು ಹೇಳಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಜಿಗಣಿ ಪೋಲೀಸರು ಆರೋಪಿಯನ್ನು ಬಂದೂಕಿನ ಸಮೇತ ವಶಕ್ಕೆ ಪಡೆದಿದ್ದು ತನಿಖೆ ಕೈಗೊಂಡಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.