ರಾಜ್ಯ

ಆರ್​ಟಿಐ ಕಾರ್ಯಕರ್ತನಿಗೆ ತಪ್ಪು ಮಾಹಿತಿ: ಕೊಳ್ಳೇಗಾಲ ನಗರಸಭೆ ಆಯುಕ್ತರಿಗೆ ದಂಡ

ತಪ್ಪು ಮಾಹಿತಿ ಹಾಗೂ ವಿಳಂಬ ನೀತಿ ಅನುಸರಿಸಿದ್ದಕ್ಕಾಗಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಗರಸಭೆ ಆಯುಕ್ತರಿಗೆ ದಂಡ ವಿಧಿಸಲಾಗಿದೆ.

ಆರ್​ಟಿಐ ಕಾರ್ಯಕರ್ತನಿಗೆ ತಪ್ಪು ಮಾಹಿತಿ: ಕೊಳ್ಳೇಗಾಲ ನಗರಸಭೆ ಆಯುಕ್ತರಿಗೆ ದಂಡ
ಆರ್​ಟಿಐ ಕಾರ್ಯಕರ್ತನಿಗೆ ತಪ್ಪು ಮಾಹಿತಿ: ಕೊಳ್ಳೇಗಾಲ ನಗರಸಭೆ ಆಯುಕ್ತರಿಗೆ ದಂಡ
Published On :

ಚಾಮರಾಜನಗರ: ತಪ್ಪು ಮಾಹಿತಿ ಹಾಗೂ ವಿಳಂಬ ನೀತಿ ಅನುಸರಿಸಿದ್ದಕ್ಕಾಗಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಗರಸಭೆ ಆಯುಕ್ತರಿಗೆ ದಂಡ ವಿಧಿಸಲಾಗಿದೆ.

ತಪ್ಪು ಮಾಹಿತಿ ಹಾಗೂ ವಿಳಂಬ ನೀತಿ ಅನುಸರಿಸಿದ್ದಕ್ಕಾಗಿ ಕೊಳ್ಳೇಗಾಲ ನಗರಸಭೆ ಆಯುಕ್ತ ನಾಗಶೆಟ್ಟಿ ಎಂಬುವವರಿಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ. ದಂಡ ವಿಧಿಸಿದೆ.

ಕೊಳ್ಳೇಗಾಲದಲ್ಲಿನ ಕಲ್ಯಾಣಮಂಟಪಗಳ ಸಂಖ್ಯೆ, ಮಾಂಸದಂಗಡಿಗಳ ಸಂಖ್ಯೆ ಕುರಿತು ಆರ್​​ಟಿಐ ಕಾರ್ಯಕರ್ತ ದಶರಥ ಎಂಬವರು ಕೇಳಿದ್ದ ಪ್ರಶ್ನೆಗೆ ಆಯುಕ್ತರು ತಪ್ಪು ಮಾಹಿತಿ ನೀಡಿದ್ದಲ್ಲದೇ, ಮಾಹಿತಿ ನೀಡಲು ವಿಳಂಬ ಮಾಡಿದ್ದರು. ಈ ಸಂಬಂಧ ಸಾವ೯ಜನಿಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಮಂಜುನಾಥ್ ಎರಡು ಪ್ರಕರಣಗಳ ವಾದ ಪ್ರತಿವಾದ ಆಲಿಸಿ ಎರಡೂ ಪ್ರಕರಣಗಳಿಗೆ ತಲಾ 5 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.10 ಸಾವಿರ ರೂ. ದಂಡವನ್ನು ಆಯುಕ್ತರ ಮಾಸಿಕ ಸಂಬಳದಲ್ಲಿ 2 ಕಂತುಗಳಲ್ಲಿ ಪಡೆಯಲು ಆದೇಶಿಸಲಾಗಿದೆ.

ವರದಿ: ಗೂಳಿಪುರ ನಂದೀಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.